Site icon Vistara News

Viral News : ಲೇ ಹುಡುಗಿ ನೀ ಕೇಳಿದ್ದು ಕೊಟ್ಟೆ, ಆದ್ರೂ ಸಾಯುವಂಗ ಹೊಡ್ದು, ಬೆತ್ತಲೆ ಮಾಡಿ ಬೀದಿಯಲ್ಲಿ ಬಿಟ್ಟೆಯಲ್ಲೇ!

Bhavika Bhoir

ಥಾಣೆ, ಮಹಾರಾಷ್ಟ್ರ: ಗರ್ಲ್ ಫ್ರೆಂಡ್‌ (Girl Friend) ಪ್ರೇಮ ಪಾಶದಲ್ಲಿ ಸಿಕ್ಕಿಬಿದ್ದ 30 ವರ್ಷದ ಯುವಕ (Boy Friend) ಬೀದಿಯಲ್ಲಿ ಬೆತ್ತಲಾಗಿದ್ದಾನೆ!(Naked on Road). ಅಂದರೆ, ಆತನಲ್ಲಿದ್ದ ಲಕ್ಷಾಂತರ ರೂಪಾಯಿ ಎಗರಿಸಿದ ಗರ್ಲ್ ಫ್ರೆಂಡ್, ನಾಲ್ವರ ಸಹಾಯದಿಂದ ಹಲ್ಲೆ ಮಾಡಿ, ಬಟ್ಟೆ ಬಿಚ್ಚಿಸಿ ಶಹಾಪುರ ಹೆದ್ದಾರಿಯಲ್ಲಿ (Shahapur highway) ಬಿಟ್ಟು ಹೋದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ (Thane) ನಡೆದಿದೆ. ಗರ್ಲ್ ಫ್ರೆಂಡ್ ಸೇರಿದಂತೆ ಐವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ(viral News).

ಐವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಗುರುತಿಸಿದ್ದಾರೆ. ಅವರಿಬ್ಬರು ಗರ್ಲ್ಡ್ ಫ್ರೆಂಡ್ ಭಾವಿಕಾ ಬೋರ್ ಮತ್ತು ನದೀಮ್ ಖಾನ್. ಬೀದಿಯಲ್ಲಿ ಬೆತ್ತಲಾಗುವ ಪರಿಸ್ಥಿತಿಯನ್ನು ತಂದುಕೊಂಡ ಸಂತ್ರಸ್ತ ವ್ಯಕ್ತಿ ಹೆಸರು ಬಾಲಾಜಿ ಶಿವಭಗತ್. ಈತ ನಿರ್ಮಾಣ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದು, ಶಹಾಪುರ ವಾಸಿಯಾಗಿದ್ದಾನೆ.

ಜೂನ್ 28 ರಂದು ಶಹಾಪುರದ ಅತಗಾಂವ್ ಹೆದ್ದಾರಿಯಲ್ಲಿ ಸಂಜೆ 4.30 ರ ಸುಮಾರಿಗೆ ಬರುವಂತೆ ಗರ್ಲ್ ಫ್ರೆಂಡ್ ಭಾವಿಕಾ, ಶಿವಭಗತ್‌ಗೆ ಬರುವಂತೆ ತಿಳಿಸಿದ್ದಾಳೆ. ಅದರಂತೆ ಆತ, ಹೇಳಿದ ಟೈಮಿಗೆ ಹೋಗಿ, ಭಾವಿಕಾ ಜತೆ ಮಾತನಾಡುತ್ತಿರುವಾಗ, ಸಡನ್ ಆಗಿ ನಾಲ್ವರು ಬಂದಿದ್ದಾರೆ. ಗರ್ಲ್ಡ್ ಫ್ರೆಂಡ್ ಮತ್ತು ಆಕೆಯ ಆ ನಾಲ್ವರು ಸಹಚರರು ಶಿವಭಗತ್ ಅವರನ್ನು ರಾತ್ರಿಯಿಡಿ ಹಲ್ಲೆ ಮಾಡಿದ್ದಾರೆ. ಆತನ ಬಳಿ ಇದ್ದ ಹಣ, ಒಡವೆಗಳನ್ನು ದೋಚಿದ್ದಾರೆ. ಬಳಿಕ ಬೆಳಗ್ಗೆ ಶಿವಭಗತ್‌ನ ಬಟ್ಟೆಯನ್ನು ತೆಗೆದು ಬೆತ್ತಲೆ ಮಾಡಿ, ಶಹಾಪುರ ಹೆದ್ದಾರಿಯಲ್ಲಿ ತಂದು ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ಹಲ್ಲೆಗೊಳಗಾಗಿದ್ದ ಶಿವಭಗತ್ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ಎಲ್ಲ ಮಾಡಿದೆ. ಆಕೆಗೆ ಸಣ್ಣ ಮನೆಯನ್ನು ಕಟ್ಟಿಸಿಕೊಟ್ಟಿದ್ದೆ. ಆಕೆಗೆ ಎಲ್ಲ ಖರೀದಿಸಿ ಕೊಡುತ್ತಿದ್ದೆ. ಆಕೆಯ ಬಯಕೆಯೇ ನನಗೆ ಆಜ್ಞೆಯಾಗಿತ್ತು. ಆದರೆ, ಆಕೆ ಮತ್ತೊಬ್ಬನಿಗಾಗಿ ನನಗೆ ಮೋಸ ಮಾಡಿದಳು. ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದಳು ಎಂದು ಶಿವಭಗತ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Video Viral : ಪರಸ್ತ್ರೀ ಜತೆ ಅಪ್ಪನ ಸರಸ; ವಿಡಿಯೊ ವೈರಲ್‌ನಿಂದ ಮುಜುಗರಗೊಂಡು ಮಗ ಆತ್ಮಹತ್ಯೆ

ಘಟನೆ ನಡೆಯುವ ಮುಂಚೆ ಆಕೆ ನನ್ನಿಂದ ಸೀರೆ, ಕಿವಿಯೊಲೆ, ಚಿನ್ನದಕಾಲುಂಗರ, ಬಳೆಗಳು ಸೇರಿದಂತೆ ಅನೇಕ ಬೆಲೆ ಬಾಳುವ ವಸ್ತುಗಳನ್ನು ಗಿಫ್ಟ್ ಆಗಿ ಕೇಳಿದ್ದಳು. ಈ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಆಕೆ ಹೇಳಿದ ಸ್ಥಳಕ್ಕೆ ಹೋದೆ. ಅಲ್ಲಿಂದ ನನ್ನ ಕ್ರೆಟಾ ಕಾರಿನಲ್ಲಿ ಇಬ್ಬರು ಪ್ರಯಾಣ ಬೆಳೆಸಿದವು. ತಂದಿದ್ದ ಎಲ್ಲ ಗಿಫ್ಟ್ ಪಡೆದುಕೊಂಡಳು. ಆಗ ನಾಲ್ವರು ಧುತ್ತನೇ ಎದುರು ಬಂದರು. ನನ್ನ ಕಾರಿನೊಳಗೆ ಪ್ರವೇಶಿಸಿ ನನ್ನ ಮೇಲೆ ಹಲ್ಲೆ ಮಾಡಿದರು. ನಾಲ್ವರ ಪೈಕಿ ಒಬ್ಬ ನನ್ನು ಸೈಡಿಗೆ ಸರಿಸಿ ಕಾರ್ ಚಲಾಯಿಸಲು ಆರಂಭಿಸಿದ ಎಂದು ಶಿವಭಗತ್ ಹೇಳಿದ್ದಾರೆ.

ಗರ್ಲ್ ಫ್ರೆಂಡ್‌ನಿಂದ ತೀವ್ರ ಹಲ್ಲೆಗೆ ಒಳಗಾದ ಈ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version