ನವದೆಹಲಿ: 2024ರ ವಿತ್ತ ಸಾಲಿಗೆ ಎಚ್-1ಬಿ ಆರಂಭಿಕ ನೋಂದಣಿ (H 1B Visa Registration) ಪ್ರಕ್ರಿಯೆಯು ಮಾರ್ಚ್ 1ರಿಂದ ಆರಂಭವಾಗಲಿದ್ದು, ಮಾರ್ಚ್ 17ರವರೆಗೂ ಮುಂದುವರಿಯಲಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ(US Citizenship and Immigration Services – UCIS) ತಿಳಿಸಿದೆ. ಆಸಕ್ತ ಉದ್ಯೋಗಿಗಳು ಯುಸಿಐಎಸ್‌ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ. ಜತೆಗೆ, ಅಗತ್ಯ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ, ತಮ್ಮ ನೋಂದಣಿಯನ್ನು ಸಬ್‌ಮಿಟ್ ಮಾಡಬೇಕಾಗುತ್ತದೆ.
ಸೇವೆಯಲ್ಲಿನ ನೋಂದಣಿಗಳನ್ನು ಟ್ರ್ಯಾಕ್ ಮಾಡಲು, ಎಚ್-1ಬಿ ವೀಸಾಕ್ಕಾಗಿ ಸಲ್ಲಿಸಿದ ಪ್ರತಿ ನೋಂದಣಿಗೆ UCIS ಮುಖಾಮುಖಿ ಸಂಖ್ಯೆಯನ್ನು ನಿಯೋಜಿಸುತ್ತದೆ. ನಿಯೋಜಿತ ಸಂಖ್ಯೆಯನ್ನು ನೋಂದಣಿಗಳನ್ನು ಟ್ರ್ಯಾಕಿಂಗ್ ಮಾಡಲು ಮಾತ್ರ ಬಳಸಲಾಗುತ್ತದೆ.
ಏನಿದು ಎಚ್-1ಬಿ ವೀಸಾ?
H-1B ವೀಸಾವು ವಲಸೆ-ಅಲ್ಲದ ವೀಸಾ(non-immigrant visa) ಆಗಿದ್ದು, ಇದು ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ವಿಶೇಷ ಸ್ಥಾನಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಮೆರಿಕನ್ ಕಂಪನಿಗಳಿಗೆ ಅನುವು ಮಾಡಿಕೊಡುತ್ತದೆ. ಪ್ರತಿ ವರ್ಷ ತಂತ್ರಜ್ಞಾನ ಕಂಪನಿಗಳಿಂದ ಚೀನಾ ಮತ್ತು ಭಾರತದಂತಹ ರಾಷ್ಟ್ರಗಳಿಂದ ಸಾವಿರಾರು ಕಾರ್ಮಿಕರನ್ನು ನೇಮಿಸಿಕೊಳ್ಳಲು ಇದು ನಿರ್ಣಾಯಕವಾಗಿದೆ.
ಎಚ್-1ಬಿ ವೀಸಾಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ
ಮೊದಲಿಗೆ https://myaccount.uscis.gov/users/sign_up ಲಿಂಕ್ ಬಳಸಿಕೊಂಡು myUSCIC account ಕ್ರಿಯೇಟ್ ಮಾಡಬೇಕು. ಇದಕ್ಕಾಗಿ ಅರ್ಜಿದಾರರು 10 ಡಾಲರ್ ನೀಡಬೇಕಾಗುತ್ತದೆ. ಈ ಹಣವನ್ನು ಮರಳಿಸಲಾಗುವುದಿಲ್ಲ.
ತಮ್ಮ ಸ್ವಂತ ನೋಂದಣಿಗಳನ್ನು ಸಲ್ಲಿಸುತ್ತಿರುವವರು registrant ಖಾತೆಯನ್ನು ಬಳಸಬೇಕಾಗುತ್ತದೆ. ಹೊಸ ಖಾತೆ ರಚನೆಯ ಪ್ರಕ್ರಿಯೆಯು ಫೆ.21 ರಂದು ಮಧ್ಯಾಹ್ನದಿಂದಲೇ ಆರಂಭವಾಗಿರುತ್ತದೆ. ಖಾತೆ ರಚನೆಯ ನಂತರ, ಪ್ರತಿನಿಧಿಗಳು ತಮ್ಮ ಖಾತೆಗಳಿಗೆ ಯಾವುದೇ ಸಮಯದಲ್ಲಿ ಗ್ರಾಹಕರನ್ನು ಸೇರಿಸಬಹುದು. ಈ ವೀಸಾ ಫಲಾನುಭವಿಗಳ ವಿವರ ಪಡೆಯಲು ಪ್ರತಿನಿಧಿಗಳು ಮತ್ತು ನೋಂದಣಿದಾರರು ಮಾರ್ಚ್ 1ರವರೆಗೆ ಕಾಯಬೇಕಾಗುತ್ತದೆ. ಆ ನಂತರ, ಪ್ರತಿ ಫಲಾನುಭವಿಯು 10 ಡಾಲರ್ ಪಾವತಿಸಿ, ತಮ್ಮ ನೋಂದಣಿಯನ್ನು ಸಬ್‌ಮಿಟ್ ಮಾಡಬೇಕಾಗುತ್ತದೆ. ಸಿಂಗಲ್ ಸೆಷನ್‌ನಲ್ಲಿ ಬಹು ಫಲಾನುಭವಿಗಳ ಮಾಹಿತಿಯನ್ನು ಸೇರಿಸಲು ಸಾಧ್ಯವಾಗಲಿದೆ.
ಇದನ್ನೂ ಓದಿ: IT Company Layoffs : ಅಮೆರಿಕದಲ್ಲಿ 80,000 ಭಾರತೀಯ ಟೆಕ್ಕಿಗಳಿಗೆ ಈಗ ನಿರುದ್ಯೋಗ: ಕಳವಳಕಾರಿ ವರದಿ ಬಹಿರಂಗ
ಇಷ್ಟಾದ ಬಳಿಕ, ಅಂತಿಮ ಪಾವತಿಯ ತನಕ ಖಾತೆಯ ಮೂಲಕ ಮಾಹಿತಿಯನ್ನು ಎಡಿಟ್ ಮಾಡಲು, ಸಿದ್ಧಪಡಿಸಲು ಮತ್ತು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅಮೆರಿಕ ಸರ್ಕಾರವು ಮಾರ್ಚ್ 31ರೊಳಗೆ ಅಂತಿಮ ಆಯ್ಕೆಯ ಬಗ್ಗೆ ಖಾತೆದಾರರಿಗೆ ತಿಳಿಸುತ್ತದೆ. ಆಗ ನಿಮ್ಮ ನೋಂದಣಿ ಒಪ್ಪಿಗೆಯಾಗಿದ್ದರೆ, ವೀಸಾ ಮುಂದಿನ ಪ್ರಕ್ರಿಯೆ ಸಾಧ್ಯವಾಗುತ್ತದೆ