ನವ ದೆಹಲಿ: ಆರು ಅಂಕಿಗಳುಳ್ಳ ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಮುಂದಿನ ತಿಂಗಳಿನಿಂದ ಮಾರಾಟ ಮಾಡುವಂತಿಲ್ಲ. ಈ ಕುರಿತು ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ಸೂಚನೆ ನೀಡಿದೆ.
ಏಪ್ರಿಲ್ 1ರಿಂದ ಆರು ನಂಬರ್ ಹೊಂದಿರುವ ಹಾಲ್‌ಮಾರ್ಕ್ ಹೊಂದಿರುವ ಚಿನ್ನದ ಆಭರಣಗಳು ಹಾಗೂ ಕಲಾಕೃತಿಗಳನ್ನು ಮಾರಾಟ ಮಾಡಬೇಕು. ಉತ್ಪನ್ನಗಳ ಗುಣಮಟ್ಟದ ನಿಯಂತ್ರಣಕ್ಕಾಗಿ ಈ ಪದ್ಧತಿ ಜಾರಿಗೆ ತರಲಾಗುತ್ತಿದೆ ಎಂದು ಇಲಾಖೆ ಹೇಳಿದೆ. ಭಾರತೀಯ ಮಾನಕಗಳ ಬ್ಯೂರೋ (BIS) ಜತೆಗೆ ನಡೆಸಿದ ಮೀಟಿಂಗ್ ಬಳಿಕ ಇದನ್ನು ವ್ಯವಸ್ಥೆಗೊಳಿಸಲಾಗಿದೆ.
ಬಿಐಎಸ್ ಮೀಟಿಂಗ್ ವೇಳೆ ಇನ್ನೂ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ:
- ದೇಶದಲ್ಲಿ ಉತ್ಪನ್ನಗಳ ಟೆಸ್ಟಿಂಗ್ ಅನ್ನು ಬಿಐಎಸ್ ಅಂತಿಮಗೊಳಿಸುತ್ತದೆ.
- ಪ್ರಯೋಗಾಲಯ ವೀಕ್ಷಣೆಯನ್ನೂ ಬಿಐಎಸ್ ಮಾಡಲಿದೆ. ಗ್ರಾಹಕರ ಸುರಕ್ಷತೆಗಾಗಿ, ಗುಣಮಟ್ಟದ ಮೇಲಿನ ನಿಗಾಕ್ಕಾಗಿ ಪರ್ಯವೇಕ್ಷಣೆಯನ್ನು ಬಿಐಎಸ್ ಹೆಚ್ಚಿಸಲಿದೆ.
- ಪ್ರೆಶರ್ ಕುಕ್ಕರ್ನಂಥ, ಹೆಚ್ಚಿನ ಗ್ರಾಹಕ ಸುರಕ್ಷತೆಯನ್ನು ಬಯಸುವ ಉತ್ಪನ್ನಗಳ ಬಗ್ಗೆ ಬಿಐಎಸ್ ಪರೀಕ್ಷೆ ಹೆಚ್ಚಿಸಲಿದೆ.
ಇದನ್ನೂ ಓದಿ: Gold rate : ಚಿನ್ನದ ದರದಲ್ಲಿ 110 ರೂ. ಇಳಿಕೆ, ಬೆಳ್ಳಿಯೂ 100 ರೂ. ಅಗ್ಗ