ನವ ದೆಹಲಿ: ಇಂಟರ್‌ನೆಟ್ ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಮತ್ತು ಆಲ್ಫಬೆಟ್ ಸಿಇಒ ಸುಂದರ್ ಪಿಚೈ ಅವರು ಕಾರ್ಪೊರೇಟ್ ಜಗತ್ತಿನಲ್ಲಿ ಅತ್ಯಧಿಕ ವೇತನ ಪ್ಯಾಕೇಜ್ ಇರುವ ಸಿಇಒಗಳಲ್ಲಿ ಪ್ರಮುಖರು. 2022ರಲ್ಲಿ ಪಿಚೈ ಅವರು ಅಂದಾಜು 1800 ಕೋಟಿ ರೂ. ಗಳಿಸಿದ್ದಾರೆ. ಇದರಲ್ಲಿ ಸುಮಾರು 1700 ಕೋಟಿ ರೂ.ಗಳನ್ನು ಷೇರುಗಳ ಮೂಲಕ ಪಡೆದಿದ್ದಾರೆ.
ಕಳೆದ ವರ್ಷ ಸುಂದರ್ ಪಿಚೈ ಅವರಿಗೆ ಆದಾಯದಲ್ಲಿ 20% ಇಳಿಕೆ ಆಗಿದ್ದರೂ, 1310 ದಶಲಕ್ಷ ಡಾಲರ್ ಸಂಪತ್ತಿಗೆ ಒಡೆಯರಾಗಿದ್ದಾರೆ. ರೂಪಾಯಿ ಲೆಕ್ಕದಲ್ಲಿ 10,215 ಕೋಟಿ ರೂ.ಗಳಾಗುತ್ತದೆ ಎಂದು ಐಐಎಫ್‌ಎಲ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ( IIFL Hurun India Rich List 2022) ತಿಳಿಸಿದೆ. ಟಾಪ್ 10 wealthiest professional managers ಪಟ್ಟಿಯಲ್ಲೂ ಸುಂದರ್ ಪಿಚೈ ಅವರು ಸ್ಥಾನ ಗಳಿಸಿದ್ದಾರೆ.
ಸುಂದರ್ ಪಿಚೈ ಅವರು ಐಐಟಿ ಖರಗ್‌ಪುರದಲ್ಲಿ ಎಂಜಿನಿಯರಿಂಗ್ ಓದಿದವರು. (metallurgy) ಬೆಳ್ಳಿ ಪದಕ ಪುರಸ್ಕೃತರಾಗಿದ್ದರು. ಅಮೆರಿಕದ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ materials science ವಿಷಯದಲ್ಲಿ ಎಂ.ಎಸ್ ಪದವಿ ಗಳಿಸಿದರು. ಬಳಿಕ ವಾರ್ಟನ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಗಳಿಸಿದರು. (university of pennsylvania)
.@LATAMAirlines just completed a critical migration to Google Cloud, saving 3,400 tons of carbon dioxide emissions and helping the company transform the customer experience & digitize business processes. https://t.co/nqgTLYqmLd
— Thomas Kurian (@ThomasOrTK) June 14, 2023
ಸುಂದರ್ ಪಿಚೈ ಅವರು ಪ್ರಾಡಕ್ಟ್ ಮ್ಯಾನೇಜ್‌ಮೆಂಟ್‌ನ ಮುಖ್ಯಸ್ಥರಾಗಿ ಗೂಗಲ್‌ಗೆ 2004ರಲ್ಲಿ ಸೇರ್ಪಡೆಯಾಗಿದ್ದರು. ಆರಂಭದಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮತ್ತು ಮೋಜಿಲಾ ಫೈರ್‌ಫೋಕ್ಸ್ ಬಳಕೆದಾರರಿಗೆ ಗೂಗಲ್ ಸರ್ಚ್ ಎಂಜಿನ್ ಸುಲಭವಾಗಿ ಸಿಗುವಂತಾಗಲು ಯತ್ನಿಸಿದ್ದರು. ಬಳಿಕ ಗೂಗಲ್‌ನ ಸ್ವಂತ ಬ್ರೌಸರ್ ಕ್ರೋಮ್ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 2008ರಲ್ಲಿ ಗೂಗಲ್ ಕ್ರೋಮ್ ಬಿಡುಗಡೆಯಾಗಿತ್ತು. ಪಿಚೈ ಅವರು ಅದೇ ವರ್ಷ ಪ್ರಾಡಕ್ಟ್ ಡೆವಲಪ್‌ಮೆಂಟ್‌ನ ಉಪಾಧ್ಯಕ್ಷರಾಗಿದ್ದರು.
ಸುಂದರ್ ಪಿಚೈ ಅವರು 2012ರಲ್ಲಿ ಗೂಗಲ್‌ನ ಹಿರಿಯ ಉಪಾಧ್ಯಕ್ಷ ಹುದ್ದೆಗೆ ಬಡ್ತಿ ಪಡೆದರು. 2014ರಲ್ಲಿ ಅವರು ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರಾದರು. ಗೂಗಲ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್ (Android smartphone operating system) ಉಸ್ತುವಾರಿ ವಹಿಸಿದರು.
ಪ್ರತಿಭಾವಂತರಾದ ಸುಂದರ್ ಪಿಚೈ ಕೆಲಸದಲ್ಲೂ ಅಪಾರ ಶ್ರದ್ಧೆ, ಪ್ರಾಮಾಣಿಕತೆಯಿಂದ ಗೂಗಲ್‌ನ ಸಿಇಒ ಆಗಿ 2015 ರಲ್ಲಿ ನೇಮಕವಾದರು. 2019ರಲ್ಲಿ ಗೂಗಲ್‌ನ ಮಾತೃಸಂಸ್ಥೆ ಆಲ್ಫಬೆಟ್ ಕಂಪನಿಗೂ ಸಿಇಒ ಆದರು.
ಕ್ರಿಕೆಟ್‌ನಲ್ಲಿ ಆಸಕ್ತಿ: ಸುಂದರ್ ಪಿಚೈ ಅವರಿಗೆ ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ. ಚೆನ್ನೈನಲ್ಲಿ ಶಾಲಾ ಕ್ರಿಕೆಟ್‌ನಲ್ಲಿ ತಂಡದ ನಾಯಕರಗಿದ್ದರು. ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಎಂದರೆ ಸುಂದರ್ ಪಿಚೈಗೆ ಅಭಿಮಾನ. ಟೆಸ್ಟ್ ಕ್ರಿಕೆಟ್ ಅವರಿಗೆ ಅಚ್ಚುಮೆಚ್ಚು. ಬಾಲ್ಯದಲ್ಲಿ ಕ್ರಿಕೆಟ್‌ನಲ್ಲೇ ಮುಂದುವರಿಯಬೇಕು ಎಂಬ ಆಸೆ ಅವರಿಗೆ ಇತ್ತು.
ಗೂಗಲ್ ಈ ವರ್ಷ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಗೂಗಲ್‌ನಿಂದ ನಿರ್ಗಮಿಸಿದವರು ಓಪನ್‌ಎಐನಂಥ ಸ್ಟಾರ್ಟಪ್‌ಗಳನ್ನು ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಕಳವಳ ಇದೆಯೇ ಎಂಬ ಪ್ರಶ್ನೆಗೆ ಸುಂದರ್ ಪಿಚೈ, ಇಲ್ಲ ಎನ್ನುತ್ತಾರೆ. ಗೂಗಲ್‌ಗೆ ರಾಜೀನಾಮೆ ಕೊಟ್ಟು ಹೋದವರು 2,000 ಸ್ಟಾರ್ಟಪ್ ತಯಾರಿಸಿದ್ದಾರೆ. ಆದರೂ ಗೂಗಲ್‌ಎ ಏನೂ ಆಗಿಲ್ಲ. ಅವರಲ್ಲಿ ಕೆಲವರು ನಮ್ಮ ಕ್ಲೌಡ್ ಗ್ರಾಹಕರೂ ಆಗಿದ್ದಾರೆ. ಹೀಗಾಗಿ ಇದು ಆರೋಗ್ಯಕರ ಬೆಳವಣಿಗೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಇದನ್ನೂ ಓದಿ: IPL 2023: ಚಾಂಪಿಯನ್ ಚೆನ್ನೈ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಗೂಗಲ್ ಸಿಇಒ ಸುಂದರ್ ಪಿಚೈ