ನವದೆಹಲಿ: ಭಾರತವು ಜಿ20 ಶೃಂಗಸಭೆಯನ್ನು (G20 Summit 2023) ಯಶಸ್ವಿಯಾಗಿ ಸಂಘಟಿಸಿದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್(Bollywood Actor Shah Rukh Khan) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಸದ್ಯ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಜವಾನ್ ಚಿತ್ರದ ನಾಯಕ ನಟ ಶಾರುಖ್ ಖಾನ್ ಅವರು, ಭಾರತದ ಜಿ20 ಪ್ರೆಸಿಡೆನ್ಸಿಯ ಯಶಸ್ಸಿಗಾಗಿ ಮತ್ತು ಪ್ರಪಂಚದ ಜನರಿಗೆ ಉತ್ತಮ ಭವಿಷ್ಯಕ್ಕಾಗಿ ರಾಷ್ಟ್ರಗಳ ನಡುವೆ ಏಕತೆಯನ್ನು ಬೆಳೆಸುವುದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
Congratulations to Hon. PM @narendramodi ji for the success of India’s G20 Presidency and for fostering unity between nations for a better future for the people of the world.
— Shah Rukh Khan (@iamsrk) September 10, 2023
It has brought in a sense of honour and pride into the hearts of every Indian. Sir, under your… https://t.co/x6q4IkNHBN
ಯಶಸ್ವಿಯಾಗಿ ನಡೆದ ಜಿ20 ಶೃಂಗಸಭೆಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಗೌರವ ಮತ್ತು ಹೆಮ್ಮೆಯ ಭಾವವನ್ನು ತಂದಿದೆ. ಸರ್, ನಿಮ್ಮ ನಾಯಕತ್ವದಲ್ಲಿ, ನಾವು ಏಕಾಂಗಿಯಾಗಿಯಲ್ಲ, ಏಕತೆಯಲ್ಲಿ ಏಳಿಗೆ ಹೊಂದುತ್ತೇವೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ… ಎಂದು ಎಕ್ಸ್ ವೇದಿಕೆಯಲ್ಲಿ(ಈ ಹಿಂದೆ ಟ್ವಿಟರ್) ನಟ ಶಾರುಖ್ ಬರೆದುಕೊಂಡಿದ್ದಾರೆ.
ಬ್ರೆಜಿಲ್ ಅಧ್ಯಕ್ಷರನ್ನು ಮೋಡಿ ಮಾಡಿದ ಆರ್ ಆರ್ ಆರ್ ಸಿನಿಮಾ
ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ (Luiz Inacio Lula da Silva) ಅವರು ಎಸ್ಎಸ್ ರಾಜಮೌಳಿ ಅವರ ಹಿಟ್ ಚಿತ್ರ ಆರ್‌ಆರ್‌ಆರ್ ಸಿನಿಮಾವನ್ನು ಜಿ 20 ಶೃಂಗಸಭೆಯಲ್ಲಿ (G20 Summit 2023) ಶ್ಲಾಘಿಸಿದ್ದಾರೆ. ಜಿ20 ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ನಡೆದಿದೆ. ವಿವಿಧ ದೇಶದ ಗಣ್ಯರು ಆಗಮಿಸಿದ್ದರು. ಲೂಯಿಸ್ ‘ಆರ್‌ಆರ್‌ಆರ್’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ರಾಜಮೌಳಿ ಕೂಡ ಪ್ರತಿಕ್ರಿಯಿಸಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಮಾತನಾಡಿ ʻʻಆರ್‌ಆರ್‌ಆರ್’ ಮೂರು ಗಂಟೆಗಳ ಫಿಚರ್ ಚಲನಚಿತ್ರವಾಗಿದೆ. ತಮಾಷೆಯ ದೃಶ್ಯಗಳನ್ನು ಹೊಂದಿದೆ. ಬ್ರಿಟಿಷರ ಆಡಳಿತದ ಬಗ್ಗೆ ಇದೆ. ಚಿತ್ರವು ಪ್ರಪಂಚದಾದ್ಯಂತ ಬ್ಲಾಕ್‌ಬಸ್ಟರ್ ಆಗಬೇಕು. ನನ್ನೊಂದಿಗೆ ಮಾತನಾಡುವ ಪ್ರತಿಯೊಬ್ಬರಿಗೂ, ನಾನು ಹೇಳುವ ಮೊದಲ ವಿಷಯವೆಂದರೆ, ‘ಆರ್‌ಆರ್‌ಆರ್’ ಸಿನಿಮಾ ನೋಡಿದ್ದೀರ? ಎಂದು. ಹಾಗಾಗಿ, ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ನಾನು ಅಭಿನಂದಿಸುತ್ತೇನೆ ಏಕೆಂದರೆ ಅದು ನನ್ನನ್ನು ಮೋಡಿ ಮಾಡಿದೆʼʼಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: G20 Summit 2023: ಚೀನಾಗೆ ಭಾರತ ಸೆಡ್ಡು, ಅಸ್ತಿತ್ವಕ್ಕೆ ಬಂತು ಮಧ್ಯ ಪ್ರಾಚ್ಯ ಆರ್ಥಿಕ ಕಾರಿಡಾರ್! ಪಾಕಿಸ್ತಾನಕ್ಕೆ ದಿಗಿಲು
ಲೂಯಿಸ್ ಇನಾಸಿಯೊ ಅವರ ಹೊಗಳಿಕೆಗೆ ಪ್ರತಿಕ್ರಿಯಿಸಿದ ಎಸ್‌ಎಸ್ ರಾಜಮೌಳಿ ʻʻನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು. ನೀವು ಭಾರತೀಯ ಸಿನಿಮಾವನ್ನು ಉಲ್ಲೇಖಿಸಿದ್ದೀರಿಮ ಮತ್ತು ಆರ್‌ಆರ್ ಸಿನಿಮಾವನ್ನು ಆನಂದಿಸಿದ್ದೀರಿ. ಇದು ಹೃದಯಸ್ಪರ್ಶಿಯಾಗಿದೆʼʼಎಂದು ಟ್ವೀಟ್ ಮೂಲಕ ಧನ್ಯವಾದ ಸೂಚಿಸಿದ್ದಾರೆ.