ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಗುಜರಾತ್ ಎಲೆಕ್ಷನ್‌ಗೆ ಸಂಬಂಧಿಸಿದಂತೆ ಐದು ಎಕ್ಸಿಟ್ ಪೋಲ್‌ಗಳಲ್ಲಿ (Exit Poll 2022) ಬಿಜೆಪಿಗೆ ಭರ್ಜರಿ ದೊರೆಯಲಿದ್ದು, ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಲಿದೆ. ಆದರೆ, ಕಾಂಗ್ರೆಸ್‌ಗೆ ಮತ್ತೆ ನಿರಾಸೆ ಎದುರಾಗಿದ್ದು, ಕಳೆದ ಬಾರಿಗಿಂತಲೂ ಕಡಿಮೆ ಪ್ರದರ್ಶನವನ್ನು ತೋರುವ ಸಾಧ್ಯತೆಗಳನ್ನು ಎಕ್ಸಿಟ್ ಪೋಲ್‌ಗಳು ಹೊರ ಹಾಕಿವೆ. ಇನ್ನು ಭಾರೀ ಸದ್ದು ಮಾಡಿದ್ದ ಆಪ್ ಗುಜರಾತ್‌ನಲ್ಲಿ ನೆಲಕಚ್ಚಲಿದೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣಾ ಮತದಾನೋತ್ತರ ಸಮೀಕ್ಷೆಯಲ್ಲೂ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿಗೆ ಅಧಿಕಾರ ದೊರೆಯಲಿದೆ. ಒಂದೆರಡು ಸಮೀಕ್ಷೆಗಳು ಅತಂತ್ರ ಸ್ಥಿತಿ ನಿರ್ಮಾಣವಾಗುವ ಭವಿಷ್ಯವನ್ನು ನುಡಿದಿವೆ. ಇಲ್ಲೂ ಆಪ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ ಎಂಬ ಅಂಶವು ಎಕ್ಸಿಟ್ ಪೋಲ್‌ಗಳಿಂದ ವ್ಯಕ್ತವಾಗಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶವು ಡಿಸೆಂಬರ್ 8ರಂದು ಪ್ರಕಟವಾಗಲಿದೆ.
ಸೋಮವಾರ ಪ್ರಕಟವಾದ ಎಕ್ಸಿಟ್ ಪೋಲ್‌ಗಳ ಅಪ್‌ಡೇಟ್ಸ್ ಇಲ್ಲಿದೆ………..
ಗುಜರಾತ್‌ನಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ
ಟಿವಿ9-ಭಾರತವರ್ಷ್ ಸಮೀಕ್ಷೆ
ಒಟ್ಟು ಸ್ಥಾನ 182
ಮ್ಯಾಜಿಕ್ ನಂಬರ್ 92
ಬಿಜೆಪಿ 125-130
ಕಾಂಗ್ರೆಸ್ 40-50
ಆಪ್ 3-5
ಇತರೆ 03-07
ಗುಜರಾತ್ ವಿಧಾನಸಭೆ ಚುನಾವಣೆ- ಜನ್ ಕಿ ಬಾತ್ ಸಮೀಕ್ಷೆ
ಒಟ್ಟು ಸ್ಥಾನ- 182, ಮ್ಯಾಜಿಕ್ ನಂಬರ್- 92
ಬಿಜೆಪಿ- 117ರಿಂದ 140
ಕಾಂಗ್ರೆಸ್- 34ರಿಂದ 51
ಆಪ್- 06ರಿಂದ 13
ಇತರ- 1ರಿಂದ 2
ಹಿಮಾಚಲ ಪ್ರದೇಶದಲ್ಲಿ ಫಲಿತಾಂಶ ಅತಂತ್ರ
ಟಿವಿ9-ಭಾರತವರ್ಷ್ ಸಮೀಕ್ಷೆ
ಒಟ್ಟು ಸ್ಥಾನ 68
ಮ್ಯಾಜಿಕ್ ನಂಬರ್ 35
ಬಿಜೆಪಿ 32-34
ಕಾಂಗ್ರೆಸ್ 30-32
ಆಪ್ 00
ಇತರೆ 03-05
ದೆಹಲಿ ಮಹಾನಗರ ಪಾಲಿಕೆ ಚುನಾವಣೆ
ಟೈಮ್ಸ್ ನೌ ಸಮೀಕ್ಷೆಯಲ್ಲೂ ಆಪ್‌ಗೆ ಮೇಲುಗೈ
ಪಕ್ಷ ವಾರ್ಡ್
ಬಿಜೆಪಿ 146-156
ಆಪ್ 84-94
ಕಾಂಗ್ರೆಸ್ 06-10
ಇತರೆ 00-04
ಒಟ್ಟು 250
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್‌ಗೆ ಮುನ್ನಡೆ
ಇಂಡಿಯಾ ಟುಡೇ ಸಮೀಕ್ಷೆ
ಪಕ್ಷ ವಾರ್ಡ್
ಬಿಜೆಪಿ 69-91
ಆಪ್ 149-171
ಕಾಂಗ್ರೆಸ್ 03-07
ಇತರೆ 05-09
ಒಟ್ಟು 250