Site icon Vistara News

New Year 2023 | ಜಗತ್ತಿನಾದ್ಯಂತ ಹೊಸ ವರ್ಷದ ಸಂಭ್ರಮ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ ಜನ

New Year Celebration

ನವದೆಹಲಿ: ಹೊಸ ಸಂವತ್ಸರವನ್ನು (New Year 2023) ಜಗತ್ತೇ ಸಂಭ್ರಮದಿಂದ ಸ್ವಾಗತಿಸುತ್ತಿದೆ. ಆ ಮೂಲಕ ಹೊಸ ವರ್ಷವನ್ನು ಖುಷಿ, ಸಂತೋಷ, ಸಂಭ್ರಮದಿಂದ ಸ್ವಾಗತಿಸಲಾಗುತ್ತಿದೆ. ಪಟಾಕಿ ಸಿಡಿಸಿ, ಲೇಸರ್‌ ಶೋ ಆಯೋಜಿಸಿ, ಡಾನ್ಸ್‌, ಹಾಡು, ಪಾರ್ಟಿ ಮಾಡಿ ಹೊಸ ವರ್ಷದ ಕ್ಷಣವನ್ನು ಜನ ಅನುಭವಿಸುತ್ತಿದ್ದಾರೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಐತಿಹಾಸಿಕ ಹಾರ್ಬರ್‌ ಸೇತುವೆ ದೀಪಗಳಿಂದ ಅಲಂಕಾರಗೊಂಡಿದೆ.

ಎಲ್ಲೆಲ್ಲಿ ಮೊದಲು ಆಚರಣೆ?
ಆಯಾ ದೇಶಗಳ ಕಾಲಮಾನದ ಪ್ರಕಾರ, ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ದೇಶದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಈಗಾಗಲೇ ಪೆಸಿಫಿಕ್‌ ದ್ವೀಪ ರಾಷ್ಟ್ರಗಳಾದ ಟೊಂಗ, ಸಮೋವಾದಲ್ಲಿ ಹೊಸ ವರ್ಷವನ್ನು ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಇವುಗಳ ನಂತರ ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ, ದಕ್ಷಿಣ ಕೊರಿಯ, ಜಪಾನ್‌ನಲ್ಲಿ ಹೊಸ ಸಂವತ್ಸರದ ಪಾರ್ಟಿ ನಡೆಯುತ್ತಿದೆ. ಈಗಾಗಲೇ ನ್ಯೂಜಿಲ್ಯಾಂಡ್‌ನಲ್ಲಿ ಸಂಭ್ರಮ ಶುರುವಾಗಿದೆ.

ಭಾರತವೂ ಹೊಸ ವರ್ಷಕ್ಕೆ ಸಂಭ್ರಮದ ಮುನ್ನುಡಿ ಬರೆಯಲು ಸಜ್ಜಾಗಿದೆ. ಪ್ರಮುಖ ನಗರಗಳಲ್ಲಿ ಬಿಗಿ ಬಂದೋಬಸ್ತ್‌ ಮಧ್ಯೆಯೇ ಜನ ಪಾರ್ಟಿ ಮಾಡಲು, ಕುಣಿದು ಕುಪ್ಪಳಿಸಲು ಸಜ್ಜಾಗುತ್ತಿದ್ದಾರೆ. ಅದರಲ್ಲೂ, ಕೊರೊನಾ ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷ ಹೆಚ್ಚಿನ ಸಂಭ್ರಮ ಇರಲಿಲ್ಲ. ಆದರೆ, ಈ ಬಾರಿ ಆತಂಕ ಕಡಿಮೆ ಇರುವ ಕಾರಣ ಅದ್ಧೂರಿ ಆಚರಣೆಗೆ ದೇಶಕ್ಕೆ ದೇಶವೇ ಸಿದ್ಧವಾಗಿದೆ.

ಇದನ್ನೂ ಓದಿ | New year 2023 | ಹೊಸ ವರ್ಷದಲ್ಲಿ ವಿವಿಧ ದೇಶಗಳ ವಿಚಿತ್ರ ಆಚರಣೆಗಳು: ಇಲ್ಲಿನ ಮಂದಿಗೆ ಚಡ್ಡಿಬಣ್ಣವೂ ಮುಖ್ಯ!

Exit mobile version