ವಾರಣಾಸಿ: ಕಾಶಿ ಗ್ಯಾನವಾಪಿ ಕಾಂಪ್ಲೆಕ್ಸ್‌ನ ಮಸೀದಿಯೊಳಗೆ ಪೊಲೀಸರಿಂದ ವಿಡಿಯೋ ಸರ್ವೆ ನಡೆಯಲಿದೆ. ಕಾಶಿ ವಿಶ್ವನಾಥ ದೇವಾಲಯದ ಆಡಳಿತ ಸಮಿತಿಯ ಮುಖ್ಯಸ್ಥರು ಗ್ಯಾನವಾಪಿ ಮಸೀದಿಯಲ್ಲಿ ತಾಯಿ ಶೃಂಗಾರ ಗೌರಿಯ ಸ್ಥಳ ಇದೆ. ಇದರ ಕುರುಹುಗಳು ಮಸೀದಿಯಲ್ಲಿದೆ ಎಂದು ಮುಖ್ಯಸ್ಥರು ಹೇಳಿದ್ದರು. ಆ ಕಾರಣದಿಂದ ಮಸೀದಿಯ ಪರಿಶೀಲನೆಗೆ ಮನವಿ ಮಾಡಲಾಗಿತ್ತು. ಆದರೆ ಸ್ಥಳದ ಪರಿಶೀಲನೆಗೆ ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಪ್ರಕರಣದ ಬಗ್ಗೆ ಅಂಜುಮನ್ ಇಂತೆಜಮಿಯಾ ಮಸ್ಜಿದ್‌ನ ಆಡಳಿತ ಸಮಿತಿಯ ಮುಖ್ಯಸ್ಥ ಎಸ್ ಎಮ್ ಯಾಸಿನ್ ಮಾತನಾಡಿ, ಪರೀಶೀಲನೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಕಾಶಿ ವಿಶ್ವನಾಥ ದೇವಾಲಯಕ್ಕೆ ಸಂಬಂಧಪಟ್ಟವರನ್ನು ಮಸೀದಿಯ ಒಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಹಾಗೂ ʼನಂಬಿಕೆ ಇಲ್ಲದವರನ್ನುʼ ಒಳಗೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಜಿಲ್ಲೆಯ ಅಧಿಕಾರಿಗಳು ಮಸೀದಿಯ ಸಿಬ್ಬಂದಿಯೊಡನೆ ಮಾತುಕತೆ ನಡೆಸಿ, ಅವರನ್ನು ಒಪ್ಪಿಸುವ ಕಾರ್ಯ ನಡೆಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಮಸೀದಿಯ ಸಿಬ್ಬಂದಿ ತಿಳಿಸಿದ್ದಾರೆ.
ಏಪ್ರಿಲ್ 26ರಂದು ನ್ಯಾಯಾಲಯದ ಎದುರು ಈ ಪ್ರಕರಣ ಬಂದಿದ್ದು, ಸ್ಥಳದ ಪರಿಶೀಲನೆಗೆ ಅನುಮತಿ ನೀಡಿತ್ತು. ಈದ್ ಹಬ್ಬ ಕಳೆದ ನತರ ಸ್ಥಳವನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಮಸೀದಿ ಹಾಗೂ ದೇವಲಾಯದ ಮುಖ್ಯಸ್ಥರ ಸಮ್ಮುಖದಲ್ಲೇ ವಿಡಿಯೋ ಮೂಲಕ ಸ್ಥಳದ ಪರಿಶೀಲನೆ ನಡೆಯಲಿ ಎಂದು ಕೋರ್ಟ್ ತಿಳಿಸಿತ್ತು. ಮೇ 6 ಹಾಗೂ 7 ರಂದು ಈ ಸ್ಥಳದಲ್ಲಿ ಪರಿಶೀಲನೆ ನಡೆಯಲಿದ್ದು, ಸ್ಥಳೀಯ ಪೊಲೀಸರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದ್ದಾರೆ. ಇದು ಸೂಕ್ಷ್ಮ ವಿಚಾರವಾಗಿದ್ದು ಹಾಗೂ ಇನ್ನು 3-4 ದಿನಗಳ ಕಾಲ ಈ ಪರಿಶೀಲನೆ ನಡೆಯಲಿದ್ದು ಯಾವುದೇ ಸಂದರ್ಭದಲ್ಲಿ ಕೋಮುಗಲಭೆಗೆ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರವಹಿಸಿದ್ದಾರೆ.
ಕಳೆದ ವರ್ಷ ಏಪ್ರೀಲ್ 18ರಂದು ದೆಹಲಿಯ ರಾಖಿ ಸಿಂಗ್, ಲಕ್ಷ್ಮೀ ದೇವಿ, ಸೀತಾ ಸಾಹು ಹಾಗೂ ಇನ್ನಿತರು ಸೇರಿ ಈ ಪ್ರಕರಣವನ್ನು ದಾಖಲಿಸಿದ್ದರು. ನಿತ್ಯ ಪೂಜಿಸುವ ಶೃಂಗಾರ ಗೌರಿ ದೇವರು, ಆಂಜನೇಯ, ಗಣಪತಿ ಹಾಗೂ ನಂದಿ ಗ್ಯಾನವಾಪಿ ಮಸೀದಿಯ ಆವರಣದಲ್ಲಿ ಇದೆ. ಅಲ್ಲಿಗೆ ಹೋಗಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೆ, ಆ ವಿಗ್ರಹಗಳನ್ನು ಛೇದಗೊಳಿಸಿರಬಹುದು ಎಂದು ಶಂಕೆಯನ್ನು ವ್ಯಕ್ತ ಪಡಿಸಲಾಗಿತ್ತು.
ಇದನ್ನೂ ಓದಿ: ಮುಸ್ಲಿಂ ಯುವತಿಯ ಜತೆ ಮದುವೆ: ಹಿಂದೂ ಯುವಕನ ಕೊಲೆ