Kangana Ranaut: ಲೋಕಸಭೆ ಚುನಾವಣೆಯಲ್ಲಿ ಕಂಗನಾ ರಣಾವತ್‌ ಸ್ಪರ್ಧೆ; ಯಾವ ಪಕ್ಷ? - Vistara News

ದೇಶ

Kangana Ranaut: ಲೋಕಸಭೆ ಚುನಾವಣೆಯಲ್ಲಿ ಕಂಗನಾ ರಣಾವತ್‌ ಸ್ಪರ್ಧೆ; ಯಾವ ಪಕ್ಷ?

Kangana Ranaut: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಟಿ ಕಂಗನಾ ರಣಾವತ್‌ ಅವರು ಮಹತ್ವದ ಸುಳಿವು ನೀಡಿದ್ದಾರೆ. ಅವರ ಸುಳಿವಿನ ಸಾರಾಂಶ ಹೀಗಿದೆ…

VISTARANEWS.COM


on

Bollywood actress Kangana Ranaut to paid menstrual leave
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ (Lok Sabha Election 2024) ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಅದರಲ್ಲೂ, ಆಡಳಿತಾರೂಢ ಬಿಜೆಪಿಯು ಎನ್‌ಡಿಎ ಒಕ್ಕೂಟ ಬಲಪಡಿಸುವುದು, ಮೋದಿ ವರ್ಚಸ್ಸನ್ನು ಬಳಸಿಕೊಳ್ಳುವುದು ಸೇರಿ ಹಲವು ಯೋಜನೆ ರೂಪಿಸಿದೆ. ಕಾಂಗ್ರೆಸ್‌ ಕೂಡ ಪ್ರತಿಪಕ್ಷಗಳನ್ನು ಒಗ್ಗೂಡಿಸಿ ಇಂಡಿಯಾ ಒಕ್ಕೂಟ ರಚಿಸಿದೆ. ಇದರ ಬೆನ್ನಲ್ಲೇ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಅವರು ಮಹತ್ವದ ಸುಳಿವು ನೀಡಿದ್ದಾರೆ.

ಗುಜರಾತ್‌ನ ದ್ವಾರಕಾದಲ್ಲಿರುವ ಶ್ರೀಕೃಷ್ಣನ ದ್ವಾರಕಾಧೀಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಂಗನಾ ರಣಾವತ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೇ, ಲೋಕಸಭೆ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಅವರು, “ಶ್ರೀಕೃಷ್ಣನ ಆಶೀರ್ವಾದ ಇದ್ದರೆ ಸ್ಪರ್ಧಿಸುವೆ” ಎಂದು ಹೇಳುವ ಮೂಲಕ ರಾಜಕೀಯ ಪ್ರವೇಶದ ಸುಳಿವು ನೀಡಿದರು. ಆದರೆ, ಯಾವ ಪಕ್ಷ, ಯಾವ ಕ್ಷೇತ್ರದಿಂದ ಸ್ಪರ್ಧೆ ಎಂಬುದರ ಕುರಿತು ಕಂಗನಾ ರಣಾವತ್‌ ಅವರು ಯಾವುದೇ ಸುಳಿವು ನೀಡಿಲ್ಲ.

ದೇವರ ದರ್ಶನ ಪಡೆದ ಕಂಗನಾ ರಣಾವತ್.

“ನಾನು ಯಾವಾಗಲೂ ದ್ವಾರಕಾ ನಗರಕ್ಕೆ ಆಗಮಿಸಲು ಇಷ್ಟಪಡುತ್ತೇನೆ. ನಾನು ಶ್ರೀಕಷ್ಣನ ಭಕ್ತೆಯಾಗಿದ್ದು, ಯಾವಾಗಲೂ ದೇವರ ದರ್ಶನ ಮಾಡಲು ಬಯಸುತ್ತೇನೆ. ಸರ್ಕಾರವು ಕೂಡ ದೇವಾಲಯ, ನಗರವನ್ನು ಅದ್ಭುತವಾಗಿ ಅಭಿವೃದ್ಧಿ ಮಾಡಿದೆ. ಎಲ್ಲೆಡೆಯೂ ದ್ವಾರಕಾಧೀಶ ನೆಲೆಸಿದ್ದಾನೆ. ನಾನು ದೇವರ ದರ್ಶನ ಪಡೆದಾಗಲೆಲ್ಲ ಪುನೀತಳಾಗುತ್ತೇನೆ. ಹಾಗಾಗಿ, ಯಾವಾಗಲೂ ಶ್ರೀಕೃಷ್ಣನ ದರ್ಶನಕ್ಕಾಗಿ ಇಲ್ಲಿಗೆ ಬರುತ್ತೇನೆ” ಎಂದು ಕೂಡ ಕಂಗನಾ ರಣಾವತ್‌ ಹೇಳಿದರು. ‌

ಇದನ್ನೂ ಓದಿ: Kangana Ranaut: ʼಜೇಮ್ಸ್‌ ಬಾಂಡ್‌ʼ ದೋವಲ್‌ ಜತೆ ಸೆಲ್ಫಿ ಕ್ಲಿಕ್ಕಿಸಿದ ಕಂಗನಾ!

ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ

“ರಾಮಮಂದಿರ ನಿರ್ಮಾಣ ವಿಷಯವನ್ನು ಪ್ರಸ್ತಾಪಿಸಿದ ಕಂಗನಾ ರಣಾವತ್‌ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳಿದರು. “ಬಿಜೆಪಿ ಸರ್ಕಾರದ ಪ್ರಯತ್ನದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ. 600 ವರ್ಷಗಳ ಹೋರಾಟದ ಫಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಅದೇ ಸಂಭ್ರಮಾಚರಣೆಯಿಂದ ಮಂದಿರಕ್ಕೆ ಚಾಲನೆ ನೀಡಲಾಗುತ್ತಿದೆ. ಜಗತ್ತಿನಾದ್ಯಂತ ಸನಾತನ ಧರ್ಮದ ಧ್ವಜವು ಜಗತ್ತಿನಾದ್ಯಂತ ಹಾರಾಡಬೇಕು” ಎಂದರು. ಇದಕ್ಕೂ ಮೊದಲು ಕೂಡ ಕಂಗನಾ ರಣಾವತ್‌ ಅವರು ಮೋದಿ ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದರು. ಮೋದಿ ಅವರನ್ನು ಹಾಡಿ ಹೊಗಳಿದ್ದರು. ಕಂಗನಾ ರಣಾವತ್‌ ಅಭಿನಯದ ತೇಜಸ್‌ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Lucknow Airport: ವಿಮಾನ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ನಡೆಸಿದ ಮಹಿಳೆ; ಕಾರಣ ಏನು?

Lucknow Airport: ಮುಂಬೈಗೆ ತೆರಳಬೇಕಿದ್ದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಚ್ಚಿ ಗಾಯಗೊಳಿಸಿದ ಘಟನೆ ಲಕ್ನೋ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಸರೋಜಿನಿ ನಗರ ಪೊಲೀಸ್‌ ಠಾಣೆಯಲ್ಲಿ ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

VISTARANEWS.COM


on

Lucknow Airport
Koo

ಲಕ್ನೋ: ಮುಂಬೈಗೆ ತೆರಳಬೇಕಿದ್ದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಚ್ಚಿ ಗಾಯಗೊಳಿಸಿದ ಘಟನೆ ಲಕ್ನೋ ವಿಮಾನ ನಿಲ್ದಾಣ (Lucknow airport)ದಲ್ಲಿ ನಡೆದಿದೆ. ಬಳಿಕ ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಕ್ಯುಪಿ 1525 (QP 1525) ವಿಮಾನ ಲಕ್ನೋ ವಿಮಾನ ನಿಲ್ದಾಣದಿಂದ ಸಂಜೆ 5:25ಕ್ಕೆ ಮುಂಬೈಗೆ ತೆರಳಲು ಸಜ್ಜಾಗಿತ್ತು. ಈ ವೇಳೆ ಮಹಿಳೆ ಅತಿರೇಕದ ವರ್ತನೆ ತೋರಿದ್ದಾರೆ. ಸದ್ಯ ಸರೋಜಿನಿ ನಗರ ಪೊಲೀಸ್‌ ಠಾಣೆಯಲ್ಲಿ ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಘಟನೆ ವಿವರ

ಸರೀಜಿನಿ ನಗರದ ಸ್ಟೇಷನ್‌ ಹೌಸ್‌ ಆಫೀಸರ್‌ (SHO) ಶೈಲೇಂದ್ರ ಗಿರಿ ಈ ಬಗ್ಗೆ ಮಾಹಿತಿ ನೀಡಿ, ʼʼದಾಳಿ ನಡೆಸಿದ ಮಹಿಳೆ ಮಾನಸಿಕವಾಗಿ ಬಹಳ ಒತ್ತಡದಲ್ಲಿ ಇದ್ದಂತೆ ಕಾಣಿಸುತ್ತಿದ್ದರು. ಅವರು ಆರಂಭದಲ್ಲಿ ಸಹ ಪ್ರಯಾಣಿಕರೊಂದಗೆ ತಗಾದೆ ತೆಗೆದು ಜಗಳ ನಡೆಸಿದ್ದರು. ವಿಮಾನ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಮಹಿಳೆಯನ್ನು ಸಮಾಧಾನ ಪಡಿಸಲು ಮುಂದಾದಾಗ ಅವರೊಂದಿಗೂ ತಗಾದೆ ತೆಗೆದು ಜಗಳ ಆರಂಭಿಸಿದರು. ಬಳಿಕ ಮಹಿಳೆಯನ್ನು ಹೊರ ಕಳಿಸಲಾಯಿತುʼʼ ಎಂದು ತಿಳಿಸಿದ್ದಾರೆ.

ʼʼಮಹಿಳೆಯನ್ನು ಹೊರಗೆ ಕರೆತರುವಾಗ ಆಕೆ ಪುರುಷ ಸಿಬ್ಬಂದಿಯ ಮಣಿಕಟ್ಟಿಗೆ ಕಚ್ಚಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಆಕೆಯನ್ನು ಸರೋಜಿನಿ ನಗರ ಪೊಲೀಸ್‌ ಸ್ಟೇಷನ್‌ಗೆ ಕರೆತಂದು ದೂರು ದಾಖಲಿಸಿದ್ದಾರೆʼʼ ಎಂದು ಶೈಲೇಂದ್ರ ಗಿರಿ ವಿವರಿಸಿದ್ದಾರೆ.

ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್‌ 324 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 504 (ಶಾಂತಿ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಗ್ರಾ ಮೂಲದ ಈ ಮಹಿಳೆ ಮುಂಬೈಯಲ್ಲಿ ವಾಸವಾಗಿದ್ದಾರೆ. ಲಕ್ನೋದಲ್ಲಿರುವ ತಮ್ಮ ಸಹೋದರಿಯನ್ನು ಭೇಟಿಯಾಗಲು ಆಗಮಿಸಿ ಹಿಂದಿರುಗುವ ವೇಳೆ ಈ ಘಟನೆ ನಡೆದಿದೆ. ಸದ್ಯ ಮಹಿಳೆಯನ್ನು ಸಂಬಂಧಿಕರ ವಶಕ್ಕೆ ನೀಡಲಾಗಿದೆ.

ಇದನ್ನೂ ಓದಿ: Mumbai Airport: ವ್ಹೀಲ್‌ಚೇರ್‌ ದೊರೆಯದೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟ ವೃದ್ಧ

ವಿಮಾನದ ಸಿಬ್ಬಂದಿಯ ಮೂಗು ಮುರಿದ ಪ್ರಯಾಣಿಕ

ವಿಮಾನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಯುತ್ತಿರುವುದು ಇದು ಮೊದಲ ಸಲವೇನಲ್ಲ ಆಗಾಗ ಇಂತಹ ಪ್ರಕರಣ ವರದಿಯಾಗುತ್ತಲೇ ಇರುತ್ತದೆ. ಕೆಲವು ತಿಂಳ ಹಿಂದೆ ಪ್ರಯಾಣಿಕನೊಬ್ಬ ವಿಮಾನ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಬ್ಯಾಂಕಾಂಕ್‌ನಿಂದ ಹೀಥ್ರೂಗೆ ತೆರಳುತ್ತಿದ್ದ ಥಾಯ್‌ ಏರ್‌ವೇಸ್‌ ವಿಮಾನದಲ್ಲಿ 35 ವರ್ಷದ ಬ್ರಿಟನ್‌ ಪ್ರಯಾಣಿಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ. ಈ ವರ್ಷದ ಫೆಬ್ರವರಿ 7ರಂದು ಘಟನೆ ನಡೆದಿದ್ದು, ಬಳಿಕ ಆತನನ್ನು ಬಂಧಿಸಲಾಗಿತ್ತು. ವಿಮಾನ ಹಾರುವಾಗ ಟಾಯ್ಲೆಟ್‌ಗೆ ಹೋದ ಪ್ರಯಾಣಿಕನು ಒಳಗಡೆ ಕೂಗಾಡಲು ಶುರು ಮಾಡಿದ್ದ. ಕೂಗಿ, ಅತ್ತು, ಟಾಯ್ಲೆಟ್‌ನ ಬಾಗಿಲು ಮುರಿಯಲು ಯತ್ನಿಸಿದ್ದ.

ವಿಮಾನದ ಶೌಚಾಲಯದಿಂದ ಆತ ಹೊರಗೆ ಬಂದ ಕೂಡಲೇ ವಿಮಾನದ ಸಿಬ್ಬಂದಿಯು ಆತನನ್ನು ನಿಯಂತ್ರಿಸಲು ಮುಂದಾಗಿದ್ದರು. ಇದೇ ವೇಳೆ ಪ್ರಯಾಣಿಕನು ಸಿಬ್ಬಂದಿಯ ಮೂಗಿಗೆ ಪಂಚ್‌ ಮಾಡಿದ್ದು, ಮೂಗು ಮುರಿದಿದೆ ಎಂದು ತಿಳಿದುಬಂದಿದೆ. ಗಗನಸಖಿಯೊಬ್ಬರು ಮಾಡಿದ ವಿಡಿಯೊಭಾರಿ ವೈರಲ್‌ ಆಗಿತ್ತು. 

Continue Reading

ದೇಶ

Narendra Modi: ಕಾಶಿಯಲ್ಲಿ ವೈಭವದ ಗಂಗಾ ಆರತಿ ಕಣ್ತುಂಬಿಕೊಂಡ ಮೋದಿ; ಇಲ್ಲಿದೆ Photo Gallery

Narendra Modi: ಸತತ ಮೂರನೇ ಬಾರಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಮಂಗಳವಾರ (ಜೂನ್‌ 18) ತಮ್ಮ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದರು. ಈ ವೇಳೆ ಅವರು ವಿಶ್ವನಾಥ ದೇಗುಲಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜತೆಗೆ ಗಂಗಾ ಆರತಿಯಲ್ಲಿಯೂ ಪಾಲ್ಗೊಂಡರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಧಾನಿ ಜತೆಗಿದ್ದರು.

VISTARANEWS.COM


on

Narendra Modi
Koo

ಲಕ್ನೋ: ಲೋಕಸಭೆ ಚುನಾವಣೆ (Lok Sabha Election 2024) ಬಳಿಕ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರವಾದ ವಾರಾಣಸಿಗೆ (Varanasi) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ (ಜೂನ್‌ 18) ಭೇಟಿ ನೀಡಿದರು. ವಾರಾಣಸಿಯಲ್ಲಿ ನಡೆದ ಕಿಸಾನ್ ಸಮ್ಮೇಳನದಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ (PM Kisan Nidhi Samman) ಯೋಜನೆಯ 20 ಸಾವಿರ ಕೋಟಿ ರೂಪಾಯಿಯನ್ನು ದೇಶದ 9.26 ಕೋಟಿ ರೈತರ ಖಾತೆಗಳಿಗೆ ಜಮೆ ಮಾಡಿದ ಅವರು, ಮೂರನೇ ಬಾರಿಗೆ ಸಂಸದನಾಗಿ ಮಾತ್ರವಲ್ಲ, ಪ್ರಧಾನಿಯನ್ನಾಗಿ ಆರಿಸಿದ್ದಕ್ಕೆ ಮತದಾರರಿಗೆ ದನ್ಯವಾದ ಅರ್ಪಿಸಿದರು. ರಾತ್ರಿ ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಜತೆಗೆ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ನಡೆದ ಗಂಗಾ ಆರತಿಯನ್ನು ಕಣ್ತುಂಬಿಕೊಂಡರು. ಈ ಕ್ಷಣಗಳ ಫೋಟೊ ಗ್ಯಾಲರಿ ಇಲ್ಲಿದೆ.

ಇದನ್ನೂ ಓದಿ: Narendra Modi: 3ನೇ ಸಲ ಗೆಲ್ಲಿಸಿದ ವಾರಾಣಸಿ ಜನತೆಗೆ ಧನ್ಯವಾದ ಎಂದ ಮೋದಿ; ಗೆದ್ದ ಬಳಿಕ ಮೊದಲ ಭೇಟಿ!

Continue Reading

ದೇಶ

New Criminal Laws: ಹೊಸ ಕ್ರಿಮಿನಲ್ ಕಾನೂನು ಜು.1ರಿಂದ ಜಾರಿ; ಯಾವ ಕಾನೂನು? ಏನು ಬದಲಾವಣೆ? Complete Details!

New criminal laws: ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟು ರಾಷ್ಟ್ರಪತಿಗಳಿಂದ ಒಪ್ಪಿಗೆಯನ್ನು ಪಡೆದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ ಒಂದರಿಂದ ಜಾರಿಗೆ ಬರಲಿವೆ. ಅವುಗಳ ಅನುಷ್ಠಾನಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ನಡೆಯುತ್ತಿದೆ. ಮೂರು ಹೊಸ ಕಾನೂನುಗಳ ರೂಪುರೇಷೆಗಳೇನು? ಬದಲಾವಣೆಗಳು ಏನೇನು? ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

New criminal laws
Koo

ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳು (New criminal laws) ಜುಲೈ 1ರಿಂದ ಜಾರಿಗೆ ಬರಲಿವೆ. ಅವುಗಳ ಅನುಷ್ಠಾನಕ್ಕೆ ಅಗತ್ಯ ತರಬೇತಿ ಈಗಾಗಲೇ ನಡೆಯುತ್ತಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ (Union law and justice ministe) ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಈ ಬಗ್ಗೆ ವಿವರ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ (Kolkata) “ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಆಡಳಿತದಲ್ಲಿ ಭಾರತದ ಪ್ರಗತಿಪರ ಹಾದಿ” ಎಂಬ ಸಮ್ಮೇಳನದಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆಯ (UCC) ರಾಷ್ಟ್ರವ್ಯಾಪಿ ಅನುಷ್ಠಾನದ ಬಗ್ಗೆಯೂ ಭರವಸೆ ವ್ಯಕ್ತಪಡಿಸಿದ್ದಾರೆ.

ಜುಲೈ 1ರಿಂದ ಎಲ್ಲಾ ಮೂರು ಕಾನೂನುಗಳು – ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆಗಳು ಈ ಹಿಂದಿನ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸುತ್ತವೆ. ಈಗಿರುವ ಕಾಯಿದೆಗಳಿಗೆ ಹೋಲಿಸಿದರೆ ಈ ಮೂರು ಹೊಸ ಕಾನೂನುಗಳಲ್ಲಿ ಹಲವು ವಿನೂತನ ಉದ್ದೇಶಗಳಿವೆ.

ಮೂರು ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು. ಆದರೆ, ಅವು ಜಾರಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 25ರಂದು ಮೂರು ಕಾನೂನುಗಳು ಜುಲೈ 1ರಂದು ಜಾರಿಗೆ ಬರುತ್ತವೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು.

ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್‌ಡಿ) ಈ ಹೊಸ ಕಾನೂನುಗಳಿಗೆ ತರಬೇತಿಯನ್ನು ನೀಡುತ್ತಿದೆ. ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು ಸಹ ತರಬೇತಿಯನ್ನು ನೀಡುತ್ತಿವೆ. ನ್ಯಾಯಾಧೀಶರಿಗೂ ನ್ಯಾಯಾಂಗ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ.

ಇದನ್ನೂ ಓದಿ: Opposition Leader: 10 ವರ್ಷ ಬಳಿಕ ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ! ಇವರಿಗೆ ಸಿಗುವ ಸವಲತ್ತುಗಳೇನು?

ಹೊಸ ಕ್ರಿಮಿನಲ್ ಕಾನೂನುಗಳು ಯಾವವು?

ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (Indian Code), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Indian Civil Protection Code) ಮತ್ತು ಭಾರತೀಯ ಸಾಕ್ಷಿ ಕಾಯಿದೆಯು (Indian Evidence Act) ಜುಲೈ 1ರಿಂದ ಜಾರಿಗೆ ಬರಲಿವೆ. ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದೆ.


ಭಯೋತ್ಪಾದಕರ ಆಸ್ತಿ ಮುಟ್ಟುಗೋಲು

ಭಯೋತ್ಪಾದನೆಯನ್ನು ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 113 (1) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಅಥವಾ ಯಾವುದೇ ವಿದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ಕೃತ್ಯವನ್ನು ಎಸಗುವ ವ್ಯಕ್ತಿಯನ್ನು ಈ ಕಾನೂನಿನಲ್ಲಿ ಭಯೋತ್ಪಾದಕ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಾಮಾನ್ಯ ಸಾರ್ವಜನಿಕರನ್ನು ಅಥವಾ ಅದರ ಒಂದು ಭಾಗವನ್ನು ಬೆದರಿಸಲು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಭಯೋತ್ಪಾದಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಈ ಕಾನೂನಿನ ಅಡಿಯಲ್ಲಿ ಇದೆ. ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳನ್ನು ಮರಣದಂಡನೆ ಅಥವಾ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿದೆ. ‘ಆಸ್ತಿಗೆ ಹಾನಿ, ಅಥವಾ ಕರೆನ್ಸಿಯ ತಯಾರಿಕೆ ಅಥವಾ ಕಳ್ಳಸಾಗಣೆಯನ್ನು ಇದು ಒಳಗೊಂಡಿದೆ.

ದೇಶದ್ರೋಹ ಎಂಬುದು ರದ್ದು

ಭಾರತೀಯ ದಂಡ ಸಂಹಿತೆ1860ರ ದೇಶದ್ರೋಹದ ನಿಬಂಧನೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152ಕ್ಕೆ ಬದಲಾಯಿಸಲಾಗಿದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ವಿಭಾಗಗಳನ್ನು ಪರಿಚಯಿಸಲಾಗಿದೆ.

ಅತ್ಯಾಚಾರ ಮಾಡಿದರೆ ಮರಣ ದಂಡನೆ

ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧಗಳನ್ನು ಪರಿಹರಿಸಲು ‘ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು’ ಎಂಬ ಅಧ್ಯಾಯವನ್ನು ಪರಿಚಯಿಸಿದೆ. ಇದಲ್ಲದೆ, ಸಂಹಿತೆ 18 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ಮಾರ್ಪಾಡುಗಳನ್ನು ಶಿಫಾರಸು ಮಾಡುತ್ತಿದೆ.

ಅಪ್ರಾಪ್ತ ವಯಸ್ಸಿನ ಮಹಿಳೆಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ)ಗೆ ಅನುಗುಣವಾಗಿ ಮಾಡಲಾಗಿದೆ. 18 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಅವಕಾಶ ಕಲ್ಪಿಸಲಾಗಿದೆ.

ಅತ್ಯಾಚಾರ ಎಸಗುವವರಿಗೆ ಕಾನೂನಿನ ಪ್ರಕಾರ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಇದು ಜೀವಾವಧಿಯವರೆಗೆ ಜೈಲು ಶಿಕ್ಷೆಗೆ ವಿಸ್ತರಿಸಬಹುದು ಮತ್ತು ದಂಡಕ್ಕೆ ಸಹ ಹೊಣೆಗಾರರಾಗಬೇಕಾಗುತ್ತದೆ.

ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಇದಲ್ಲದೆ ಮದುವೆ, ಉದ್ಯೋಗ, ಬಡ್ತಿಯ ನೆಪದಲ್ಲಿ ಅಥವಾ ಯಾವುದೇ ಆಮಿಷದ ಮೂಲಕ ಮಹಿಳೆಯರ ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

ಮೊದಲ ಬಾರಿಗೆ ಸಂಘಟಿತ ಅಪರಾಧದ ವ್ಯಾಖ್ಯಾನ

ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ 111 (1) ಅಡಿಯಲ್ಲಿ ಪದವನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ. ಈ ವ್ಯಾಖ್ಯಾನವು ಸಶಸ್ತ್ರ ದಂಗೆ, ವಿಧ್ವಂಸಕ ಕಾರ್ಯಾಚರಣೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಒಳಗೊಂಡಿದೆ. ಶಿಕ್ಷೆಯು ವಿವಿಧ ಅಪರಾಧಗಳಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ, ದಂಡ ಅಥವಾ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒಳಗೊಂಡಿರುತ್ತದೆ.

ಗುಂಪು ಹತ್ಯೆಗೆ ಶಿಕ್ಷೆಯ ಹೆಚ್ಚಳ

ಮೊದಲ ಬಾರಿಗೆ ಮೂಲ ಮಸೂದೆಯು ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆಗಳೆಂದು ವರ್ಗೀಕರಿಸಿದೆ. ಈ ಕಾಯಿದೆಯು ಗುಂಪು ಹತ್ಯೆಯಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆಯನ್ನು ನೀಡಲು ಬಯಸುತ್ತದೆ.

ದೇಶ ವಿರೋಧಿ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ

“ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳಿಗೆ” ಸಂಬಂಧಿಸಿದ ಕೃತ್ಯಗಳ ಸಂದರ್ಭದಲ್ಲಿ ಕಾನೂನುಗಳು ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ.

ಯಾರಾದರೂ ಉದ್ದೇಶಪೂರ್ವಕವಾಗಿ ಪದಗಳಲ್ಲಿ ಮಾತನಾಡುವ ಅಥವಾ ಬರೆಯುವ ಅಥವಾ ಚಿಹ್ನೆಗಳ ಮೂಲಕ, ಅಥವಾ ಗೋಚರ ಪ್ರಾತಿನಿಧ್ಯದಿಂದ, ಅಥವಾ ವಿದ್ಯುನ್ಮಾನ ಸಂವಹನದ ಮೂಲಕ ಅಥವಾ ಹಣಕಾಸಿನ ಅರ್ಥದ ಬಳಕೆಯಿಂದ ಅಥವಾ ಬೇರೆ ಬೇರೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕವನ್ನು ಪ್ರಚೋದಿಸಲು ಪ್ರಯತ್ನಿಸಿದರೆ ಕಠಿಣ ಶಿಕ್ಷೆ ಕಾದಿದೆ. ಅಕ್ರಮ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.

ತ್ವರಿತ ವಿಚಾರಣೆ ಮತ್ತು ನ್ಯಾಯ

ಹೊಸ ಕಾನೂನುಗಳ ಪ್ರಕಾರ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕಾಗುತ್ತದೆ ಮತ್ತು ಪರಿಸ್ಥಿತಿಯನ್ನು ನೋಡಿ ನ್ಯಾಯಾಲಯವು ಇನ್ನೂ 90 ದಿನಗಳವರೆಗೆ ಅನುಮತಿ ನೀಡಬಹುದು. ತನಿಖೆಯನ್ನು 180 ದಿನಗಳಲ್ಲಿ ಮುಗಿಸಿ ವಿಚಾರಣೆಗೆ ಕಳುಹಿಸಬೇಕು.

ಇದಲ್ಲದೆ, ಪೊಲೀಸರು 90 ದಿನಗಳಲ್ಲಿ ಪ್ರಕರಣದ ಸ್ಥಿತಿಯನ್ನು ಅಪ್‌ಡೇಟ್‌ ಮಾಡಬೇಕಾಗುತ್ತದೆ. ವಿಚಾರಣೆಯ ಅನಂತರ 30 ದಿನಗಳಲ್ಲಿ ತೀರ್ಪು ನೀಡಬೇಕಾಗುತ್ತದೆ. ಒಂದು ವಾರದೊಳಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಮೂರು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಿಗೆ ಸಾಮಾನ್ಯ ವಿಚಾರಣೆ ಸಾಕಾಗುತ್ತದೆ. ಇದರಿಂದ ಸೆಷನ್ ಕೋರ್ಟ್‌ಗಳಲ್ಲಿನ ಪ್ರಕರಣಗಳು ಶೇ. 40ರಷ್ಟು ಕಡಿಮೆಯಾಗಲಿವೆ. ಶೂನ್ಯ ಎಫ್‌ಐಆರ್ ದಾಖಲಿಸುವ ಪದ್ಧತಿಯನ್ನು ಸಾಂಸ್ಥಿಕಗೊಳಿಸಲಾಗಿದೆ. ಎಲ್ಲೇ ಘಟನೆ ನಡೆದರೂ ಎಲ್ಲಿ ಬೇಕಾದರೂ ಎಫ್‌ಐಆರ್‌ ದಾಖಲಿಸಬಹುದು.

ಸಂತ್ರಸ್ತರ ಮಾಹಿತಿ ಹಕ್ಕನ್ನು ಬಲಪಡಿಸಲಾಗಿದೆ. ಎಫ್‌ಐಆರ್‌ನ ಉಚಿತ ಪ್ರತಿಯನ್ನು ಪಡೆಯುವ ಹಕ್ಕು ಬಲಿಪಶುವಿಗೆ ಇದೆ. 90 ದಿನಗಳಲ್ಲಿ ತನಿಖೆಯ ಸ್ಥಿತಿಯನ್ನು ಸಂತ್ರಸ್ತರಿಗೆ ತಿಳಿಸಲು ಅವಕಾಶವಿದೆ. ಹೊಸ ಸಂಹಿತೆಯು ಕ್ರಿಮಿನಲ್ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ.

ಇತರ ನಿಬಂಧನೆಗಳು

ಹೊಸ ಕಾನೂನಿನ ಪ್ರಕಾರ ‘ಆರ್ಥಿಕ ಅಪರಾಧಗಳನ್ನು’ ಹೊರತುಪಡಿಸಿ ಘೋರ ಅಪರಾಧಿಗಳಿಗೆ ಮಾತ್ರ ಕೈಕೋಳವನ್ನು ಬಳಸಲಾಗುವುದು. ಅಂಗವೈಕಲ್ಯ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಅಪರಾಧ ಕಾರ್ಯಗಳಿಗೆ ಕಠಿಣ ದಂಡವನ್ನು ಪರಿಚಯಿಸಲಾಗಿದೆ.

ಶಿಕ್ಷೆ ಮನ್ನಾಗೊಳಿಸಲು ಕಾನೂನುಗಳಲ್ಲಿ ಹೊಸ ನಿಬಂಧನೆಯನ್ನು ಮಾಡಲಾಗಿದೆ. ಮರಣದಂಡನೆಗಳನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬಹುದು. ಏಳು ವರ್ಷಗಳ ಒಳಗಿನ ಸೆರೆವಾಸ ಮತ್ತು ಜೀವಾವಧಿ ಶಿಕ್ಷೆಯನ್ನು ಮಾತ್ರ ಕ್ಷಮಿಸಬಹುದು.

Continue Reading

ದೇಶ

International Yoga Day 2024: ಅಂತಾರಾಷ್ಟ್ರೀಯ ಯೋಗ ದಿನ ಭಾರತದ ಹೆಮ್ಮೆ; ಈ ವರ್ಷದ ಥೀಮ್‌ ಏನು?

ಹತ್ತು ವರ್ಷಗಳಿಂದ ದೇಶಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day 2024) ಆಚರಿಸಲಾಗುತ್ತಿದೆ. ಇದು ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ವೇಗದ ಜಗತ್ತಿನಲ್ಲಿ ಆಂತರಿಕ ಶಾಂತಿ ಮತ್ತು ಸಮತೋಲನಕ್ಕೆ ದಾರಿಯನ್ನು ತೋರುತ್ತದೆ. ಈ ದಿನದ ಹಿನ್ನೆಲೆ ಏನು? ಈ ವರ್ಷದ ಥೀಮ್‌ ಏನು ಇತ್ಯಾದಿ ಮಾಹಿತಿ ಇಲ್ಲಿದೆ.

VISTARANEWS.COM


on

By

International Yoga Day 2024
Koo

ತಲೆತಲಾಂತರದಿಂದ ಬಂದಿರುವ ಯೋಗಾಭ್ಯಾಸವನ್ನು (International Yoga Day 2024) ನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯ (health) ಸುದೀರ್ಘ ಕಾಲದವರೆಗೆ ಕಾಪಾಡಿಕೊಳ್ಳಬಹುದು. ಶತಮಾನಗಳ ಹಿಂದಿನ ಹಳೆಯ ಅಭ್ಯಾಸವಾಗಿರುವ ಇದು ಆರೋಗ್ಯ ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ದೈಹಿಕ ಭಂಗಿ (physical postures), ಉಸಿರಾಟದ ವ್ಯಾಯಾಮ (breathing exercises) ಮತ್ತು ಧ್ಯಾನವನ್ನು (meditation) ಸಂಯೋಜಿಸುತ್ತದೆ. ದೇಹದ ಶಕ್ತಿ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸುವ ಮೂಲಕ ಇದು ಆರೋಗ್ಯಕರ ಜೀವನಶೈಲಿಗೆ (healthy lifestyle) ಉತ್ತೇಜಿಸುತ್ತದೆ.

ಹತ್ತು ವರ್ಷಗಳಿಂದ ದೇಶಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಇದು ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ವೇಗದ ಜಗತ್ತಿನಲ್ಲಿ ಆಂತರಿಕ ಶಾಂತಿ ಮತ್ತು ಸಮತೋಲನಕ್ಕೆ ದಾರಿಯನ್ನು ತೋರುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಪಂಚದಾದ್ಯಂತ ನಡೆಯುವ ವಿವಿಧ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ತರಗತಿಗಳ ಮೂಲಕ ಎಲ್ಲಾ ವಯಸ್ಸಿನ ಮತ್ತು ಹಿನ್ನೆಲೆಯ ಜನರು ಯೋಗದ ಪ್ರಯೋಜನಗಳನ್ನು ಅನುಭವಿಸಲು ಪ್ರೋತ್ಸಾಹಿಸಲಾಗುತ್ತದೆ. ಪ್ರತಿ ವರ್ಷ ಜೂನ್ 21ರಂದು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ.

ದೇಹ ಮತ್ತು ಮನಸ್ಸು ಎರಡರ ಮೇಲೂ ಅದರ ಸಕಾರಾತ್ಮಕ ಪರಿಣಾಮಗಳ ಅರಿವನ್ನು ಹರಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನವು ವ್ಯಕ್ತಿಗಳನ್ನು ಆರೋಗ್ಯಕರ ಮತ್ತು ಹೆಚ್ಚು ಜಾಗರೂಕ ಜೀವನವನ್ನು ನಡೆಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.


ಇತಿಹಾಸ ಮತ್ತು ಮಹತ್ವ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ತಮ್ಮ ಭಾಷಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪರಿಕಲ್ಪನೆಯನ್ನು ಪರಿಚಯಿಸಿದರು. ಈ ಪ್ರಸ್ತಾವನೆಯು 177 ದೇಶಗಳಿಂದ ಬಲವಾದ ಬೆಂಬಲವನ್ನು ಗಳಿಸಿತು. ಇದು ವಿಶ್ವ ಸಂಸ್ಥೆಯಲ್ಲಿ ವ್ಯಾಪಕವಾಗಿ ಅನುಮೋದಿಸಲ್ಪಟ್ಟ ನಿರ್ಣಯಗಳಲ್ಲಿ ಒಂದಾಗಿದೆ.

ಈ ವರ್ಷದ ಥೀಮ್ ಏನು?

ಅಂತಾರಾಷ್ಟ್ರೀಯ ಯೋಗ ದಿನ 2024ರ ಥೀಮ್ “ಮಹಿಳಾ ಸಬಲೀಕರಣಕ್ಕಾಗಿ ಯೋಗ.” ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಯೋಗದ ಮಹತ್ವವನ್ನು ಈ ವಿಷಯದ ಮೂಲಕ ಗಮನಕ್ಕೆ ತರಲಾಗಿದೆ. ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ವಿಧಾನಗಳ ಮೂಲಕ ಅವರ ಸಬಲೀಕರಣದ ಮೇಲೆ ಕೇಂದ್ರೀಕರಿಸುವ ಯೋಗವು ಮಹಿಳೆಯರ ಜೀವನವನ್ನು ಹೇಗೆ ಧನಾತ್ಮಕವಾಗಿ ಪ್ರಭಾವಿಸುತ್ತದೆ ಎಂಬುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವುದು

ಯೋಗವು ಒತ್ತಡವನ್ನು ಕಡಿಮೆ ಮಾಡುವ, ವಿಶ್ರಾಂತಿಯನ್ನು ಉತ್ತೇಜಿಸುವ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಅಭ್ಯಾಸವನ್ನು ಎಲ್ಲಾ ವಯಸ್ಸಿನವರೂ ಮಾಡಬಹುದು. ವೈಯಕ್ತಿಕ ಅಗತ್ಯಗಳು ಮತ್ತು ಗುರಿಗಳಿಗೆ ತಕ್ಕಂತೆ ಮಾಡಬಹುದಾದ ವ್ಯಾಯಾಮದ ಬಹುಮುಖ ರೂಪವಾಗಿರುವ ಯೋಗವು ಪ್ರತಿಯೊಬ್ಬರ ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯದ ಭಾವನೆಯನ್ನು ಬೆಳೆಸುವ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ಅದರ ಪರಿಣಾಮಗಳನ್ನು ಅನ್ವೇಷಿಸಲು ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರೋತ್ಸಾಹಿಸಲಾಗುತ್ತದೆ.

ಯೋಗದ ಅಭ್ಯಾಸದ ಮೂಲಕ ವ್ಯಕ್ತಿಗಳು ಸಾವಧಾನತೆ, ಆಂತರಿಕ ಶಾಂತಿ ಮತ್ತು ತಮ್ಮ ಸುತ್ತಲಿನ ಪ್ರಪಂಚದೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಅವಕಾಶ ಮಾಡಿಕೊಡುತ್ತದೆ. ಯೋಗವು ವೈಯಕ್ತಿಕ ಅಭಿವೃದ್ಧಿ ಮತ್ತು ಸ್ವಯಂ-ಆರೈಕೆಗಾಗಿ ಸಮಗ್ರ ಸಾಧನವಾಗಿದೆ. ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸುವ ಮೂಲಕ ಯೋಗದ ಅಭ್ಯಾಸದ ಮೂಲಕ ಆರೋಗ್ಯ, ಸಂತೋಷ ಮತ್ತು ಏಕತೆಯನ್ನು ಉತ್ತೇಜಿಸಲು ಮೀಸಲಾಗಿರುವ ಜಾಗತಿಕ ಸಮುದಾಯವನ್ನು ವ್ಯಕ್ತಿಗಳು ಸೇರಬಹುದು.

ಶಾಂತಿ, ಸಾಮರಸ್ಯಕ್ಕೆ ಪ್ರೇರಣೆ

ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಅನುಭವಿಸಲು ಯೋಗವು ಎಲ್ಲಾ ವಯಸ್ಸಿನವರು, ಹಿನ್ನೆಲೆಯುಳ್ಳವರನ್ನು ಪ್ರೋತ್ಸಾಹಿಸುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮತ್ತು ವೇಗದ ಜಗತ್ತಿನಲ್ಲಿ ಸಮತೋಲನವನ್ನು ಕಂಡುಕೊಳ್ಳುವ ಪ್ರಾಮುಖ್ಯತೆಯನ್ನು ನೆನಪಿಸುತ್ತದೆ. ವಿಶ್ವಾದ್ಯಂತ ಜನರನ್ನು ಒಗ್ಗೂಡಿಸಿ ಸಮುದಾಯದಲ್ಲಿ ಶಾಂತಿ, ಸಾಮರಸ್ಯ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸರ್ಕಾರ, ಸಂಘ ಸಂಸ್ಥೆಗಳ ಬೆಂಬಲ

ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ತೇಜಿಸುವಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಭಾರತದಲ್ಲಿ, ಆಯುಷ್ ಸಚಿವಾಲಯ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ. ಶಿಕ್ಷಣ ಸಂಸ್ಥೆಗಳು, ಲಾಭರಹಿತ, ಮತ್ತು ಯೋಗ ಕೇಂದ್ರಗಳು ವಿವಿಧ ಆಚರಣೆಗಳನ್ನು ಆಯೋಜಿಸುತ್ತದೆ.

ಜಾಗತಿಕ ಪರಿಣಾಮ

ಪ್ರಪಂಚದಾದ್ಯಂತ ಯೋಗ ದಿನಾಚರಣೆಯು ಯೋಗಕ್ಷೇಮ ಮತ್ತು ಸಾವಧಾನತೆಯ ಹಂಚಿಕೆಯ ಬದ್ಧತೆಯಲ್ಲಿ ಸಮುದಾಯಗಳನ್ನು ಒಗ್ಗೂಡಿಸಿದೆ. ಯೋಗದ ಅಭ್ಯಾಸವು ಉಸಿರಾಟ, ಚಲನೆ ಮತ್ತು ಧ್ಯಾನದ ಮೇಲೆ ಕೇಂದ್ರೀಕರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಕ್ಷೇಮವನ್ನು ಉತ್ತೇಜಿಸಲು ಇದೊಂದು ಪ್ರಬಲ ಸಾಧನವಾಗಿದೆ ಎಂಬುದು ಸಾಬೀತಾಗಿದೆ.


ಯೋಗದ ಮಹತ್ವ ಜಗತ್ತಿಗೆ ತಿಳಿಸಿದ ಪ್ರಧಾನಿ

ಯೋಗದ ಮಹತ್ವವನ್ನು ಪ್ರತಿಬಿಂಬಿಸಿದ ಪ್ರಧಾನಿ ನರೇಂದ್ರ ಮೋದಿ, ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆ, ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಈಡೇರಿಕೆ, ಮನುಷ್ಯ ಮತ್ತು ಪ್ರಕೃತಿ, ಆರೋಗ್ಯ ಮತ್ತು ಯೋಗಕ್ಷೇಮದ ನಡುವಿನ ಸಾಮರಸ್ಯಕ್ಕೆ ಸಮಗ್ರ ವಿಧಾನವಾಗಿದೆ ಎಂದು ಸಾರುತ್ತ ಬಂದಿದ್ದಾರೆ.

ಇದನ್ನೂ ಓದಿ: International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

ಯೋಗದ ಪ್ರಾಚೀನ ಬೇರುಗಳು ಮತ್ತು ಆಧುನಿಕ ರೂಪಾಂತರಗಳೊಂದಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ. ಅಭ್ಯಾಸವು ಸಮತೋಲನ ಮತ್ತು ಆಂತರಿಕ ಶಾಂತಿಯ ಪ್ರಜ್ಞೆಯನ್ನು ಬೆಳೆಸಲು ಸಾವಧಾನತೆ, ಉಸಿರಾಟದ ತಂತ್ರಗಳು ಮತ್ತು ದೈಹಿಕ ಭಂಗಿಗಳನ್ನು ಒತ್ತಿಹೇಳುತ್ತದೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ಸ್ಮರಿಸಲು ಜನರು ಒಗ್ಗೂಡಿ, ಅವರು ಒಂದು ಕಾಲಾತೀತ ಸಂಪ್ರದಾಯವನ್ನು ಆಚರಿಸುತ್ತಾರೆ. ಮಾತ್ರವಲ್ಲದೆ ಸ್ವಯಂ-ಆರೈಕೆ ಮತ್ತು ಸ್ವಯಂ-ಸುಧಾರಣೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಾರೆ.

ಆರಂಭಿಕರಿಂದ ಮುಂದುವರಿದ ಅಭ್ಯಾಸಿಗಳವರೆಗೆ ಎಲ್ಲಾ ಹಂತಗಳಲ್ಲಿ ಭಾಗವಹಿಸುವವರು ಕ್ಷೇಮ ಮತ್ತು ಸ್ವಯಂ ಅನ್ವೇಷಣೆಗೆ ಹಂಚಿಕೆಯ ಸಮರ್ಪಣೆಯಲ್ಲಿ ಒಂದಾಗುತ್ತಾರೆ. ಅಂತಾರಾಷ್ಟ್ರೀಯ ಯೋಗ ದಿನವು ಈ ಅಭ್ಯಾಸದ ಸಾರ್ವತ್ರಿಕ ಮನವಿ ಮತ್ತು ನಿರಂತರ ಪ್ರಭಾವದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯ, ಸಾಮರಸ್ಯ ಮತ್ತು ಏಕತೆಯ ಆಚರಣೆಯಲ್ಲಿ ಸೇರಲು ಪ್ರತಿಯೊಂದು ಹಿನ್ನೆಲೆಯ ವ್ಯಕ್ತಿಗಳನ್ನು ಇದು ಆಹ್ವಾನಿಸುತ್ತದೆ.

Continue Reading
Advertisement
Sunny Leone reaction about actor darshan incident
ಸ್ಯಾಂಡಲ್ ವುಡ್22 mins ago

Sunny Leone: ಬೆಂಗಳೂರಿಗೆ ಬಂದ ಸನ್ನಿ ಲಿಯೋನ್ ; ದರ್ಶನ್ ಬಗ್ಗೆ ಕೇಳಿದ್ದಕ್ಕೆ ಗರಂ ಆದ ಹಾಟ್‌ ಬೆಡಗಿ!

actor Darshan and Sumalatha Ambareesh
ಪ್ರಮುಖ ಸುದ್ದಿ29 mins ago

Actor Darshan: ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ ಅಂಬರೀಶ್‌ ಏಕೀ ಗಾಢ ಮೌನ?

Shot Dead
ವಿದೇಶ32 mins ago

ಮುಂದುವರಿದ ʼಅಪರಿಚಿತರʼ ಕಾರ್ಯಾಚರಣೆ; ಭಾರತೀಯ ಸೇನಾನೆಲೆ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಹತ

Kane Williamson
ಕ್ರೀಡೆ37 mins ago

Kane Williamson: ನಾಯಕತ್ವದಿಂದ ಕೆಳಗಿಳಿದ ಕೇನ್​ ವಿಲಿಯಮ್ಸನ್

Actor Darshan Renuka Swamy murder case umapathy counter
ಸ್ಯಾಂಡಲ್ ವುಡ್51 mins ago

Actor Darshan: ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು ಎಂದು ದರ್ಶನ್‌ಗೆ ತಿರುಗೇಟು ಕೊಟ್ಟ ಉಮಾಪತಿ!

International Yoga Day 2024
ಆರೋಗ್ಯ1 hour ago

International Yoga Day 2024: ಹಿರಿಯರಿಗೆ ಸೂಕ್ತವಾದ ಯೋಗಾಸನಗಳಿವು

Lucknow Airport
ದೇಶ1 hour ago

Lucknow Airport: ವಿಮಾನ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ನಡೆಸಿದ ಮಹಿಳೆ; ಕಾರಣ ಏನು?

USA vs SA
ಕ್ರಿಕೆಟ್1 hour ago

USA vs SA: ಇಂದು ದಕ್ಷಿಣ ಆಫ್ರಿಕಾ-ಅಮೆರಿಕ ನಡುವೆ ಸೂಪರ್​-8 ಕದನ

Vastu Tips
ಧಾರ್ಮಿಕ1 hour ago

Vastu Tips: ಗಂಗಾ ಜಲ ಮನೆಯಲ್ಲಿಟ್ಟರೆ ಸಾಲದು; ಅದನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು?

actor Darshan Arrested
ಕ್ರೈಂ2 hours ago

Actor Darshan: `ನಾನೇ 30 ಲಕ್ಷ ರೂ. ಕೊಟ್ಟೆ….’ ಕೊಲೆ ಬಗ್ಗೆ ಸ್ವ ಇಚ್ಛೆ ಹೇಳಿಕೆ ನೀಡಿದ ದರ್ಶನ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ3 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌