ವಾಷಿಂಗ್ಟನ್, ಅಮೆರಿಕ: ಇದೇ ಮೊದಲ ಬಾರಿಗೆ ಅಮೆರಿಕದ (America) ಕ್ಯಾಪಿಟಲ್‌ನಲ್ಲಿ (Capitol) ಹಿಂದು-ಅಮೆರಿಕನ್ ಶೃಂಗಸಭೆಯನ್ನು(Hindu American Summit) ಇಂಡಿಯನ್-ಅಮೆರಿಕನ್ನರು ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕದ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ (House Speaker Kevin McCarthy) ಮಾತನಾಡಲಿದ್ದಾರೆ. ಅಮೆರಿಕದಲ್ಲಿರುವ ಕೆಲವು ಸಂಘಟನೆಗಳು ಹಿಂದೂಗಳ ವಿರುದ್ಧ ಮಸಲತ್ತು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ.
ಇತ್ತೀಚೆಗೆ ರಚನೆಯಾದ ಅಮೆರಿಕನ್ ಫಾರ್ ಹಿಂದೂಸ್(Americans4Hindus) ರಾಜಕೀಯ ಕ್ರಿಯಾ ಸಮಿತಿಯು 20 ಕ್ಕೂ ಹೆಚ್ಚು ಇತರ ಸಮುದಾಯ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿರುವ ಹಿಂದೂ-ಅಮೆರಿಕನ್ ಶೃಂಗಸಭೆಯು ಜೂನ್ 14 ರಂದು ಅಮೆರಿಕದ ಕ್ಯಾಪಿಟಲ್‌ನಲ್ಲಿ ನಡೆಯಲಿದೆ. ಈ ಶೃಂಗಸಭೆಯಲ್ಲ ಹಿಂದೂ ಸಮುದಾಯವು ಎದುರಿಸುತ್ತಿರುವ ಆತಂಕಗಳನ್ನು ಅಮೆರಿಕ ಜನಪ್ರತಿನಿಧಿಗಳ ಮುಂದೆ ಪ್ರಸ್ತುತ ಪಡಿಸಲಿದೆ.
ಫ್ಲೋರಿಡಾ, ನ್ಯೂಯಾರ್ಕ್, ಬೋಸ್ಟನ್, ಟೆಕ್ಸಾಸ್, ಚಿಕಾಗೋ ಮತ್ತು ಕ್ಯಾಲಿಫೋರ್ನಿಯಾದ ಸುಮಾರು 130 ಭಾರತೀಯ ಅಮೆರಿಕನ್ ನಾಯಕರು 20 ಹಿಂದೂ ಮತ್ತು ಭಾರತೀಯ ಸಂಘಟನೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅವರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಾಷಿಂಗ್ಟನ್‌ಗೆ ಆಗಮಿಸುತ್ತಿದ್ದಾರೆ. ಅಮೆರಿಕಾದ್ಯಂತ ಹಿಂದೂಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜಕೀಯವಾಗಿ ತುಂಬಾ ಹಿಂದೆ ಉಳಿದಿದ್ದಾರೆ ಎಂದು ಅಮೆರಿನ್ ಹಿಂದೂಗಳು ತಿಳಿಸಿದ್ದಾರೆ.
ರಾಜಕೀಯವಾಗಿ ನಾವು ಯೋಚಿಸುತ್ತಿದ್ದೇವೆ. ನಾವು ಎಂದಿಗೂ ತಾರತಮ್ಯ ಮಾಡಿಲ್ಲ, ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ದುರದೃಷ್ಟವಶಾತ್, ಸಮಯ ಬದಲಾಗತ್ತಿದೆ. ನಾನು ಕ್ಯಾಲಿಫೋರ್ನಿಯಾದಿಂದ ಬಂದಿದ್ದೇನೆ, ಆದರೆ, ದುರದೃಷ್ಟವಶಾತ್ ಈಗ ಜಾತಿ ಆಧಾರದ ಮೇಲೆ ಗುರುತಿಸಿತ್ತಿದ್ದಾರೆ. ಇದನ್ನು ತಾರತಮ್ಯದ ಅಂಶಗಳಿಗೆ ಸೇರಿಸಲು ಬಯಸುತ್ತಿದ್ದಾರೆ ಎಂದು ಹೃದ್ರೋಗ ತಜ್ಞ ಡಾ.ರೋಮೇಶ್ ಜಾಪ್ರಾ ಹೇಳಿದ್ದಾರೆ. ಇಕ್ವಾಲಿಟಿ ಮತ್ತು ಕೇರ್‌ಗಳಂಥ ಸಂಘಟನೆಗಳು ಹಿಂದೂ ಧರ್ಮದ ವಿರುದ್ಧ ಹೋರಾಡುತ್ತಿವೆ ಎಂದು ಆರೋಪಿಸಿದರು.