ಹೊಸದಿಲ್ಲಿ: ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭಗೊಂಡಿರುವ G20 ಶೃಂಗಸಭೆಯ (G20 Summit 2023) ಮೊದಲ ದಿವಸ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಎರಡನೇ ದಿನದ ಕಾರ್ಯಕ್ರಮಗಳು ಇಂದು ಸಂಪನ್ನಗೊಳ್ಳಲಿವೆ.
ಹಲವು ದ್ವಿಪಕ್ಷೀಯ ಸಭೆಗಳು ನಡೆದು G20 ಶೃಂಗ ಸಭೆಯ ನಿರ್ಣಯಗಳು ನಿನ್ನೆ ಅಂಗೀಕಾರವಾಗಿದ್ದವು. ಇಂದಿನ ಕಾರ್ಯಕ್ರಮಗಳ ಪಟ್ಟಿ ಇಂತಿದೆ:
- 8.15ರಿಂದ 9.00ರವರೆಗೆ ರಾಜ್ಘಾಟ್ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನ. ರಾಜ್ಘಾಟ್ನಲ್ಲಿರುವ ನಾಯಕರ ಲಾಂಜ್ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುವ ಕಾರ್ಯಕ್ರಮ.
- 9.00-9.20ರ ನಡುವೆ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪಾರ್ಚನೆ. ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ಪ್ರದರ್ಶನ.
- 9.20ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ನಾಯಕರ ಲೌಂಜ್ಗೆ ತೆರಳುತ್ತಾರೆ. ಅಲ್ಲಿಂದ ಪ್ರತ್ಯೇಕವಾಗಿ ಭಾರತ ಮಂಟಪಕ್ಕೆ ನಿರ್ಗಮನ.
- 9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ.
- 10.15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಸಸಿ ನೆಡುವ ಕಾರ್ಯಕ್ರಮ.
- 10.30-12.30ರವರೆಗೆ ಸೆಷನ್ III: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪ ಹಂತ 2ರಲ್ಲಿ ಒಂದು ಭವಿಷ್ಯ (one future) ಕುರಿತು ಸಮಾವೇಶ
ಇದನ್ನೂ ಓದಿ: G20 Summit 2023: ರಾಷ್ಟ್ರಪತಿ ನೀಡಿದ್ದ ಔತಣಕೂಟದ ಮೆನು ಫುಲ್ ವೈರಲ್!