1. ಕತಾರ್‌ನಲ್ಲಿ ಮರಣದಂಡನೆಗೊಳಗಾಗಿದ್ದ 8 ನೌಕಾಯೋಧರ ಬಿಡುಗಡೆ, ಭಾರತ ತಲುಪಿದ 7 ಯೋಧರು
ಹೊಸದಿಲ್ಲಿ: ಕತಾರ್‌ನಲ್ಲಿ (Qatar) ಬೇಹುಗಾರಿಕೆ (Espionage) ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ಎಂಟು ಭಾರತೀಯ ನೌಕಾಪಡೆ ಯೋಧರನ್ನು (Indian Navy Veterans) ಬಿಡುಗಡೆ ಮಾಡಲಾಗಿದೆ ಎಂದು ಸರಕಾರ ಇಂದು ಮುಂಜಾನೆ ತಿಳಿಸಿದೆ. ಅವರಲ್ಲಿ ಏಳು ಮಂದಿ ಈ ಮಧ್ಯಪ್ರಾಚ್ಯ ದೇಶದಲ್ಲಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇದು ಭಾರತದ ರಾಜತಾಂತ್ರಿಕ (Indian diplomacy) ಜಾಣ್ಮೆ, ಕತಾರ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಂದಿರುವ ಸೌಹಾರ್ದ ಸಂಬಂಧಕ್ಕೆ ದೊರೆತ ಜಯವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : PM Narendra Modi: ಮೋದಿ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ಕತಾರ್‌ನಿಂದ ಬಿಡುಗಡೆಗೊಂಡ ನೌಕಾಯೋಧರ ಪ್ರಶಂಸೆ
2. ಸದನದಲ್ಲಿ ಜೈ ಶ್ರೀರಾಮ್ Vs ಭಾರತ್ ಮಾತಾ ಕೀ ಜೈ!
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ (Karnataka Budget Session 2024) ಕೇಸರಿ ಶಾಲು, ಜೈ ಶ್ರೀರಾಂ, ಭಾರತ್ ಮಾತಾ ಕೀ ಜೈ, ಜೈ ಭೀಮ್ ಮೊದಲಾದ ಘೋಷಣೆಗಳು ಮೊಳಗಿ ಹೊಸ ಇತಿಹಾಸವನ್ನೇ ಬರೆದವು. ಸದನದಲ್ಲಿ ಜೈ ಶ್ರೀರಾಂ (Jai Shri Ram) ಘೋಷಣೆ ಮೊಳಗಿಸಿದ್ದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. ವಿಶ್ವಾಸಮತ ಗೆದ್ದ ಬಿಹಾರ ಸಿಎಂ ನಿತೀಶ್ ಕುಮಾರ್
ಪಾಟ್ನಾ: ಬಿಹಾರ ಅಸೆಂಬ್ಲಿಯಲ್ಲಿ (Bihar Assembly Assembly) ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಶ್ವಾಸಮತವನ್ನು ಗೆದ್ದಿದ್ದಾರೆ(vote of confidence). ಸರ್ಕಾರದ ಪರ 125 ಮತಗಳು ಚಲಾವಣೆಯಾದರೆ, ವಿರೋಧದಲ್ಲಿ 112 ಮತಗಳು ಚಲಾವಣೆಯಾದವು. ಈ ನಡುವೆ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ವಿರೋಧಿ ಬಣದಲ್ಲಿರುವ ತೇಜಸ್ವಿ ಯಾದವ್ (Tejaswi Yadav) ನಿವಾಸಕ್ಕೆ ಭಾರಿ ಪೊಲೀಸ್ ಸರ್ಪಕಾವಲು ಹಾಕಲಾಗಿತ್ತು. 243 ಸದಸ್ಯರ ವಿಧಾನಸಭೆ ಬಲದಲ್ಲಿ ಸರಳ ಬಹುಮತಕ್ಕೆ 122 ಸದಸ್ಯರ ಬೆಂಬಲ ಬೇಕು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ರಾಮನ ಅವಹೇಳನ ಮಾಡಿದ್ದ ಕ್ರೈಸ್ತ ಶಿಕ್ಷಕಿ ಸಸ್ಪೆಂಡ್; ಕುಣಿದು ಸಂಭ್ರಮಿಸಿದ ವಿದ್ಯಾರ್ಥಿಗಳು
ಮಂಗಳೂರು: ಹಿಂದು ಧರ್ಮ ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಗರದ (Mangalore News) ಸಂತ ಜೆರೊಸಾ ಶಾಲೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪೋಷಕರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ, ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಅಮಾನತು ಮಾಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ತಮಿಳುನಾಡು ವಾದಕ್ಕೆ CWRC ಅಸ್ತು; ಮಾರ್ಚ್‌ವರೆಗೆ ಕಾವೇರಿ ನೀರು ಬಿಡುಗಡೆಗೆ ಸೂಚನೆ
ಬೆಂಗಳೂರು: ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ರಾಜ್ಯದೆಲ್ಲೆಡೆ ಬರ ಪರಿಸ್ಥಿತಿಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಂತಹ ಸಂದರ್ಭದಲ್ಲೇ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಮತ್ತೆ ಬರೆ ಎಳೆದಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ CWDTಯ ಆದೇಶದ ಪ್ರಕಾರ ಕಾವೇರಿ ನೀರು (Cauvery Dispute) ಹರಿಸಬೇಕು ಎಂದು ರಾಜ್ಯಕ್ಕೆ CWRC ಸೂಚಿಸಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ಕಾಂಗ್ರೆಸ್ ತೊರೆದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವಾಣ್, ಬಿಜೆಪಿ ಸೇರ್ಪಡೆ ಚರ್ಚೆ
ಮುಂಬಯಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಸಂಸದ ಅಶೋಕ್ ಚವಾಣ್ ಅವರು (Ashok Chavan Resigns to Congress) ಕಾಂಗ್ರೆಸ್ ತೊರೆದಿದ್ದಾರೆ. ಸಾರ್ವತ್ರಿಕ ಚುನಾವಣೆ (Lok Sabha Election 2024) ಮತ್ತು ರಾಜ್ಯ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಇದು ರಾಜ್ಯ ಕಾಂಗ್ರೆಸ್‌ಗೆ ದೊಡ್ಡ ಹೊಡೆತವಾಗಿದೆ. ಚವಾಣ್ ಬಿಜೆಪಿ (BJP) ಸೇರಲಿದ್ದಾರೆ ಎಂಬ ಮಾಹಿತಿ ದಟ್ಟವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. ಷೇರುಪೇಟೆ ತಲ್ಲಣ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ!
Sensex) ನಷ್ಟದೊಂದಿಗೆ ತಮ್ಮ ವ್ಯವಹಾರವನ್ನು ಅಂತ್ಯಗೊಳಿಸಿದೆ. ಹೂಡಿಕೆದಾರರಿಗೆ ಸುಮಾರು 7 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಿಫ್ಟಿ 50166 ಅಂಕಗಳು ಅಥವಾ ಶೇ.0.76 ರಷ್ಟು ಕಡಿಮೆಯಾಗಿ 21,616.05ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 523 ಪಾಯಿಂಟ್ ಅಥವಾ 0.73 ಶೇಕಡಾ ಕುಸಿದು 71,072.49 ಕ್ಕೆ ಕೊನೆಗೊಂಡಿತು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಪಾಕಿಸ್ತಾನೀಯರು ಭಾರತದ ಆಸ್ತಿ…ʼʼ ಲಾಹೋರ್‌ನಲ್ಲಿ ಮಣಿಶಂಕರ್ ಅಯ್ಯರ್‌ರಿಂದ ಪಾಕಿಗಳ ಶ್ಲಾಘನೆ
ಲಾಹೋರ್: ಕಾಂಗ್ರೆಸ್ (Congress) ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ (Mani Shankar Aiyar) ಅವರು ಪಾಕಿಸ್ತಾನದಲ್ಲಿ (Pakistan) ಅಲ್ಲಿನವರ ಆತಿಥ್ಯವನ್ನು ಶ್ಲಾಘಿಸಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಟೀಕಿಸಿದ್ದಾರೆ. ಪಾಕಿಸ್ತಾನೀಯರನ್ನು ಅವರು “ಭಾರತದ ಅತಿದೊಡ್ಡ ಆಸ್ತಿ” ಎಂದು ಹೇಳಿದ್ದು, ಅವರ ಹೇಳಿಕೆಯೀಗ ಬಿಜೆಪಿಗರ ಕೆಂಗಣ್ಣಿಗೆ ತುತ್ತಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ರಾಜ್ಕೋಟ್ ಟೆಸ್ಟ್ನಿಂದ ಕೆಎಲ್ ರಾಹುಲ್ ಔಟ್, ದೇವದತ್ ಪಡಿಕ್ಕಲ್ಗೆ ಚಾನ್ಸ್
ಬೆಂಗಳೂರು: ಗುಜರಾತ್ನ ರಾಜ್ಕೊಟ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಕೆಎಲ್ ರಾಹುಲ್ (KL Rahul) ಹೊರಗುಳಿದಿದ್ದಾರೆ. ಅವರ ಬದಲಿ ಕರ್ನಾಟಕ ತಂಡದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಹೆಲ್ಮೆಟ್ ಹಾಕದ್ದನ್ನು ಪ್ರಶ್ನಿಸಿದ ಪೊಲೀಸಪ್ಪನ ಕೈ ಕಚ್ಚಿದ ಭೂಪ!
ಬೆಂಗಳೂರು: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕದಿದ್ದರೆ (Helmet Issue) ಪೊಲೀಸರು ತಡೆಯುವುದು, ಬೆನ್ನಟ್ಟುವುದು ಮೊದಲಾದ ಘಟನೆಗಳು ಈಗಲೂ ನಡೆಯುತ್ತಿವೆ. ಆದರೆ, ಹೀಗೆ ತಡೆದು ನಿಲ್ಲಿಸಿದಾಗ ದಂಡ ಕಟ್ಟಿಸಿಕೊಳ್ಳುವುದು ಮಾತ್ರವಲ್ಲ, ಇರೋ ಬರೋ ದಾಖಲೆಗಳನ್ನೆಲ್ಲ ಕೇಳುತ್ತಾರೆ. ಹೀಗಾಗಿ ಕೆಲವರು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಬೆಂಗಳೂರಿನಲ್ಲಿ ಹೀಗೆ ಸ್ಕೂಟರ್ ಸವಾರರೊಬ್ಬರನ್ನು ಪೊಲೀಸರು ತಡೆದು ನಿಲ್ಲಿಸಿದಾಗ (police stop Scooter rider) ಆತ ಪೊಲೀಸರ ಕೈಗೇ ಕಚ್ಚಿದ್ದಾನೆ (Scooter rider bites finger). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.