ನವದೆಹಲಿ: 300ಕ್ಕೂ ಹೆಚ್ಚು ಭಾರತೀಯ ಪ್ರಯಾಣಿಕರನ್ನು (Indian Passangers) ನಿಕರಾಗುವಾಗೆ (Nicaragua) ಹೊತ್ತೊಯ್ಯುತ್ತಿದ್ದ ವಿಮಾನವನ್ನು ಫ್ರಾನ್ಸ್‌ನಲ್ಲಿ ಶಂಕಿತ ಮಾನವ ಕಳ್ಳಸಾಗಣೆಯ (Human Trafficking) ಆಧಾರದ ಮೇಲೆ ಲ್ಯಾಂಡಿಂಗ್ ಮಾಡಿಸಿ, ಅದರಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ಅಮೆರಿಕ (USA) ಅಥವಾ ಕೆನಡಾಗೆ (Canada) ವಿಮಾನದಲ್ಲಿದ್ದ ಭಾರತೀಯ ಕಾನೂನುಬಾಹಿರವಾಗಿ ತೆರಳುವ ಉದ್ದೇಶ ಹೊಂದಿದ್ದರು ಎಂದು ಹೇಳಲಾಗುತ್ತಿದೆ.
ಅನಾಮಧೇಯ ನೀಡಿದ ಖಚಿತ ಮಾಹಿತಿಯಾಧಾರದ ಮೇಲೆ, ವಿಮಾನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಈ ವಿಮಾನದಲ್ಲಿ 303 ಭಾರತೀಯ ಪ್ರಯಾಣಿಕರು ಇದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ವಿಮಾನವು ಟೇಕಾಫ್ ಆಗಿದ್ದು, ಪ್ರವಾಸದ ಉದ್ದೇಶಗಳ ಕುರಿತು ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಅಧಿಕಾರಿಗಳು ಶಂಕಿತ ಮಾನವ ಕಳ್ಳ ಸಾಗಣೆಯ ನಿಟ್ಟಿನಲ್ಲೂ ತನಿಖೆ ಮಾಡುತ್ತಿದ್ದಾರೆ.
ದುಬೈನಿಂದ ಹೊರಟ ಈ ವಿಮಾನವು ರೊಮೇನಿಯನ್ ಚಾರ್ಟರ್ ಕಂಪನಿಗೆ ಸೇರಿದ್ದಾಗಿದೆ. ಪೊಲೀಸರು ಅಡ್ಡಿಪಡಿಸಿದ ಬಳಿಕವು ತಾಂತ್ರಿಕ ನಿಲುಗಡೆಗಾಗಿ ಸಣ್ಣ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಿತು ಎಂದು ಹೇಳಲಾಗಿದೆ. ವ್ಯಾಟ್ರಿ ವಿಮಾನ ನಿಲ್ದಾಣದ ಸ್ವಾಗತ ಕೋರುವ ಹಾಲ್ ಅನ್ನು ವೇಯ್ಟಿಂಗ್ ರೂಮ್ ಆಗ ಪರಿವರ್ತಿಸಲಾಗಿದ್ದು, ಪ್ರಯಾಣಿಕರಿಗೆ ಹಾಸಿಗೆಗಳನ್ನು ಪೂರೈಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫ್ರಾನ್ಸ್‌ನ ಸಂಘಟಿತ ಅಪರಾಧ ತಡೆ ಘಟಕ ಜುನಾಲ್ಕೋ(JUNALCO) ತನಿಖೆಯ ನೇತೃತ್ವವನ್ನು ಹೊತ್ತುಕೊಂಡಿದೆ. ಸುದ್ದಿ ಸಂಸ್ಥೆಗಳ ವರದಿಗಳ ಪ್ರಕಾರ, ಭಾರತೀಯ ಪ್ರಜೆಗಳನ್ನು ಹೊಂದಿರುವ ಈ ವಿಮಾನವು ಕೇಂದ್ರ ಅಮೆರಿಕಕ್ಕೆ ಹೊರಟಿತ್ತು. ಕೆನಡಾ ಮತ್ತು ಅಮೆರಿಕಕ್ಕೆ ಕಾನೂನುಬಾಹಿರವಾಗಿ ಪ್ರಯಾಣಿಕರನ್ನು ಕಳುಹಿಸುವುದು ಇದರ ಉದ್ದೇಶವಾಗಿತ್ತು ಎಂದು ಹೇಳಲಾಗಿತ್ತಿದೆ. ತನಿಖೆಯ ಪೂರ್ಣಗೊಂಡ ನಂತರವೇ ನಿಖರ ಮಾಹಿತಿ ಗೊತ್ತಾಗಲಿದೆ.
ಈ ಸುದ್ದಿಯನ್ನೂ ಓದಿ: ಪ್ರಯಾಣಿಕ ಸಾವು; ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಹೈದ್ರಾಬಾದ್‌ಗೆ ಬರುತ್ತಿದ್ದ ವಿಮಾನ