3. ಹೆಚ್ಚುವರಿ ಡಿಸಿಎಂ ಹುದ್ದೆ ಬೇಕಾ? ಮೊದಲು ಲೋಕಸಭೆಗೆ ಸ್ಪರ್ಧಿಸಿ; 8 ಸಚಿವರಿಗೆ ಡಿಕೆಶಿ ಮಾಸ್ಟರ್ ಸ್ಟ್ರೋಕ್ ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಆಂತರಿಕ ಭಿನ್ನಮತ ದಿನೇ ದಿನೆ ಹೆಚ್ಚುತ್ತಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಬಣಗಳ ನಡುವಿನ ತಿಕ್ಕಾಟಗಳು ಜೋರಾಗಿವೆ. ಹೇಗಾದರೂ ಮಾಡಿ ಡಿ.ಕೆ. ಶಿವಕುಮಾರ್ ಅವರನ್ನು ಬಗ್ಗುಬಡಿಯಬೇಕು ಎಂದು ಪಣತೊಟ್ಟಿರುವ ದಲಿತ ಮತ್ತು ಸಿಎಂ ಆಪ್ತ ಸಚಿವರು ಹೆಚ್ಚುವರಿ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala), ಇಂಥ ಪ್ರಸ್ತಾವನೆ ತಮ್ಮ ಮುಂದೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೂ, ಎದುರಾಳಿ ಬಣ ಪ್ರಯತ್ನ ಬಿಡದ ಹಿನ್ನೆಲೆಯಲ್ಲಿ ಡಿಕೆಶಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಇಂಥ ಹೇಳಿಕೆ ಕೊಡುವವರಿಗೆ ಎಲೆಕ್ಷನ್ ಜವಾಬ್ದಾರಿ ಕೊಡಿ ಎಂದು ಸಲಹೆ ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ಜ.17ಕ್ಕೆ ಲಾರಿ ಚಾಲಕರ ಮುಷ್ಕರ; ಪೆಟ್ರೋಲ್, ಡೀಸೆಲ್ ಸಿಗದೇ ಸವಾರರಿಗೆ ಆಗುತ್ತಾ ಎಫೆಕ್ಟ್ ಬೆಂಗಳೂರು: ಹಿಟ್ ಆ್ಯಂಡ್ ರನ್ (Hit And Run law) ಅಪಘಾತ ಪ್ರಕರಣದಲ್ಲಿ ಹೊಸ ತಿದ್ದುಪಡಿ ಕೈ ಬಿಡುವಂತೆ ಆಗ್ರಹಿಸಿ ಜನವರಿ 17 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ (Lorry strike) ಕರೆ ನೀಡಲಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ಅಫ್ಘಾನಿಸ್ತಾನದಲ್ಲಿ ಭೂಕಂಪ; ನಡುಗಿದ ಪಾಕಿಸ್ತಾನ, ಉತ್ತರ ಭಾರತ! ನವದೆಹಲಿ: ಪಾಕಿಸ್ತಾನ(Pakistan), ಅಫ್ಘಾನಿಸ್ತಾನ(Afghanistan) ಮತ್ತು ಉತ್ತರ ಭಾರತದಲ್ಲಿ (North India) ಗುರುವಾರ ಮಧ್ಯಾಹ್ನ ಭೂಮಿ ಕಂಪಿಸಿದೆ(Earthquake). ಪಾಕಿಸ್ತಾನದ ಕೆಲವು ಭಾಗಗಳಲ್ಲಿ 6.0 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ಹೇಳಿದೆ. ಅಫ್ಘಾನಿಸ್ತಾನದ ಹಿಂದು ಕುಶ್ (Hindu Kush) ಪ್ರದೇಶವು ಭೂಕಂಪದ ಕೇಂದ್ರಬಿಂದುವಾಗಿದೆ(Epicenter). ಮತ್ತೊಂದೆಡೆ, ದೆಹಲಿ (New Delhi) ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಲಘು ಭೂಕಂಪವಾಗಿದೆ. ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ಜ.31ರಿಂದ ಬಜೆಟ್ ಅಧಿವೇಶನ; ಕಿಸಾನ್ ಸಮ್ಮಾನ್ ನಿಧಿ ಹಣ ಡಬಲ್? ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನವು (Budget Session) ಜನವರಿ 31ರಿಂದ ಆರಂಭವಾಗಿ, ಫೆಬ್ರವರಿ 9ರವರೆಗೂ ಮುಂದುವರಿಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಕೇಂದ್ರ ಬಜೆಟ್ (Interim Budget) ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಅಧಿವೇಶನದ ಆರಂಭದ ದಿನ ಎರಡೂ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (rashtrapati draupadi murmu) ಅವರು ಮಾತನಾಡಲಿದ್ದು, ಪ್ರಮುಖ ಹಣಕಾಸು ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಜಾಮೀನು ಸಿಗುತ್ತಾ? ಜ. 17ಕ್ಕೆ ತೀರ್ಪು ಬೆಂಗಳೂರು: ಮುಸ್ಲಿಮ್ ಮಹಿಳೆಯರ ವಿರುದ್ಧ ಅವಹೇಳನಕಾರಿ (Defamatory Statement) ಹೇಳಿಕೆ ನೀಡಿದ ಆರೋಪ ಹೊತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ (RSS Leader) ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakara Bhat) ಅವರಿಗೆ ಜಾಮೀನು ಸಿಗುವುದೇ (Bail Application) ಎಂಬುದು ಜನವರಿ 17ಕ್ಕೆ ತೀರ್ಮಾನವಾಗಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ನೈತಿಕ ಪೊಲೀಸ್‌ಗಿರಿಗೆ ಬಿಗ್ ಟ್ವಿಸ್ಟ್; ಪುಂಡರಿಂದ ಯುವತಿಯ ಗ್ಯಾಂಗ್‌ರೇಪ್ ಜನವರಿ 8ರಂದು ಹಾನಗಲ್‌ನ ಲಾಡ್ಜ್ (Attack in Lodge) ಒಂದರಲ್ಲಿ ಜತೆಗಿದ್ದ ಮುಸ್ಲಿಂ ಮಹಿಳೆ (Muslim Woman) ಮತ್ತು ಹಿಂದು ಪುರುಷನ ಮೇಲೆ ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿದ್ದ ಮುಸ್ಲಿಂ ಪುಂಡ ಯುವಕರು ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿರುವ ಭಯಾನಕ ಘಟನೆ ಈಗ ಬೆಳಕಿಗೆ ಬಂದಿದೆ.ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ. ಈ ಸುದ್ದಿಯನ್ನೂ ಓದಿ : Moral Policing : ಹಿಂದು ಹುಡುಗ್ರ ಜತೆ ತಿರುಗುವ ಮುಸ್ಲಿಂ ಹುಡುಗೀರೇ ಟಾರ್ಗೆಟ್!
9. ಮಗಳ ಮದುವೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಆಮೀರ್ ಖಾನ್ ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಪುತ್ರಿ, ಇರಾ ಖಾನ್ (Ira Khan and Nupur Wedding) ಜನವರಿ 10ರಂದು ಉದಯಪುರದಲ್ಲಿ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ವಿವಾಹವಾದರು. ಮಗಳ ಮದುವೆಯಲ್ಲಿ ಆಮೀರ್ ಭಾವುಕರಾಗಿ ಕಣ್ಣೀರಿಟ್ಟರು. ಮಗಳು ಇರಾಳ ಮದುವೆಗೂ ಮುನ್ನ ಆಮೀರ್ ಖಾನ್ ಸಂದರ್ಶನವೊಂದರಲ್ಲಿ ಮಗಳ ಮದುವೆಗೆ ನಾನು ಅಳುವುದು ಖಂಡಿತ ಎಂದು ಹೇಳಿದ್ದರು. ಇದೀಗ ಆಮೀರ್ ಕಣ್ಣು ಒರೆಸಿಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. 110 ವರ್ಷ ಬದುಕಿದ್ದ ಶತಾಯುಷಿ ಅಜ್ಜಿ ಇನ್ನಿಲ್ಲ. ಕೊನೆವರೆಗೂ ಪವರ್‌ಫುಲ್! ವಿಜಯಪುರ: ಈಗೀಗ 60 ವರ್ಷ ಬದುಕೋದೇ ಕಷ್ಟವಾಗಿರುವ ಈ ಕಾಲದಲ್ಲಿ ವಿಜಯಪುರದ ಮಹಿಳೆಯೊಬ್ಬರು (Vijayapura Woman) 110 ವರ್ಷದ ಪೂರ್ಣ ಬಾಳುವೆಯನ್ನು (centenarian woman) ಬಾಳಿ ಇದೀಗ ಇಹದ ಯಾತ್ರೆ ಮುಗಿಸಿದ್ದಾರೆ. ವಿಜಯಪುರ ನಗರದ ಇಬ್ರಾಹಿಂಪುರ ಏರಿಯಾ ನಿವಾಸಿ ಭಾಗವ್ವ ಕೋಲ್ಹಾರ ಅವರು ತಮ್ಮ 110ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ. ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: