Site icon Vistara News

Kangana Ranaut: ಲೋಕಸಭೆ ಚುನಾವಣೆಯಲ್ಲಿ ಕಂಗನಾ ರಣಾವತ್‌ ಸ್ಪರ್ಧೆ; ಯಾವ ಪಕ್ಷ?

Bollywood actress Kangana Ranaut to paid menstrual leave

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ (Lok Sabha Election 2024) ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಅದರಲ್ಲೂ, ಆಡಳಿತಾರೂಢ ಬಿಜೆಪಿಯು ಎನ್‌ಡಿಎ ಒಕ್ಕೂಟ ಬಲಪಡಿಸುವುದು, ಮೋದಿ ವರ್ಚಸ್ಸನ್ನು ಬಳಸಿಕೊಳ್ಳುವುದು ಸೇರಿ ಹಲವು ಯೋಜನೆ ರೂಪಿಸಿದೆ. ಕಾಂಗ್ರೆಸ್‌ ಕೂಡ ಪ್ರತಿಪಕ್ಷಗಳನ್ನು ಒಗ್ಗೂಡಿಸಿ ಇಂಡಿಯಾ ಒಕ್ಕೂಟ ರಚಿಸಿದೆ. ಇದರ ಬೆನ್ನಲ್ಲೇ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಅವರು ಮಹತ್ವದ ಸುಳಿವು ನೀಡಿದ್ದಾರೆ.

ಗುಜರಾತ್‌ನ ದ್ವಾರಕಾದಲ್ಲಿರುವ ಶ್ರೀಕೃಷ್ಣನ ದ್ವಾರಕಾಧೀಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಂಗನಾ ರಣಾವತ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೇ, ಲೋಕಸಭೆ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಅವರು, “ಶ್ರೀಕೃಷ್ಣನ ಆಶೀರ್ವಾದ ಇದ್ದರೆ ಸ್ಪರ್ಧಿಸುವೆ” ಎಂದು ಹೇಳುವ ಮೂಲಕ ರಾಜಕೀಯ ಪ್ರವೇಶದ ಸುಳಿವು ನೀಡಿದರು. ಆದರೆ, ಯಾವ ಪಕ್ಷ, ಯಾವ ಕ್ಷೇತ್ರದಿಂದ ಸ್ಪರ್ಧೆ ಎಂಬುದರ ಕುರಿತು ಕಂಗನಾ ರಣಾವತ್‌ ಅವರು ಯಾವುದೇ ಸುಳಿವು ನೀಡಿಲ್ಲ.

ದೇವರ ದರ್ಶನ ಪಡೆದ ಕಂಗನಾ ರಣಾವತ್.

“ನಾನು ಯಾವಾಗಲೂ ದ್ವಾರಕಾ ನಗರಕ್ಕೆ ಆಗಮಿಸಲು ಇಷ್ಟಪಡುತ್ತೇನೆ. ನಾನು ಶ್ರೀಕಷ್ಣನ ಭಕ್ತೆಯಾಗಿದ್ದು, ಯಾವಾಗಲೂ ದೇವರ ದರ್ಶನ ಮಾಡಲು ಬಯಸುತ್ತೇನೆ. ಸರ್ಕಾರವು ಕೂಡ ದೇವಾಲಯ, ನಗರವನ್ನು ಅದ್ಭುತವಾಗಿ ಅಭಿವೃದ್ಧಿ ಮಾಡಿದೆ. ಎಲ್ಲೆಡೆಯೂ ದ್ವಾರಕಾಧೀಶ ನೆಲೆಸಿದ್ದಾನೆ. ನಾನು ದೇವರ ದರ್ಶನ ಪಡೆದಾಗಲೆಲ್ಲ ಪುನೀತಳಾಗುತ್ತೇನೆ. ಹಾಗಾಗಿ, ಯಾವಾಗಲೂ ಶ್ರೀಕೃಷ್ಣನ ದರ್ಶನಕ್ಕಾಗಿ ಇಲ್ಲಿಗೆ ಬರುತ್ತೇನೆ” ಎಂದು ಕೂಡ ಕಂಗನಾ ರಣಾವತ್‌ ಹೇಳಿದರು. ‌

ಇದನ್ನೂ ಓದಿ: Kangana Ranaut: ʼಜೇಮ್ಸ್‌ ಬಾಂಡ್‌ʼ ದೋವಲ್‌ ಜತೆ ಸೆಲ್ಫಿ ಕ್ಲಿಕ್ಕಿಸಿದ ಕಂಗನಾ!

ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ

“ರಾಮಮಂದಿರ ನಿರ್ಮಾಣ ವಿಷಯವನ್ನು ಪ್ರಸ್ತಾಪಿಸಿದ ಕಂಗನಾ ರಣಾವತ್‌ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳಿದರು. “ಬಿಜೆಪಿ ಸರ್ಕಾರದ ಪ್ರಯತ್ನದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ. 600 ವರ್ಷಗಳ ಹೋರಾಟದ ಫಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಅದೇ ಸಂಭ್ರಮಾಚರಣೆಯಿಂದ ಮಂದಿರಕ್ಕೆ ಚಾಲನೆ ನೀಡಲಾಗುತ್ತಿದೆ. ಜಗತ್ತಿನಾದ್ಯಂತ ಸನಾತನ ಧರ್ಮದ ಧ್ವಜವು ಜಗತ್ತಿನಾದ್ಯಂತ ಹಾರಾಡಬೇಕು” ಎಂದರು. ಇದಕ್ಕೂ ಮೊದಲು ಕೂಡ ಕಂಗನಾ ರಣಾವತ್‌ ಅವರು ಮೋದಿ ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದರು. ಮೋದಿ ಅವರನ್ನು ಹಾಡಿ ಹೊಗಳಿದ್ದರು. ಕಂಗನಾ ರಣಾವತ್‌ ಅಭಿನಯದ ತೇಜಸ್‌ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ.

Exit mobile version