Site icon Vistara News

GST Collection: ಜೂನ್‌ನಲ್ಲಿ 1.61 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ; ಕರ್ನಾಟಕದ ಕೊಡುಗೆಯೂ ಏರಿಕೆ

GST Collection

GST collection in October 2023 hit second highest ever of ₹1.72 lakh crore

ನವದೆಹಲಿ: ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು ಲಯಕ್ಕೆ ಮರಳುವ ಜತೆಗೆ ಸರಕು ಮತ್ತು ಸೇವಾ ತೆರಿಗೆ (GST Collection) ಸಂಗ್ರಹ ಪ್ರಮಾಣವೂ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಜೂನ್‌ನಲ್ಲಿ ದೇಶಾದ್ಯಂತ 1,61,497 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಜಿಎಸ್‌ಟಿ ಸಂಗ್ರಹ ಶೇ.12ರಷ್ಟು ಏರಿಕೆಯಾಗಿದೆ. ಹಾಗೆಯೇ, ಒಟ್ಟು ಜಿಎಸ್‌ಟಿಯಲ್ಲಿ ಕರ್ನಾಟಕದ ಪಾಲು ಕೂಡ ಕಳೆದ ತಿಂಗಳಿಗಿಂತ ಹೆಚ್ಚಾಗಿದೆ.

ಕರ್ನಾಟಕದಲ್ಲಿ 2023ರ ಮೇನಲ್ಲಿ 10,317 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದರೆ, ಏಪ್ರಿಲ್‌ನಲ್ಲಿ 9,232 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ, ಜೂನ್‌ನಲ್ಲಿ ಕಳೆದ ಎರಡು ತಿಂಗಳಿಗಿಂತ ಕರ್ನಾಟಕದ ಜಿಎಸ್‌ಟಿ ಪಾಲು ಜಾಸ್ತಿಯಾಗಿದೆ. ಅಂದರೆ, ಜೂನ್‌ನಲ್ಲಿ ಕರ್ನಾಟಕದಿಂದ 11,193 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದರಿಂದ ಕೇಂದ್ರದಿಂದ ಕರ್ನಾಟಕಕ್ಕೆ ಹೆಚ್ಚಿನ ಪಾಲು ಜಿಎಸ್‌ಟಿ ಸಿಗಲಿದೆ.

ಜಿಎಸ್‌ಟಿ ಸಂಗ್ರಹದ ಮತ್ತಷ್ಟು ಮಾಹಿತಿ ಇಲ್ಲಿದೆ

ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ 6ನೇ ಬಾರಿ ಮಾಸಿಕ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗಿದೆ. ಹಾಗೆಯೇ, ಸತತ ಐದು ತಿಂಗಳಿಂದ ಜಿಎಸ್‌ಟಿ ಸಂಗ್ರಹವು 1.4 ಲಕ್ಷ ಕೋಟಿ ರೂ.ಗಿಂತ ಜಾಸ್ತಿ ಇದೆ. ಜೂನ್‌ನಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿಯಲ್ಲಿ ಸಿಜಿಎಸ್‌ಟಿ 31,395 ಕೋಟಿ ರೂ., ಎಸ್‌ಜಿಎಸ್‌ಟಿ 38,292 ಕೋಟಿ ರೂ., ಐಜಿಎಸ್‌ಟಿ 80,292 ಕೋಟಿ ರೂ., ಸೆಸ್‌ ಪಾಲು 11,900 ಕೋಟಿ ರೂ. ಇದೆ.

ಇದನ್ನೂ ಓದಿ: GST Cess rate : ಪಾನ್‌ ಮಸಾಲಾ, ತಂಬಾಕು ಉತ್ಪನ್ನದ ರಿಟೇಲ್‌ ದರ ಆಧರಿಸಿದ ಜಿಎಸ್‌ಟಿ ಜಾರಿ

ಕಳೆದ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ನೂತನ ತೆರಿಗೆ ವ್ಯವಸ್ಥೆ ಜಾರಿಯಾದ ಬಳಿಕವೇ ಗರಿಷ್ಠ ಸಂಗ್ರಹ ಎನಿಸಿತ್ತು. ಮೇ ತಿಂಗಳಲ್ಲಿ 1,57,090 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈಗ ಕಳೆದ ತಿಂಗಳಿಗಿಂತ ಜಾಸ್ತಿ ಜಿಎಸ್‌ಟಿ ಸಂಗ್ರಹವಾಗಿದೆ.

Exit mobile version