Site icon Vistara News

G20 Summit 2023: ಜಿ20 ಶೃಂಗಸಭೆ ಆರಂಭಕ್ಕೆ ಕ್ಷಣಗಣನೆ! ನಾಳೆ ದಿಲ್ಲಿಯಲ್ಲಿ ವಿಶ್ವನಾಯಕರ ಸಮಾಗಮ

G20 Summit 2023

ನವದೆಹಲಿ: ಜಿ20 ಶೃಂಗ ಸಭೆಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ವಿಶ್ವ ನಾಯಕರ ಸಮಾಗಮ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿದೆ. ಈ ವೇಳೆ, ಜಾಗತಿಕ ಸಮಸ್ಯೆಗಳು ಕುರಿತು ಚಿಂತನ ಮಂಥನ ನಡೆಯಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಟ್ವೀಟ್ ಮಾಡಿ, 18ನೇ ಜಿ20 ಶೃಂಗಸಭೆ ದಿಲ್ಲಿಯ ಐಕಾನಿಕ್ ಭಾರತ್ ಮಂಟಪಂನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ರಷ್ಯಾ ಹಾಗೂ ಚೀನಾ ಅಧ್ಯಕ್ಷರನ್ನು ಹೊರತುಪಡಿಸಿ ವಿಶ್ವದ ಪ್ರಮುಖ ನಾಯಕರೆಲ್ಲರೂ ಈಗಾಗಲೇ ದಿಲ್ಲಿ ತಲುಪಿದ್ದಾರೆ. ಸೆಪ್ಟೆಂಬರ್ 9ರಂದು ವಿಶ್ವ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಔತಣಕೂಟವನ್ನೂ ಏರ್ಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ಸೆಪ್ಟೆಂಬರ್ 9 ಮತ್ತು 10ರಂದು ದಿಲ್ಲಿಯ ಐಕಾನಿಕ್ ಭಾರತ್ ಮಂಟಪದಲ್ಲಿ 18ನೇ ಜಿ20 ಶೃಂಗಸಭೆಯನ್ನು ಆಯೋಜಿಸಲು ಭಾರತಕ್ಕೆ ಸಂತೋಷವಾಗಿದೆ. ಇದು ಭಾರತ ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ವಿಶ್ವ ನಾಯಕರೊಂದಿಗೆ ಫಲಪ್ರಧ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ನವದೆಹಲಿ ಜಿ20 ಶೃಂಗಸಭೆಯು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಹೇಳಿದ್ದಾರೆ.

15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆ

ಸೆಪ್ಟೆಂಬರ್ 8ರಂದು ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌, ಮಾರಿಷಸ್, ಬಾಂಗ್ಲಾದೇಶದ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಸೆಪ್ಟೆಂಬರ್ 9ರಂದು, ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವುದರ ಜೊತೆಗೆ, ಬ್ರಿಟನ್‌ ಪ್ರಧಾನ ಮಂತ್ರಿ ರಿಷಿ ಸುನಕ್, ಜಪಾನ್, ಜರ್ಮನಿ ಮತ್ತು ಇಟಲಿಯ ಮುಖಂಡರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಸೆ.10ರಂದು ಮೋದಿಯವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಔತಣಕೂಟದ ಸಭೆ ನಡೆಸಲಿದ್ದಾರೆ. ಕೆನಡಾ ನಾಯಕರೊಂದಿಗೆ ಕ್ಷಿಪ್ರ ಅವಧಿಯ ಸಭೆ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಯುರೋಪ್‌ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾದ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಶೇಖ್ ಹಸೀನಾ ಜತೆ ಮಾತುಕತೆ

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಪುತ್ರಿ ಸೈಮಾ ವಾಝೆದ್ ಕೂಡ ಬರಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಜಿ20 ಸಭೆಯ ಜತೆಜತೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಹಸೀನಾ ಅವರು ಪ್ರಧಾನಿ ಮೋದಿಯವರೊಂದಿಗೆ ಉಭಯ ದೇಶಗಳ ಕೆಲ ಜಂಟಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ತ್ರಿಪುರಾದೊಂದಿಗೆ ರೈಲು ಸಂಪರ್ಕ ಮತ್ತು ರಾಂಪಾಲ್ ವಿದ್ಯುತ್ ಸ್ಥಾವರದ ಎರಡನೇ ಘಟಕಗಳು ಉದ್ಘಾಟನೆಯಾಗಲಿವೆ. ಉಭಯ ದೇಶಗಳ ನಾಗರಿಕರು ಪರಸ್ಪರ ದೇಶಗಳಲ್ಲಿ ಪ್ರಯಾಣಿಸುವಾಗ ಡಾಲರ್‌ಗಳ ಬದಲಿಗೆ ಸ್ಥಳೀಯ ಕರೆನ್ಸಿಯಲ್ಲಿ ಪಾವತಿಸಲು ರುಪೇ-ಟಾಕಾ ಕಾರ್ಡ್ ಅನ್ನು ತರುವ ಒಪ್ಪಂದ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

ಈ ಸುದ್ದಿಯನ್ನೂ ಓದಿ: G20 Summit 2023: ವಿಶ್ವನಾಯಕರು ಪಾಲ್ಗೊಳ್ಳುವ ಜಿ20 ಶೃಂಗ ಸಭೆಗೆ ಭಾರೀ ಭದ್ರತೆ, 1.30 ಲಕ್ಷ ಸಿಬ್ಬಂದಿ ನಿಯೋಜನೆ

ಅಮೆರಿಕ ಜತೆ ದ್ವಿಪಕ್ಷೀಯ ಚರ್ಚೆ

ಶುಕ್ರವಾರ ಸಂಜೆ ನವದೆಹಲಿಗೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬೈಡೆನ್ ಅವರಿಗೆ ಶುಕ್ರವಾರ ಅಧಿಕೃತ ಭೋಜನಕೂಟವಿದೆ. ಆದರೆ ಅದು ಜೆಟ್-ಲ್ಯಾಗ್ ಅನ್ನು ಅವಲಂಬಿಸಿದೆ. ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್ ಅವರು ದ್ವಿಪಕ್ಷೀಯ ಮಾತುಕತೆಗಳ ಜೊತೆಗೆ ಭಾನುವಾರ ಮಧ್ಯಾಹ್ನ ಪ್ರಧಾನಿ ಮೋದಿ ಅವರೊಂದಿಗೆ ಊಟ ಮಾಡಲು ಒಲವು ತೋರಿದ್ದಾರೆ.

ದಿಲ್ಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ಶೃಂಗಸಭೆಯ ವೇಳಾಪಟ್ಟಿ

G20 Summit Day 1: September 9
TimeActivity
0930-1030Arrival of leaders and heads of delegations at the Summit Venue, Bharat Mandapam
 Welcome photograph with the Prime Minister at Tree of Life Foyer, Level 2, Bharat Mandapam
 Leaders and heads of delegation assemble in Leaders’ Lounge, Level 2, Bharat Mandapam
1030-1330Session 1: One Earth at Summit Hall, Level 2, Bharat Mandapam
 Working lunch
1330-1500Bilateral meetings at Level 1, Bharat Mandapam
1500-1645Session II: One Family at Summit Hall, Level 2, Bharat Mandapam
 Return to hotels
1900-2000Arrival of leaders and heads of delegation for dinner
 Welcome photograph on arrival
2000-2115Conversation over dinner
2110-2145Leaders and heads of delegation assemble in Leaders’ Lounge, Level 2, Bharat Mandapam
 Departure for hotels from South or West Plaza
G20 Summit Day 2: September 10
TimeActivity
0815-0900Arrival of leaders and heads of delegations at Rajghat (in individual motorcades)
 Signing of Peace Wall inside the Leaders’ Lounge at Rajghat
0900-0920Laying of wreaths at Mahatma Gandhi’s Samadhi
 Live performance of Mahatma Gandhi’s favourite devotional songs
920Leaders and heads of delegations move to Leaders’ Lounge
 Departure for Bharat Mandapam in individual motorcades
0940-1015Arrival of leaders and heads of delegation at Bharat Mandapam
1015-1028Tree planting ceremony at South Plaza, Level 2, Bharat Mandapam
1030-1230Session III: One Future at Summit Hall, Level 2, Bharat Mandapam
 Adoption of The New Delhio Leaders’ Declaration
Exit mobile version