Site icon Vistara News

Google Gemini: ಮೋದಿ ವಿರುದ್ದ ಗೂಗಲ್ ಎಐ ಟೂಲ್ ಜೆಮಿನಿ ಪಕ್ಷಪಾತಿ; ಕ್ರಮ ಎಂದ ಸಚಿವ ರಾಜೀವ್ ಚಂದ್ರಶೇಖರ್

Google Gemini ai bias against modi and Minister assured action

ನವದೆಹಲಿ: ಗೂಗಲ್‌ನ ಎಐ ಟೂಲ್‌ ಜೆಮಿನಿಯು (Google Gemini) ಪ್ರಧಾನಿ ನರೇಂದ್ರ ಮೋದಿ (PM Narendra Modi)) ಅವರ ವಿರುದ್ದ ಪಕ್ಷಪಾತಿಯಾಗಿದೆ. ಇದು ಸ್ಪಷ್ಟವಾಗಿ ದೇಶದ ಐಟಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ (IT Rules) ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chandrashekhar) ಅವರು ಆರೋಪಿಸಿದ್ದಾರೆ. ಟ್ವಿಟರ್‌ ಬಳಕೆದಾರರೊಬ್ಬರು, ಫ್ಯಾಸಿಸಮ್ ಬಗ್ಗೆ ಕೇಳಿದಾಗ ಜೆಮಿನಿ ಉತ್ತರ ಪ್ರದರ್ಶಿಸಿತು. ಆದರೆ, ಡೋನಾಲ್ಡ್ ಟ್ರಂಪ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿತು ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು, ಗೂಗಲ್‌ನ ಎಐ ಟೂಲ್ ಜೆಮಿನಿಯು ಭಾರತದ ಅನೇಕ ಕ್ರಿಮಿನಲ್‌ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇವು ನೇರವಾಗಿ ಅಪರಾಧ ಸಂಹಿತೆಯ ಅನೇಕ ವಿಧಿಗಳು ಮತ್ತು ಐಟಿ ಕಾಯ್ದೆಯ ಮಧ್ಯಸ್ಥಿಕೆಗಾರರ(ಐಟಿ ನಿಯಮಗಳು)ಗಳ 3(1)(b) ನಿಯಮದ ಉಲ್ಲಂಘನೆಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಸಚಿವರು ಗೂಗಲ್ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್ ಇಂಡಿಯಾ ಹಾಗೂ ಗೂಗಲ್‌ಎಐಗೂ ತಮ್ಮ ಪ್ರತಿಕ್ರಿಯೆಯನ್ನು ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬಳಕೆದಾರರ ಆರೋಪ ಏನು?

ಗೂಗಲ್‌ನ ಎಐ ಟೂಲ್‌ ಜೆಮಿನಿ ಪ್ರಧಾನಿ ಮೋದಿ ವಿರುದ್ಧ ಪಕ್ಷಪಾತಿಯಾಗಿದೆ ಎಂದು ಆರೋಪಿಸಿದ್ದಾರೆ. ಗೂಗಲ್‌ನಿಂದ ಈ ಜೆಮಿನಿ ಎಐ ಟೂಲ್‌ ಕೇವಲ ಜನಾಂಗೀಯ ಪೂರ್ವಗ್ರಹ ಮಾತ್ರವಲ್ಲದೇ ದುರುದ್ದೇಶಪೂರಿತವೂ ಆಗಿದೆ. ಈ ಬಗ್ಗೆ ಭಾರತ ಸರ್ಕಾರವು ಗಮನಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಜೆಮಿನಿ ಎಐ-ಚಾಲಿತ ಚಾಟ್‌ಬಾಟ್ ಆಗಿದ್ದು ಅದು ಪ್ರಶ್ನೆಗಳಿಗೆ ಉತ್ತರಿಸಬಹುದು, ವಿಷಯವನ್ನು ಬರೆಯಬಹುದು ಮತ್ತು ಪ್ರಾಂಪ್ಟ್ ಮಾಡಿದಾಗ ಮಾಹಿತಿಯನ್ನು ಪ್ರದರ್ಶಿಸಬಹುದು. ಇದನ್ನು ಗೂಗಲ್‌ ಡೀಪ್‌ಮೈಂಡ್ ಅಭಿವೃದ್ಧಿಪಡಿಸಿದೆ. ಈ ಟೂಲ್ ಅನ್ನು 2023 ಡಿಸೆಂಬರ್ 6ರಂದು ಘೋಷಿಸಲಾಯಿತು. ಓಪನ್ ಐಎ‌ನ ಚಾಟ್ ಜಿಪಿಟಿಗೆ ಪೈಪೋಟಿ ನೀಡುತ್ತಿದೆ.

ಗೂಗಲ್‌ನ ಎಐ ಇಮೇಜ್ ಜನರೇಷನ್ ಎಂಜಿನ್ ಜನಾಂಗೀಯ ಪೂರ್ವಗ್ರಹಪೀಡಿತವಾಗಿದೆ ಎಂದು ಉದ್ಯಮಿ ಎಲಾನ್ ಮಸ್ಕ್ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಈ ಆರೋಪ ಕೇಳಿ ಬಂದಿದೆ. ಗೂಗಲ್ ತಮ್ಮ ಎಐ ಇಮೇಜ್ ಜನರೇಷನ್‌ನೊಂದಿಗೆ ಅತಿಯಾದ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದೆ. ಏಕೆಂದರೆ ಅದು ಅವರ ಹುಚ್ಚು ಜನಾಂಗೀಯ ನೀತಿಯಾಗಿದೆ. ತನ್ನದು ನಾಗರಿಕ ವಿರೋಧಿ ಪ್ರೋಗ್ರಾಮಿಂಗ್ ಅನ್ನು ಎಲ್ಲರಿಗೂ ಸ್ಪಷ್ಟಪಡಿಸಿದೆ ಎಕ್ಸ್ ವೇದಿಕೆಯಲ್ಲಿ ಅವರು ಬರೆದುಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: ಚಾಟ್‌ಜಿಪಿಟಿಯ ಎಲ್ಲ ಬಳಕೆದಾರರಿಗೂ ವಾಯ್ಸ್ ಫೀಚರ್ ಲಭ್ಯ; ಓಪನ್ಎಐ ಘೋಷಣೆ

Exit mobile version