Site icon Vistara News

Modi and Sheikh | 25 ವರ್ಷದಲ್ಲಿ ಭಾರತ – ಬಾಂಗ್ಲಾ ದೇಶ ನಡುವಿನ ಒಪ್ಪಂದಗಳು ಹೊಸ ಎತ್ತರಕ್ಕೆ: ಮೋದಿ

Sheikh and Modi

ನವ ದೆಹಲಿ: ನಾಲ್ಕು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಮುಂದಿನ 25 ವರ್ಷಗಳಲ್ಲಿ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಒಪ್ಪಂದಗಳು ಹೊಸ ಎತ್ತರವನ್ನು ತಲುಪಲಿವೆ ಎಂದು ನರೇಂದ್ರ ಮೋದಿ ಅವರು ಹೇಳಿದರು.

ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ವ್ಯಾಪಾರ ವೇಗವಾಗಿ ಹೆಚ್ಚುತ್ತಿದೆ. ನಾವು ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಅಣು ವಲಯಗಳಿಗೂ ಈ ಸಹಕಾರವನ್ನು ವಿಸ್ತರಿಸಲಿದ್ದೇವೆ. ವಿದ್ಯುತ್ ಪ್ರಸರಣ ಲೈನ್ ವಿಸ್ತರಿಸುವ ಸಂಬಂಧವೂ ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆಗಳು ನಡೆಯುತ್ತಿವೆ ಎಂದು ಪ್ರಧಾನಿ ಅವರು ಇದೇ ವೇಳೆ ತಿಳಿಸಿದರು.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆಯ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ಒಟ್ಟು 7 ತಿಳಿವಳಿಕಾ ಒಪ್ಪಂದಗಳಿಗೆ ಅಂಕಿತ ಹಾಕಿವೆ. ಬಳಿಕ ಇಬ್ಬರೂ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಾಂಗ್ಲಾದೇಶದ ಜತೆಗೆ ಸಮಗ್ರ ಆರ್ಥಿಕ ಜಂಟಿಸಹಭಾಗಿತ್ವ ಒಪ್ಪಂದ(ಸಿಇಪಿಎ) ಸಂಬಂಧ ಮಾತುಕತೆ ನಡೆಸಲಾಗುವುದು ಎಂದು ಮೋದಿ ಅವರು ಹೇಳಿದರು.

ಸಿಇಪಿಎ ಸಂಬಂಧ ಉಭಯ ರಾಷ್ಟ್ರಗಳು ಅಧ್ಯಯನದಲ್ಲಿ ಪಾಲ್ಗೊಂಡಿವೆ. ಈ ಬಗ್ಗೆ ಹಲವು ವರ್ಷಗಳಿಂದಲೂ ಉಭಯ ರಾಷ್ಟ್ರಗಳು ಚರ್ಚೆಯಲ್ಲಿ ತೊಡಗಿಸಿಕೊಂಡಿವೆ. ಬಾಂಗ್ಲಾದೇಶವು ಭಾರತದ ಅತಿದೊಡ್ಡ ಅಭಿವೃದ್ಧಿ ಸಂಗಾತಿಯಾಗಿದೆ ಮತ್ತು ಪ್ರಾದೇಶಿಕ ವ್ಯಾಪಾರಿ ಸಂಗಾತಿಯಾಗಿದೆ ಎಂದು ಮೋದಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Sheikh Hasina India Visit | ನಾವು ಭಾರತಕ್ಕೆ ಸದಾ ಋಣಿಯಾಗಿರುತ್ತೇವೆ ಎಂದ ಬಾಂಗ್ಲಾ ಪ್ರಧಾನಿ ಶೇಖ್​ ಹಸೀನಾ

Exit mobile version