ಹೊಸದಿಲ್ಲಿ: ಈದ್ (Eid) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್‌ಸಿಇಎಲ್) ಮೂಲಕ ಯುಎಇ ದೇಶಕ್ಕೆ (UAE) ಇನ್ನೂ 10,000 ಟನ್ ಈರುಳ್ಳಿಯನ್ನು ರವಾನಿಸಲು (onion export) ಭಾರತ ಅನುಮತಿ ನೀಡಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಮಂಗಳವಾರ ರಾತ್ರಿ ತಿಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ವಿಧಿಸಲಾದ ರಫ್ತು ಮೇಲಿನ ನಿಷೇಧವನ್ನು ಮೀರಿ ಭಾರತವು ಯುಎಇಗೆ ಒಟ್ಟು 79,150 ಟನ್ ಈರುಳ್ಳಿಯನ್ನು ರಫ್ತು (Onion Export) ಮಾಡಲು ಅನುಮೋದಿಸಿದೆ. ಇದರಲ್ಲಿ ಮಾರ್ಚ್‌ನಲ್ಲಿ ಕಳಿಸಿದ 14,400 ಟನ್ ಕೂಡ ಸೇರಿದೆ. ನಿರ್ಬಂಧಿತವಾದ ಜಾಗತಿಕ ಪೂರೈಕೆಗಳು ಮತ್ತು ಎಲ್ ನಿನೊ ಹವಾಮಾನ ವಿದ್ಯಮಾನದಿಂದ ಉಂಟಾಗಿರುವ ಬೆಳೆಯ ಕೊರತೆಯು, 2023-24ರ ಹಣಕಾಸು ವರ್ಷದಲ್ಲಿ ಈರುಳ್ಳಿ ರಫ್ತು ನಿರ್ಬಂಧಿಸಲು ಸರ್ಕಾರವನ್ನು ಪ್ರೇರೇಪಿಸಿತು.
Just In | Govt approves additional export of
— ET NOW (@ETNOWlive) April 3, 2024
10,000 tonne onions to UAE pic.twitter.com/uQiKPTQPQf
ಡಿಸೆಂಬರ್ 8, 2023ರಂದು, ಸರ್ಕಾರವು ಈರುಳ್ಳಿ ರಫ್ತು ಮಾಡುವುದನ್ನು 31 ಮಾರ್ಚ್ 2024ರವರೆಗೆ ನಿಷೇಧಿಸಿತ್ತು. ನಂತರ ಇದನ್ನು ಅನಿರ್ದಿಷ್ಟವಾಗಿ ವಿಸ್ತರಿಸಲಾಗಿದೆ. ಆದಾಗ್ಯೂ, ಬೇರೆ ದೇಶಗಳು ಮಾಡಿದ ವಿನಂತಿಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ನೀಡಿದ ಅನುಮತಿಯ ಮೇರೆಗೆ ಈರುಳ್ಳಿ ರಫ್ತು ಮಾಡಲು ಅನುಮತಿಸಲಾಗುತ್ತಿದೆ ಎಂದು DGFT ಅಧಿಸೂಚನೆ ಹೇಳಿದೆ.
ಈರುಳ್ಳಿ ಬೆಲೆಗಳನ್ನು ಪರಿಶೀಲಿಸಲು ಸರ್ಕಾರವು 2023ರ ಅಕ್ಟೋಬರ್ 28ರಂದು ಡಿಸೆಂಬರ್ 31, 2023ರವರೆಗೆ ಪ್ರತಿ ಟನ್‌ಗೆ $800ರ ಕನಿಷ್ಠ ರಫ್ತು ಬೆಲೆಯನ್ನು (MEP) ವಿಧಿಸಿತು. ಆಗಸ್ಟ್‌ನಲ್ಲಿ, 31 ಡಿಸೆಂಬರ್ 2023ರವರೆಗೆ ಈರುಳ್ಳಿ ರಫ್ತಿನ ಮೇಲೆ ಸರ್ಕಾರವು 40% ಸುಂಕವನ್ನು ವಿಧಿಸಿತು.
ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಬಫರ್ ಸ್ಟಾಕ್‌ನಿಂದ ಇದನ್ನು ಬಿಡುಗಡೆ ಮಾಡುತ್ತಿದೆ. 2023-24ರ ಋತುವಿನಲ್ಲಿ 3,00,000 ಟನ್ ಈರುಳ್ಳಿಯನ್ನು ಬಫರ್ ಆಗಿ ನಿರ್ವಹಿಸಲು ಕೇಂದ್ರ ಸರ್ಕಾರವು ಈ ಹಿಂದೆ ನಿರ್ಧರಿಸಿತ್ತು. 2022-23ರಲ್ಲಿ ಸರ್ಕಾರವು 2,51,000 ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್‌ನಂತೆ ನಿರ್ವಹಿಸಿತು. 2024-25 ಋತುವಿಗಾಗಿ ಕಳೆದ ವಾರ ರಬಿ ಈರುಳ್ಳಿ ಸಂಗ್ರಹಣೆಯನ್ನು ಪ್ರಾರಂಭಿಸಿತು. 2024-25 ರಬಿ ಋತುವಿನಲ್ಲಿ 500,000 ಟನ್ ಈರುಳ್ಳಿ ಸಂಗ್ರಹಿಸಲು ಸರ್ಕಾರ ಗುರಿ ಹೊಂದಿದೆ.
ಇದನ್ನೂ ಓದಿ: Onion Export: ನಾಲ್ಕು ರಾಷ್ಟ್ರಗಳಿಗೆ 54,760 ಟನ್ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್