Site icon Vistara News

G20 Summit 2023: ಜಿ20 ಶೃಂಗಸಭೆ ಶನಿವಾರದ ಇಡೀ ದಿನದ ಕಾರ್ಯಕ್ರಮ ಪಟ್ಟಿ ಇಲ್ಲಿದೆ…

Bharat Mantapam

ನವದೆಹಲಿ: ದೇಶದ ರಾಜಧಾನಿ ದಿಲ್ಲಿಯಲ್ಲಿ (New Delhi) ಸೆಪ್ಟೆಂಬರ್ 9 ಮತ್ತು 10ರಂದು 18ನೇ ಜಿ20 ಶೃಂಗಸಭೆ ನಡೆಯಲಿದ್ದು(G20 Summit 2023), ಕ್ಷಣಗಣನೆ ಶುರುವಾಗಿದೆ. ಅಮೆರಿಕ(America), ಇಂಗ್ಲೆಂಡ್(England), ಫ್ರಾನ್ಸ್(France) ನಾಯಕರೂ ಸೇರಿದಂತೆ ವಿಶ್ವದ ಪ್ರಮುಖ ನಾಯಕರೆಲ್ಲರೂ ದಿಲ್ಲಿಗೆ ಆಗಮಿಸಿದ್ದಾರೆ. ಹಲವು ನಾಯಕರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಸೆಪ್ಟೆಂಬರ್ 9, ಶನಿವಾರ ಬೆಳಗ್ಗೆ ವಿಧ್ಯುಕ್ತವಾಗಿ ಜಿ20 ಶೃಂಗಸಭೆಗೆ ಚಾಲನೆ ದೊರೆಯಲಿದೆ.

ಸೆಪ್ಟೆಂಬರ್ 9, ಶನಿವಾರ ಇಡಿ ದಿನದ ಕಾರ್ಯಕ್ರಮ ಪಟ್ಟಿ ಇಲ್ಲಿದೆ…

-ಬೆಳಗ್ಗೆ 9.30 – 10.30: ಭಾರತ್ ಮಂಟಪದಲ್ಲಿ ವಿವಿಧ ಮುಖ್ಯಸ್ಥರ ಆಗಮನ – ಹಂತ-2 ರ “ಟ್ರೀ ಆಫ್ ಲೈಫ್ ಫೋಯರ್” ನಲ್ಲಿ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಪ್ರಧಾನ ಮಂತ್ರಿಯವರ ಫೋಟೋ ಸೆಷನ್ – ಲೆವೆಲ್-2 ನಾಯಕರ ಲಾಂಜ್‌ನಲ್ಲಿ ರಾಷ್ಟ್ರಗಳ ಮುಖ್ಯಸ್ಥರ ಸಭೆ

-ಬೆಳಗ್ಗೆ 10.30 – 13.30: ಮೊದಲ ಅಧಿವೇಶನ: ಭಾರತ ಮಂಟಪದ ಲೆವೆಲ್-2 ಶೃಂಗಸಭೆ ಸಭಾಂಗಣದಲ್ಲಿ “ಒಂದು ಭೂಮಿ” ವಿಷಯದ ಕುರಿತು ಸಭೆ – ನಂತರ ಊಟದ ವಿರಾಮ

-ಮಧ್ಯಾಹ್ನ ಗಂಟೆ. 13.30 – 15.00: ಭಾರತ ಮಂಟಪದ ಹಂತ-ಒಂದರಲ್ಲಿ ದ್ವಿಪಕ್ಷೀಯ ಚರ್ಚೆಗಳು

-15.00-16.45 ಮಧ್ಯಾಹ್ನ: ಎರಡನೇ ಸೆಷನ್: ಹಂತ – 2 ಶೃಂಗಸಭೆ ಸಭಾಂಗಣದಲ್ಲಿ “ಒಂದು ಕುಟುಂಬ” ಕುರಿತು ಚರ್ಚೆ

ನಂತರ ಹೋಟೆಲ್‌ಗೆ ವಾಸ್ತವ್ಯಕ್ಕೆ ವಾಪಸ್ ಆಗಲಿರುವ ಅತಿಥಿಗಳು

-ರಾತ್ರಿ 19.00-20.00: ರಾಷ್ಟ್ರಪತಿ ಆಹ್ವಾನ ನೀಡಿರುವ ಔತಣಕೂಟಕ್ಕೆ ಮುಖ್ಯಸ್ಥರ ಆಗಮನ – ಫೋಟೋ ಸೆಷನ್

-ರಾತ್ರಿ 20.00-21.15 : ಭೋಜನ ಹಾಗೂ ಚರ್ಚೆ

-ರಾತ್ರಿ 21.10-21.45 : ಭಾರತ್ ಮಂಡಪಂ ಹಂತ – 2ಲಾಂಜ್ ನಲ್ಲಿ ನಾಯಕರು ಮತ್ತು ಪ್ರತಿನಿಧಿಗಳ ಸಭೆ

ನಾಳೆ ವಿಧ್ಯುಕ್ತವಾಗಿ ಜಿ20 ಶೃಂಗ ಸಭೆ ಆರಂಭ

ಜಿ20 ಶೃಂಗ ಸಭೆಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ವಿಶ್ವ ನಾಯಕರ ಸಮಾಗಮ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿದೆ. ಈ ವೇಳೆ, ಜಾಗತಿಕ ಸಮಸ್ಯೆಗಳು ಕುರಿತು ಚಿಂತನ ಮಂಥನ ನಡೆಯಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಟ್ವೀಟ್ ಮಾಡಿ, 18ನೇ ಜಿ20 ಶೃಂಗಸಭೆ ದಿಲ್ಲಿಯ ಐಕಾನಿಕ್ ಭಾರತ್ ಮಂಟಪಂನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ರಷ್ಯಾ ಹಾಗೂ ಚೀನಾ ಅಧ್ಯಕ್ಷರನ್ನು ಹೊರತುಪಡಿಸಿ ವಿಶ್ವದ ಪ್ರಮುಖ ನಾಯಕರೆಲ್ಲರೂ ಈಗಾಗಲೇ ದಿಲ್ಲಿ ತಲುಪಿದ್ದಾರೆ. ಸೆಪ್ಟೆಂಬರ್ 9ರಂದು ವಿಶ್ವ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಔತಣಕೂಟವನ್ನೂ ಏರ್ಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: G20 Summit 2023: ಜಿ20 ಶೃಂಗಸಭೆ ಆರಂಭಕ್ಕೆ ಕ್ಷಣಗಣನೆ! ನಾಳೆ ದಿಲ್ಲಿಯಲ್ಲಿ ವಿಶ್ವನಾಯಕರ ಸಮಾಗಮ

ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ಸೆಪ್ಟೆಂಬರ್ 9 ಮತ್ತು 10ರಂದು ದಿಲ್ಲಿಯ ಐಕಾನಿಕ್ ಭಾರತ್ ಮಂಟಪದಲ್ಲಿ 18ನೇ ಜಿ20 ಶೃಂಗಸಭೆಯನ್ನು ಆಯೋಜಿಸಲು ಭಾರತಕ್ಕೆ ಸಂತೋಷವಾಗಿದೆ. ಇದು ಭಾರತ ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ವಿಶ್ವ ನಾಯಕರೊಂದಿಗೆ ಫಲಪ್ರಧ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ನವದೆಹಲಿ ಜಿ20 ಶೃಂಗಸಭೆಯು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version