ಅಯೋಧ್ಯೆ: ಅಯೋಧ್ಯೆಯಲ್ಲಿ ಕೋಟ್ಯಂತರ ಭಾರತೀಯರ ಕನಸು ನನಸಾಗುತ್ತಿದ್ದು, ಶ್ರೀರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಅಣಿಯಾಗುತ್ತಿದೆ. ಇದರ ನಡುವೆಯೇ ಮಂದಿರದ ಮೇಲೆ ದಾಳಿಗೆ ಪಾಕ್ ಮೂಲದ ಉಗ್ರರು ಸಜ್ಜಾಗಿದ್ದಾರೆ (terrorist attack) ಎಂಬ ಮಾಹಿತಿ ಗುಪ್ತಚರ ಪಡೆಗಳಿಗೆ (intelligence) ಲಭ್ಯವಾಗಿದೆ.
ಮಂದಿರ (ayodhya temple) ಉದ್ಘಾಟನೆಗೆ ಈಗಾಗಲೇ ತಯಾರಿಗಳು ನಡೆಯುತ್ತಿದೆ. ಅಕ್ಷತ ಪೂಜೆ ನೇರವೇರಿಸಲಾಗಿದೆ. ಅಂತಿಮಹಂತದ ಕಾಮಗಾರಿಗಳು ನಡೆಯುತ್ತಿವೆ. ಜನವರಿ ಆರಂಭದಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮಮಂದಿರ ಉದ್ಘಾಟನೆ ಮಾಡಲಿದ್ದಾರೆ.
ರಾಮಮಂದಿರ ಉದ್ಘಾಟನೆಗೆ 2 ತಿಂಗಳು ಬಾಕಿ ಇರುವಾಗಲೇ ಆತಂಕದ ಮಾಹಿತಿಯೊಂದು ಹೊರಬಿದ್ದಿದ್ದು, ಪಾಕಿಸ್ತಾನದ ಅಲ್ ಖೈದಾ ಹಾಗೂ ಲಷ್ಕರ್ ಇ ತಯ್ಬಾ ಉಗ್ರ ಸಂಘಟನೆಗಳು ಮಂದಿರದ ಮೇಲೆ ಉಗ್ರ ದಾಳಿಗೆ ಸಂಚು ರೂಪಿಸಿರುವ ಮಾಹಿತಿ ಬಹಿರಂಗವಾಗಿದೆ.
ಇಸ್ರೇಲ್‌ನಲ್ಲಿ ಹಮಾಸ್ ಉಗ್ರರಿಂದ ನಡೆಸಲಾದ ದಾಳಿ ಮಾದರಿಯಲ್ಲಿ ಅಯೋಧ್ಯೆ ರಾಮಮಂದಿರದ ಮೇಲೆ ದಾಳಿ ನಡೆಸುವ ಸಂಚನ್ನು ಉಗ್ರರು ರೂಪಿಸಿದ್ದಾರೆ. ಆ ಮೂಲಕ ಕಾಶ್ಮೀರ ರೀತಿ ಅಯೋಧ್ಯೆಯನ್ನು ವಿವಾದಿತ ಭೂಮಿಯನ್ನಾಗಿ ಪರಿವರ್ತಿಸುವುದು, ಹಿಂದೂಗಳ ಶ್ರದ್ಧಾ ಕೇಂದ್ರವನ್ನು ರಕ್ತಸಿಕ್ತಗೊಳಿಸಿ ಭಕ್ತರು ಭೇಟಿ ನೀಡಲು ಅಂಜುವಂತೆ ಮಾಡುವುದು ಇವರ ಸಂಚಾಗಿದೆ. ಪಾಕಿಸ್ತಾನದ ಅಲ್ ಖೈದಾ ಹಾಗೂ ಲಷ್ಕರ್ ಭಯೋತ್ಪಾದಕ ಸಂಘಟನೆಗಳು ಈಗಾಗಲೇ ಮಹತ್ವದ ಚರ್ಚೆ ನಡೆಸಿ ದಾಳಿಗೆ ಸಜ್ಜಾಗಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆ ಸ್ಥಾಪನೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ. ಪ್ರತಿಷ್ಠಾಪನೆಗೆ 100 ಕ್ವಿಂಟಲ್ ಅಕ್ಷತೆ ಬಳಸಲು, ಪೂಜೆ ಬಳಿಕ ದೇಶಾದ್ಯಂತ ಭಕ್ತರಿಗೆ ವಿತರಣೆ ಮಾಡಲು ಸರ್ಕಾರ ಯೋಜಿಸಿದೆ.
ರಾಮಮಂದಿರ ಮೇಲೆ ಭಯೋತ್ಪಾದಕ ದಾಳಿ ಮಾಹಿತಿ ಪಡೆಯುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ಭದ್ರತೆ ಹೆಚ್ಚಿಸಿದೆ. ಆಯೋಧ್ಯೆಯಲ್ಲಿ ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲಾಗಿದೆ. ಉತ್ತರ
ಪ್ರದೇಶಕ್ಕೆ ಆಗಮಿಸುವ ವಾಹನಗಳು, ಆಯೋಧ್ಯೆ ನಗರ, ಹೊಟೆಲ್ ಸೇರಿದಂತೆ ಎಲ್ಲಾ ಕಡೆಗಳಲ್ಲಿ ತಪಾಸಣೆಗಳು ನಡೆಯುತ್ತಿದೆ.
ಕೇಂದ್ರ ಸರ್ಕಾರ ಈ ಕುರಿತು ಉತ್ತರ ಪ್ರದೇಶ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಆಯೋಧ್ಯೆ ಸೇರಿ ಉತ್ತರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ದೇಶದ ಗಡಿಯಲ್ಲಿ ಹೆಚ್ಚಿನ
ನಿಗಾ ವಹಿಸಲಾಗಿದೆ. ಇಷ್ಟೇ ಅಲ್ಲ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರದಲ್ಲೂ ಹದ್ದಿನ ಕಣ್ಣು ವಿಸ್ತರಿಸಲಾಗಿದೆ.
ಇದನ್ನೂ ಓದಿ: Ram Mandir: ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ, ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ