Site icon Vistara News

G20 Summit Day 2 LIVE Updates: 2 ದಿನಗಳ ಅದ್ಧೂರಿ ಜಿ20 ಶೃಂಗಸಭೆ ಅಂತ್ಯ; ಯಶಸ್ವಿ ಆಯೋಜನೆಗಾಗಿ ಭಾರತ, ಮೋದಿಗೆ ಜಾಗತಿಕ ನಾಯಕರ ಶ್ಲಾಘನೆ

Modi Hands Over G20 Presidency To Brazil

Modi Hands Over G20 Presidency To Brazil

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಜೃಂಭಣೆಯಿಂದ ಎರಡು ದಿನ ನಡೆದ ಜಿ 20 ಶೃಂಗಸಭೆಯು (G20 Summit 2023) ಮುಕ್ತಾಯಗೊಂಡಿದೆ. ಎರಡು ದಿನ ನಡೆದ ಸಾಲು ಸಾಲು ಸಭೆ, ಒಪ್ಪಂದ, ಚರ್ಚೆಗಳು ಶೃಂಗಸಭೆಗೆ ಮೆರುಗು ನೀಡಿದವು. ಮೋದಿ ಅವರು ಜಿ 20 ರಾಷ್ಟ್ರಗಳ ನಾಯಕರಿಗೆ ಧನ್ಯವಾದ ತಿಳಿಸಿ ಸಭೆಯನ್ನು ಮುಗಿಸಿದರು. ಸಮಾರೋಪಕ್ಕೂ ಮುನ್ನ ಬ್ರೆಜಿಲ್‌ಗೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದರು. ಆದಾಗ್ಯೂ, ನವೆಂಬರ್‌ವರೆಗೆ ಭಾರತವೇ ಅಧ್ಯಕ್ಷತೆಯನ್ನು ಹೊಂದಿರಲಿದೆ.

B Somashekhar

ಜಿ 20 ಶೃಂಗಸಭೆ ನಿರ್ಣಾಯಕ ಘಟ್ಟಕ್ಕೆ

ಎರಡು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯು ಕೊನೆಯ ಹಂತ ತಲುಪಿದೆ. ಮಧ್ಯಾಹ್ನ 12.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾರೋಪ ಭಾಷಣ ಮಾಡುವ ಮೂಲಕ ಎರಡು ದಿನಗಳ ಅದ್ಧೂರಿ ಸಭೆಯನ್ನು ಸಮಾರೋಪಗೊಳಿಸಲಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಸಭೆ ಮುಗಿಸಿ ವಿಯೇಟ್ಮಾಂಗೆ ಪ್ರಯಾಣ ಆರಂಭಿಸಿದರು. ಇದೇ ವೇಳೆ ಜಿ 20 ನಾಯಕರು ಪರಸ್ಪರ ಸಸಿಗಳನ್ನು ಉಡುಗೊರೆ ನೀಡುವ ಮೂಲಕ ಪರಿಸರ ಪ್ರಜ್ಞೆ ಮೆರೆದರು.

B Somashekhar

ಮಹಾತ್ಮ ಗಾಂಧೀಜಿಗೆ ವಿಶ್ವನಾಯಕರಿಂದ ಗೌರವ ನಮನ

B Somashekhar

ಸಬರಮತಿ ಆಶ್ರಮಕ್ಕೆ ರಿಷಿ ಸುನಕ್-‌ಅಕ್ಷತಾ ಮೂರ್ತಿ ಭೇಟಿ

Exit mobile version