Site icon Vistara News

Drugs Smuggling: ಗುಜರಾತ್‌ನಲ್ಲಿ ಪಾಕ್‌ನ 14 ಜನರ ಬಂಧನ, 600 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ!

Drugs Smuggling

In Covert Operation, Pakistan Boat Smuggling Drugs Worth ₹ 600 Crores Into India Caught

ಗಾಂಧಿನಗರ: ಗುಜರಾತ್‌ ಬಳಿಯ ಸಾಗರ ಪ್ರದೇಶದಲ್ಲಿ (Gujarat) ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಲಾಗಿದ್ದು, ಪಾಕಿಸ್ತಾನದ ಹಡಗನ್ನು ತಡೆಯಲಾಗಿದೆ. ಹಡಗಿನಲ್ಲಿ 600 ಕೋಟಿ ರೂ. ಮೌಲ್ಯದ 14 ಕೆ.ಜಿ ಮಾದಕವಸ್ತು ಸಿಕ್ಕಿದ್ದು, ಅಕ್ರಮ ಸಾಗಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದ (Pakistan) 14 ಜನರನ್ನು ಬಂಧಿಸಲಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಮಾದಕವಸ್ತು ಸಾಗಣೆ (Drugs Smuggling) ಮಾಡಲಾಗುತ್ತಿರುವ ಕುರಿತು ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಡ್ರಗ್ಸ್‌ಅನ್ನು ವಶಪಡಿಸಿಕೊಳ್ಳಲಾಗಿದೆ.

ನಿಖರ ಮಾಹಿತಿ ಮೇರೆಗೆ ಕರಾವಳಿ ರಕ್ಷಣಾ ಪಡೆ, ಭ್ರಷ್ಟಾಚಾರ ನಿಗ್ರಹ ದಳ (ATS) ಹಾಗೂ ಮಾದಕವಸ್ತು ನಿಯಂತ್ರಣ ಬ್ಯೂರೋದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. “ಪಾಕಿಸ್ತಾನದ 14 ನಾಗರಿಕರನ್ನು ಬಂಧಿಸಲಾಗಿದ್ದು, ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ” ಎಂಬುದಾಗಿ ಕರಾವಳಿ ರಕ್ಷಣಾ ಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಮಾದಕವಸ್ತು ಸಾಗಣೆ ಮಾಡುತ್ತಿದ್ದ ಹಡಗನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳು ಕರಾವಳಿ ರಕ್ಷಣಾ ಪಡೆಯ ಒಂದು ನೌಕೆ ಹಾಗೂ ವಿಮಾನವನ್ನು ಬಳಸಿಕೊಳ್ಳಲಾಗಿದೆ. ರಾಜರತನ್‌ ಎಂಬ ನೌಕೆಯ ಮೂಲಕ ಅಧಿಕಾರಿಗಳು ಬೆನ್ನತ್ತಿ ಪಾಕಿಸ್ತಾನದ ನೌಕೆಯನ್ನು ಹಿಡಿಯಲಾಗಿದೆ. ಗುಪ್ತಚರ ಮೂಲಗಳಿಂದ ನಿಖರ ಮಾಹಿತಿ ಮೇರೆಗೆ ಶಂಕಾಸ್ಪದ ಹಡಗನ್ನು ತಡೆದ, ಪರಿಶೀಲನೆ ನಡೆಸಿದಾಗ ಡ್ರಗ್ಸ್‌ ಜಾಲ ಬಯಲಾಗಿದೆ” ಎಂದು ತಿಳಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಗುಜರಾತ್‌ ಸಾಗರ ಪ್ರದೇಶದಲ್ಲಿ ಇರಾನ್‌ನಿಂದ ಸಾಗಿಸಲಾಗುತ್ತಿದ್ದ ಸುಮಾರು 3 ಸಾವಿರ ಕೆ.ಜಿ ಡ್ರಗ್ಸ್‌ಅನ್ನು ವಶಪಡಿಸಿಕೊಳ್ಳಲಾಗಿತ್ತು. ನೌಕಾಪಡೆಯ ಪ್ರಕಾರ 3,089 ಕಿಲೋಗ್ರಾಂಗಳಷ್ಟು ಚರಸ್, 158 ಕೆಜಿ ಮೆಥಾಂಫೆಟಮೈನ್ ಮತ್ತು 25 ಕೆಜಿ ಮಾರ್ಫಿನ್ ಅನ್ನು ಒಳಗೊಂಡಿರುವ ಈ ಮಾದಕವಸ್ತು ವಶಪಡಿಸಿಕೊಳ್ಳುವಿಕೆಯು ಇತ್ತೀಚಿನ ದಿನಗಳಲ್ಲಿ ಬೃಹತ್‌ ಪ್ರಮಾಣದ್ದಾಗಿದೆ. ಪೋರಬಂದರ್‌ನ ಬಂದರಿನಲ್ಲಿ ನಡೆಸಿದ ಕಾರ್ಯಾಚರಣೆಯ ನಂತರ ಐವರು ವಿದೇಶಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿತ್ತು.

ಫೆಬ್ರವರಿ 27ರಂದು ಬಂಧಿತ ದೋಣಿ, ಸಿಬ್ಬಂದಿ ಮತ್ತು ನಿಷಿದ್ಧ ಮಾದಕ ವಸ್ತುಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ಕಣ್ಗಾವಲು ಕಾರ್ಯಾಚರಣೆಯ ಸಮಯದಲ್ಲಿ P8I LRMR ವಿಮಾನವು ಮಾಹಿತಿ ಸಂಗ್ರಹಿಸಿದ್ದು, ನಂತರ ಪ್ರತಿಕ್ರಿಯೆಯಾಗಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಅನುಮಾನಾಸ್ಪದ ದೋಣಿಯನ್ನು ಯಶಸ್ವಿಯಾಗಿ ಪ್ರತಿಬಂಧಿಸಿ ಸೆರೆಹಿಡಿಯಲಾಯಿತು.

ಇದನ್ನೂ ಓದಿ: Student Death: ಅಮೆರಿಕದಲ್ಲಿ ಡ್ರಗ್ಸ್‌ ಗ್ಯಾಂಗ್‌ನಿಂದ ಅಪಹೃತನಾದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

Exit mobile version