Site icon Vistara News

Gurmeet Ram Rahim: ಮತ್ತೆ ಜೈಲಿನಿಂದ ಹೊರಬಂದ ಗುರ್ಮೀತ್ ರಾಮ್​ ರಹೀಮ್​; ನಾಲ್ಕು ವರ್ಷಗಳಲ್ಲಿ 10ನೇ ಬಾರಿ ಪೆರೋಲ್‌!

gurmeet ram rahim

ನವದೆಹಲಿ: ಕೊಲೆ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌಧ(Dera Sacha Sauda)ದ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಮ್​(Gurmeet Ram Rahim) ಮತ್ತೆ ಫರ್ಲೋ ಮೇಲೆ ಹೊರಬಂದಿದ್ದಾರೆ. ಆ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಇದು ಹತ್ತನೇ ಬಾರಿ ಅವರು ಇಂತಹ ಫರ್ಲೋ(Furlough) ಮೂಲಕ ಹೊರಬರುತ್ತಿರುವುದು. 21 ದಿನಗಳ ಕಾಲ ರಿಲೀಫ್‌ ಪಡೆದಿರುವ ಗುರ್ಮೀತ್ ರಾಮ್​ ರಹೀಮ್ ಇಂದು ಬೆಳಗ್ಗೆ 6:30ಕ್ಕೆ ಜೈಲಿನಿಂದ ಹೊರ ಬಂದಿದ್ದಾರೆ.

ಮೂಲಗಳ ಪ್ರಕಾರ ಉತ್ತರಪ್ರದೇಶದ ಭಾಗ್‌ಪಟ್‌ ಜಿಲ್ಲೆಯಲ್ಲಿರುವ ಡೇರಾ ಸಚ್ಚಾ ಸೌಧ ಆಶ್ರಮದಲ್ಲಿ ಅವರು ತಂಗಲಿದ್ದಾರೆ. 56 ವರ್ಷದ ರಾಮ್ ರಹೀಮ್, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಮನವಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಎಂಟು ಪ್ರತ್ಯೇಕ ಸಂದರ್ಭಗಳಲ್ಲಿ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಏನಿದು ಫರ್ಲೋ?

ಫರ್ಲೋ ಮತ್ತು ಪೆರೋಲ್‌ ನಡುವ ಸ್ವಲ್ಪ ವ್ಯತ್ಯಾಸ ಇದೆ. ಪೆರೋಲ್‌ ನೀಡಲೂ ಬಹುದು ಅಥವಾ ಅದನ್ನು ತಿರಸ್ಕರಿಸುವ ಅವಕಾಶ ಇದೆ. ಆದರೆ ಫರ್ಲೋ ಅಂದರೆ ಶಿಕ್ಷೆಯ ನಿಗದಿತ ಭಾಗವನ್ನು ಪೂರ್ಣಗೊಳಿಸಿದ ನಂತರ ಕೈದಿಯ ಕಿರು ಬಿಡುಗಡೆಯಾಗಿದೆ. ಇದು ಕೈದಿಯ ಅಧಿಕಾರವಾಗಿರುತ್ತದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅವರಿಗೆ ತಾತ್ಕಾಲಿಕ ಬಿಡುಗಡೆಯ ಮಂಜೂರಾತಿಯನ್ನು ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸಿದ ಬಳಿಕ ರಾಮ್ ರಹೀಮ್ಗೆ ಬಿಡುಗಡೆ ಭಾಗ್ಯ ದೊರೆತಿದೆ.

ಸಿರ್ಸಾ ಆಶ್ರಮದಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ರಾಮ್‌ ರಹೀಮ್‌ ಅಕ್ಟೋಬರ್ 18, 2021 ರಂದು ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಾಲಯ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ: Gurmeet Ram Rahim: 22ವರ್ಷಗಳ ಹಳೆಯ ಕೊಲೆ ಕೇಸ್‌; ಗುರ್ಮೀತ್ ರಾಮ್​ ರಹೀಮ್​ ಖುಲಾಸೆ

Exit mobile version