Site icon Vistara News

Exit Poll 2022 | ಎಲ್ಲ ಸಮೀಕ್ಷೆಯಲ್ಲೂ ಕಾಂಗ್ರೆಸ್ ‘ಎಕ್ಸಿಟ್’, ಬಿಜೆಪಿಗೆ ಗೆಲುವಿನ ಸ್ವೀಟ್! ಡಿ.8ರತ್ತ ನೆಟ್ಟ ಎಲ್ಲರ ದೃಷ್ಟಿ

Exit Polls 2022

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಗುಜರಾತ್ ಎಲೆಕ್ಷನ್‌ಗೆ ಸಂಬಂಧಿಸಿದಂತೆ ಐದು ಎಕ್ಸಿಟ್ ಪೋಲ್‌ಗಳಲ್ಲಿ (Exit Poll 2022) ಬಿಜೆಪಿಗೆ ಭರ್ಜರಿ ದೊರೆಯಲಿದ್ದು, ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಲಿದೆ. ಆದರೆ, ಕಾಂಗ್ರೆಸ್‌ಗೆ ಮತ್ತೆ ನಿರಾಸೆ ಎದುರಾಗಿದ್ದು, ಕಳೆದ ಬಾರಿಗಿಂತಲೂ ಕಡಿಮೆ ಪ್ರದರ್ಶನವನ್ನು ತೋರುವ ಸಾಧ್ಯತೆಗಳನ್ನು ಎಕ್ಸಿಟ್ ಪೋಲ್‌ಗಳು ಹೊರ ಹಾಕಿವೆ. ಇನ್ನು ಭಾರೀ ಸದ್ದು ಮಾಡಿದ್ದ ಆಪ್ ಗುಜರಾತ್‌ನಲ್ಲಿ ನೆಲಕಚ್ಚಲಿದೆ.

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣಾ ಮತದಾನೋತ್ತರ ಸಮೀಕ್ಷೆಯಲ್ಲೂ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿಗೆ ಅಧಿಕಾರ ದೊರೆಯಲಿದೆ. ಒಂದೆರಡು ಸಮೀಕ್ಷೆಗಳು ಅತಂತ್ರ ಸ್ಥಿತಿ ನಿರ್ಮಾಣವಾಗುವ ಭವಿಷ್ಯವನ್ನು ನುಡಿದಿವೆ. ಇಲ್ಲೂ ಆಪ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ ಎಂಬ ಅಂಶವು ಎಕ್ಸಿಟ್ ಪೋಲ್‌ಗಳಿಂದ ವ್ಯಕ್ತವಾಗಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶವು ಡಿಸೆಂಬರ್ 8ರಂದು ಪ್ರಕಟವಾಗಲಿದೆ.

ಸೋಮವಾರ ಪ್ರಕಟವಾದ ಎಕ್ಸಿಟ್ ಪೋಲ್‌ಗಳ ಅಪ್‌ಡೇಟ್ಸ್ ಇಲ್ಲಿದೆ………..

Mallikarjun Tippar

ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಅಂತ್ಯ. ಶೇ.58.68ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎಕ್ಸಿಟ್ ಪೋಲ್ ನಿರೀಕ್ಷಿಸಿ…..

Mallikarjun Tippar

ಕೆಲವೇ ಹೊತ್ತಿನಲ್ಲಿ ಹಿಮಾಚಲ ಪ್ರದೇಶದ ಮತದಾನೋತ್ತರ ಸಮೀಕ್ಷೆ. ನಿರೀಕ್ಷಿಸಿ….

Mallikarjun Tippar

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ನವೆಂಬರ್ 12ರಂದು ಮತದಾನ ನಡೆದಿತ್ತು. ಚುನಾವಣಾ ಆಯೋಗವು ಒಂದೇ ಹಂತದಲ್ಲಿ ಮತದಾನ ನಡೆಸಿ, ಯಶಸ್ವಿಯಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎಲೆಕ್ಷನ್ ಫಲಿತಾಂಶವು ಡಿಸೆಂಬರ್ 8ರಂದು ಪ್ರಕಟವಾಗಲಿವೆ. ಇದಕ್ಕೂ ಮೊದಲು, ಅಂದರೆ ಇಂದು ಸಂಜೆ 6.30ರ ಬಳಿಕ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಗೊಳ್ಳಲಿದೆ. ನಿರೀಕ್ಷಿಸಿ…

Mallikarjun Tippar

ಎರಡನೇ ಹಂತದಲ್ಲಿ ಗುಜರಾತ್‌ನ 14 ಜಿಲ್ಲೆಗಳ 93 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಒಟ್ಟು 833 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿ-ಕಾಂಗ್ರೆಸ್-ಆಪ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Mallikarjun Tippar

ಗುಜರಾತ್ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನವು ಮುಕ್ತಾಯವಾಗಿದ್ದು. 182 ಕ್ಷೇತ್ರಗಳ ಪೈಕಿ ಅಂತಿಮ ಹಂತದಲ್ಲಿ 93 ಕ್ಷೇತ್ರಗಳಿಗೆ ಮತದಾನ ಸೋಮವಾರ ನಡೆಯಿತು. ಶೀಘ್ರವೇ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಲಿದೆ. ನಿರೀಕ್ಷಿಸಿ…

Exit mobile version