ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಗುಜರಾತ್ ಎಲೆಕ್ಷನ್‌ಗೆ ಸಂಬಂಧಿಸಿದಂತೆ ಐದು ಎಕ್ಸಿಟ್ ಪೋಲ್‌ಗಳಲ್ಲಿ (Exit Poll 2022) ಬಿಜೆಪಿಗೆ ಭರ್ಜರಿ ದೊರೆಯಲಿದ್ದು, ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಲಿದೆ. ಆದರೆ, ಕಾಂಗ್ರೆಸ್‌ಗೆ ಮತ್ತೆ ನಿರಾಸೆ ಎದುರಾಗಿದ್ದು, ಕಳೆದ ಬಾರಿಗಿಂತಲೂ ಕಡಿಮೆ ಪ್ರದರ್ಶನವನ್ನು ತೋರುವ ಸಾಧ್ಯತೆಗಳನ್ನು ಎಕ್ಸಿಟ್ ಪೋಲ್‌ಗಳು ಹೊರ ಹಾಕಿವೆ. ಇನ್ನು ಭಾರೀ ಸದ್ದು ಮಾಡಿದ್ದ ಆಪ್ ಗುಜರಾತ್‌ನಲ್ಲಿ ನೆಲಕಚ್ಚಲಿದೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣಾ ಮತದಾನೋತ್ತರ ಸಮೀಕ್ಷೆಯಲ್ಲೂ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿಗೆ ಅಧಿಕಾರ ದೊರೆಯಲಿದೆ. ಒಂದೆರಡು ಸಮೀಕ್ಷೆಗಳು ಅತಂತ್ರ ಸ್ಥಿತಿ ನಿರ್ಮಾಣವಾಗುವ ಭವಿಷ್ಯವನ್ನು ನುಡಿದಿವೆ. ಇಲ್ಲೂ ಆಪ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ ಎಂಬ ಅಂಶವು ಎಕ್ಸಿಟ್ ಪೋಲ್‌ಗಳಿಂದ ವ್ಯಕ್ತವಾಗಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶವು ಡಿಸೆಂಬರ್ 8ರಂದು ಪ್ರಕಟವಾಗಲಿದೆ.
ಸೋಮವಾರ ಪ್ರಕಟವಾದ ಎಕ್ಸಿಟ್ ಪೋಲ್‌ಗಳ ಅಪ್‌ಡೇಟ್ಸ್ ಇಲ್ಲಿದೆ………..
ಗುಜರಾತ್ ಒಟ್ಟು ಸ್ಥಾನ-182, ಮ್ಯಾಜಿಕ್ ನಂಬರ್-92
ಟೈಮ್ಸ್ ನೌ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವು
ಬಿಜೆಪಿ- 139
ಕಾಂಗ್ರೆಸ್- 30
ಆಪ್- 11
ಇತರೆ- 02
ಗುಜರಾತ್‌ನಲ್ಲಿ ಸತತ ಏಳನೇ ಬಾರಿಗೂ ಬಿಜೆಪಿಯದ್ದೇ ಪಾರುಪತ್ಯ
ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ
ಒಟ್ಟು ಸ್ಥಾನ 182
ಮ್ಯಾಜಿಕ್ ನಂಬರ್ 92
ಬಿಜೆಪಿ 117-140
ಕಾಂಗ್ರೆಸ್ 34-51
ಆಪ್ 06-13
ಇತರೆ 01-02
ಹಿಮಾಚಲ ಪ್ರದೇಶದಲ್ಲಿ ಕಮಲ ಕಮಾಲ್
ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ
ಒಟ್ಟು ಸ್ಥಾನ 68
ಮ್ಯಾಜಿಕ್ ನಂಬರ್ 35
ಬಿಜೆಪಿ 32-40
ಕಾಂಗ್ರೆಸ್ 27-34
ಆಪ್ 00
ಇತರೆ 01-02
ಗುಜರಾತ್‌ನಲ್ಲಿ ಸತತ ಏಳನೇ ಬಾರಿಗೂ ಬಿಜೆಪಿಯದ್ದೇ ಪಾರುಪತ್ಯ
ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ
ಒಟ್ಟು ಸ್ಥಾನ 182
ಮ್ಯಾಜಿಕ್ ನಂಬರ್ 92
ಬಿಜೆಪಿ 117-140
ಕಾಂಗ್ರೆಸ್ 34-51
ಆಪ್ 06-13
ಇತರೆ 01-02
ಹಿಮಾಚಲ ಪ್ರದೇಶ- ಒಟ್ಟು ಸ್ಥಾನ 68, ಮ್ಯಾಜಿಕ್ ನಂಬರ್ -35
ರಿಪಬ್ಲಿಕ್ ಎಕ್ಸಿಟ್ ಪೋಲ್
ಬಿಜೆಪಿ- 34ರಿಂದ 39
ಕಾಂಗ್ರೆಸ್- 28ರಿಂದ 33