ನವದೆಹಲಿ: ಒಂದು ದೇಶ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಪರಿಕಲ್ಪನೆಯಡಿ ಜಿ20 ಶೃಂಗ ಸಭೆಯನ್ನು (G20 Summit 2023) ಆಯೋಜಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ನಾನು ಇದಕ್ಕಾಗಿ ಪ್ರಧಾನಿ ಮೋದಿ (PM Narendra Modi)ಅವರನ್ನು ಅಭಿನಂದಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರು ಹೇಳಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಮತ್ತು ಅನೇಕ ವಿಧಗಳಲ್ಲಿಈ ಪರಿಕಲ್ಪನೆ ಈ ಜಿ20 ಶೃಂಗಸಭೆಯ ಕೇಂದ್ರಬಿಂದುವಾಗಿದೆ. ನಾವು ಇಂದು ಮಾತನಾಡುತ್ತಿರುವ ಈ ಪಾಲುದಾರಿಕೆಯ ಅನೇಕ ವಿಧಗಳಲ್ಲಿ ಕೇಂದ್ರಬಿಂದುವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಜಿ20 ಶೃಂಗಸಭೆಯ ಸಂದರ್ಭದಲ್ಲಿ ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಎಕನಾಮಿಕ್ಸ್ ಕಾರಿಡಾರ್ ಪಾಲುದಾರಿಕೆಯಲ್ಲಿ ಸಭೆಯಲ್ಲಿ ಅಮೆರಿಕ ಅಧ್ಯಕ್ಷರು ಪಾಲ್ಗೊಂಡಿದ್ದರು.
ಮತ್ತೆ ಅಮೆರಿಕಕ್ಕೆ ಜಿ20 ಅಧ್ಯಕ್ಷತೆ! ಚೀನಾದಿಂದ ತೀವ್ರ ಆಕ್ಷೇಪ
2026ರಲ್ಲಿ ಅಮೆರಿಕವು (America) ಜಿ20 ಶೃಂಗಸಭೆಯನ್ನು (G20 Summit ) ಆಯೋಜಿಸಲು ಮುಂದಾಗಿರುವುದಕ್ಕೆ ಚೀನಾ (China) ಆಕ್ಷೇಪಿಸಿದೆ. ಈ ಕುರಿತು ಈಗಾಗಲೇ ಜೋ ಬೈಡೆನ್ (President Joe Biden) ಆಡಳಿತವು ಬಹಿರಂಗವಾಗಿ ಹೇಳಿದ್ದು, ಚೀನಾ ತನ್ನ ಅಸಮಾಧಾನವನ್ನು ಹೊರ ಹಾಕಿದೆ ಎಂಬ ಸಂಗತಿಯನ್ನು ಈ ಬೆಳವಣಿಗೆ ಗೊತ್ತಿರವವರು ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಜಿ20 ಸದಸ್ಯರ ನಡುವೆ ಜಿ20 ಅಧ್ಯಕ್ಷತೆಯು ರೊಟೇಟ್ ಆಗುತ್ತದೆ. ಇದರಲ್ಲಿ ವಿಶ್ವ ನಾಯಕರ ವಾರ್ಷಿಕ ಸಭೆಗಳು ಸೇರಿರುತ್ತವೆ. ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಬಳಿಕ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಳ್ಳುವುದಾಗಿ ಈಗಾಗಲೇ ಅಮೆರಿಕ ಘೋಷಣೆ ಮಾಡಿದೆ. ಆದರೆ, ಅಮೆರಿಕದ ಈ ನಡೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸುದ್ದಿಯನ್ನೂ ಓದಿ: G20 Summit 2023: ಜಿ20 ವೇಳೆ ಗಮನ ಸೆಳೆದ ಕೊನಾರ್ಕ್ ಚಕ್ರ, ಬೈಡೆನ್‌ಗೂ ಪರಿಚಯ ಮಾಡಿದ ಮೋದಿ; ಏನಿದು?
ಅಮೆರಿಕ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಚೀನಾಗೆ ರಷ್ಯಾದ ಬೆಂಬಲವಿದೆ. ಒಟ್ಟಾರೆ ಈ ವಿಷಯವು ಇನ್ನು ಆರಂಭಿಕ ಹಂತದಲ್ಲಿರುವುದರಿಂದ ಯಾರೂ ಅಷ್ಟಾಗಿ ಗಂಭೀರವಾಗಿಲ್ಲ ಎಂಬ ಸಂಗತಿಯನ್ನು ಹೊರ ಹಾಕಲಾಗಿದೆ. ಫೈನಾನ್ಶಿಯಲ್ ಟೈಮ್ಸ್ ಈ ಕುರಿತು ಮೊದಲ ಬಾರಿಗೆ ವರದಿ ಮಾಡಿದೆ.