ನವ ದೆಹಲಿ: ಕಳೆದ 2020ರ ಮೇನಲ್ಲಿ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಸಂಘರ್ಷ ನಡೆದ ಬಳಿಕ ಭಾರತದ ಜತೆಗಿನ ಗಡಿಯುದ್ದಕ್ಕೂ ಕಳೆದ ಮೂರು ವರ್ಷಗಳಲ್ಲಿ ಚೀನಾ ತನ್ನ ವಾಯುನೆಲೆಗಳ ಸಾಮರ್ಥ್ಯವನ್ನು ಅನೂಹ್ಯವಾಗಿ ಅಭಿವೃದ್ಧಿಪಡಿಸಿರುವುದು ಗೊತ್ತಾಗಿದೆ. ಭಾರತದ ಉಪಗ್ರಹಗಳು ಸೆರೆಹಿಡಿದಿರುವ ಇತ್ತೀಚಿನ ಚಿತ್ರಗಳಲ್ಲಿ ಇದು ಕಂಡು ಬಂದಿದೆ.
2020ರಿಂದೀಚೆಗೆ ಗಡಿ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ – Line of Actual Control) ಚೀನಾವು ತನ್ನ ಮಿಲಿಟರಿ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ. ಭಾರತ ತನ್ನ ಗಡಿ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವಂತೆಯೇ, ಪ್ರತಿಯಾಗಿ ಚೀನಾ ಕೂಡ ಅದೇ ಕೆಲಸ ಮಾಡಿದೆ ಎಂಬುದು ಸ್ಯಾಟಲೈಟ್ ಇಮೇಜ್‌ಗಳ ವಿಶ್ಲೇಷಣೆಯಿಂದ ಗೊತ್ತಾಗಿದೆ.
ಗಡಿಗೆ ಸಮೀಪದಲ್ಲಿ ಚೀನಾ ಏರ್ ಫೀಲ್ಡ್, ಹೆಲಿಪ್ಯಾಡ್, ರೈಲ್ವೆ ಜಾಲ, ಕ್ಷಿಪಣಿ ನೆಲೆ, ರಸ್ತೆಗಳು, ಸೇತುವೆಗಳನ್ನು ಕಟ್ಟುತ್ತಿದೆ. ಸೇನೆಯ ತುಕಡಿಗಳ ಓಡಾಟಕ್ಕೆ ಹಾಗೂ ಕ್ಷಿಪ್ರ ನಿಯೋಜನೆಗೆ ಇದರಿಂದ ಅನುಕೂಲವಾಗಲಿದೆ. ಹೋಟನ್, ಎನ್‌ಗರಿ ಗುನ್ಸಾ, ಲ್ಹಾಸಾ ಮೇಲಿನ ಸ್ಯಾಟಲೈಟ್ ಚಿತ್ರಗಳು ಗಡಿಯಲ್ಲಿ ಚೀನಾದ ಚಟುವಟಿಕೆಗಳನ್ನು ಬಿಂಬಿಸಿದೆ. ಆದರೆ ಈ ಇಮೇಜ್‌ಗಳ ವಿಶ್ಲೇಷಣೆ ಬಗ್ಗೆ ಭಾರತೀಯ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಸಂಘರ್ಷದಲ್ಲು ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾದ ಸೈನಿಕರೂ ಹತರಾಗಿದ್ದರು. 45 ವರ್ಷಗಳ ಬಳಿಕ ಎಲ್‌ಎಸಿಯಲ್ಲಿ ಸಂಘರ್ಷ ನಡೆದಿತ್ತು.
India, China hold key in person WMCC talks in Delhi. MEA release pic.twitter.com/J5mQLLA32G
— Sidhant Sibal (@sidhant) May 31, 2023
ಲೇಹ್‌ನಿಂದ 400 ಕಿ.ಮೀ ದೂರದಲ್ಲಿರುವ ಹೋಟನ್ ಏರ್ ಫೀಲ್ಡ್ ಅನ್ನು 2002ರಲ್ಲಿ ವಿಸ್ತರಿಸಲಾಗಿತ್ತು. 2020ರಿಂದೀಚೆಗೆ ಮತ್ತೆ ವಿಸ್ತರಿಸಲಾಗಿದೆ. ಹೊಸ ರನ್ ವೇ ನಿರ್ಮಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆಗಳಿಗೆ ಪೂರಕವಾಗಿರುವ ಕಟ್ಟಡಗಳನ್ನು ಅಲ್ಲಿ ಕಟ್ಟಲಾಗಿದೆ. ಭಾರತದ ಗಡಿಯಿೊಂದ 200 ಕಿ.ಮೀ ದೂರದಲ್ಲಿರುವ ಎನ್‌ಗರಿ ಗುನ್ಸಾ ಏರ್ ಫೀಲ್ಡ್ ಅನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಕನಿಷ್ಠ 16 ವಿಮಾನಗಳನ್ನು ತಂದು ನಿಲ್ಲಿಸಬಹುದಾದಷ್ಟು ಅಭಿವೃದ್ಧಿಪಡಿಸಲಾಗಿದೆ. ಲ್ಹಾಸಾ ಏರ್‌ಪೋರ್ಟ್‌ನಲ್ಲೂ ಹೊಸ ಕಟ್ಟಡಗಳನ್ನು ರಚಿಸಲಾಗಿದೆ. 30 ವಿಮಾನಗಳಿಗೆ ನಿಲ್ಲಬಹುದಾದಷ್ಟು ವಿಸ್ತರಿಸಲಾಗಿದೆ.
ಚೀನಾ ಸೇನೆ ಕಳೆದ ಮೂರು ವರ್ಷಗಳಲ್ಲಿ ಭಾರತೀಯ ವಾಯುಪಡೆಗೆ ಎದಿರೇಟು ನೀಡಲು ಬೇಕಾದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ತಂತ್ರ ಹೂಡಿದೆ ಎಂದು ನಿವೃತ್ತ ಏರ್‌ವೈಸ್ ಮಾರ್ಶಲ್ ಮನ್ ಮೋಹನ್ ಬಹಾದ್ದೂರ್ ಹೇಳಿದ್ದಾರೆ. ಸಾಮಾನ್ಯವಾಗಿ ಲಡಾಕ್ ವಲಯದಲ್ಲಿ ಭಾರತೀಯ ವಾಯುಪಡೆಗೆ ಹೆಚು ಅನುಕೂಲಕರ ಪರಿಸ್ಥಿತಿ ಇದೆ. ಭಾರತದ ವಾಯುನೆಲೆಗಳು ಈ ಅನುಕೂಲ ಪಡೆದು ದೊಡ್ಡ ಪೇಲೋಡ್‌ಗಳನ್ನು ಬಳಸಬಲ್ಲವು. ಈ ಹಿನ್ನೆಲೆಯಲ್ಲಿ ಚೀನಾ ಪ್ರತಿತಂತ್ರದ ಭಾಗವಾಗಿ ಗಡಿಯಲ್ಲಿ ತನ್ನ ವಾಯುಪಡೆಗೆ ಮೂಲಸೌಕರ್ಯ ಕಟ್ಟಿಕೊಡುತ್ತದೆ ಎಂದು ಬಹಾದ್ದೂರ್ ವಿವರಿಸಿದ್ದಾರೆ.
ಲಡಾಕ್ ವಲಯದಲ್ಲಿ ಚೀನಾ ತನ್ನ ಬದಿಯಲ್ಲಿ ಆಯಕಟ್ಟಿನ ಜಾಗಗಳಲ್ಲಿ ಕ್ಷಿಪಣಿಗಳನ್ನು ಅಳವಡಿಸಿದ್ದು, 2,000 ಕಿ.ಮೀ ದೂರದ ಗುರಿಯನ್ನು ಬೇಧಿಸಬಲ್ಲುದು ಎಂದೂ ವರದಿಯಾಗಿದೆ. ಲಡಾಕ್‌ನಿಂದ ಅರುಣಾಚಲ ಪ್ರದೇಶದ ತನಕ ಎಲ್‌ಎಸಿಯುದ್ದಕ್ಕೂ ಚೀನಾ ಏರ್ ಫೀಲ್ಡ್‌ಗಳನ್ನು ನಿರ್ಮಿಸಿದೆ ಎಂದು ಬಹಾದ್ದೂರ್ ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಬುಧವಾರ ಲಡಾಕ್ ಗಡಿ ವಿವಾದ ಇತ್ಯರ್ಥಕ್ಕೆ ಹಾಗೂ ಗಡಿಯಲ್ಲಿ ಸಹಜ ಸ್ಥಿತಿಯನ್ನು ನೆಲೆಗೊಳಿಸುವುದಕ್ಕೆ ಸಂಬಂಧಿಸಿ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ (India-China talks) ನಡೆದಿದೆ. ಗಡಿ ವಲಯದಲ್ಲಿ ಚೀನಾದ ಸೇನೆಯ ಚಟುವಟಿಕೆಗಳನ್ನು ನಿಲ್ಲಿಸಲು ಭಾರತ ಒತ್ತಾಯಿಸುತ್ತಿದೆ. ಇದರ ಭಾಗವಾಗಿ ರಾಜತಾಂತ್ರಿಕ ಮಾತುಕತೆ ಶುರುವಾಗಿದೆ. ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ಇತ್ಯರ್ಥಕ್ಕೆ 27ನೇ ಮುಖಾಮುಖಿ ಮಾತುಕತೆ ಇದಾಗಿದೆ. 2020ರ ಮೇನಲ್ಲಿ ಲಡಾಕ್‌ನಲ್ಲಿ ಚೀನಾ-ಭಾರತ ಸೇನಾ ಸಂಘರ್ಷದ ಬಳಿಕ ಈ ಮಾತುಕತೆ ನಡೆಯುತ್ತಿರುವುದು ಗಮನಾರ್ಹವಾಗಿದೆ.
ಈ ಹಿಂದಿನ ಮುಖಾಮುಖಿ ಮಾತುಕತೆ ಬೀಜಿಂಗ್‌ಲ್ಲಿ ನಡೆದಿತ್ತು. (Working mechanism for consultation and coordination on India-China Border affairs) ಗಡಿಯಲ್ಲಿ ಶಾಂತಿ ಕಾಪಾಡಲು ಇರುವ ಸವಾಲುಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಮಿಲಿಟರಿ ಮಾತುಕತೆ:
ಉಭಯ ಬಣಗಳೂ ಶೀಘ್ರದಲ್ಲಿಯೇ ಮಹತ್ವದ ಮಿಲಿಟರಿ ಮಾತುಕತೆ ನಡೆಸಲು ನಿರ್ಧರಿಸಿವೆ. ಭಾರತ-ಚೀನಾ ಗಡಿಯ ಪಶ್ಚಿಮ ವಲಯದಲ್ಲಿನ ಎಲ್‌ಎಸಿ (Line of Actual Control)
ಇದನ್ನೂ ಓದಿ: IPEF deal : ಚೀನಾದ ಅವಲಂಬನೆ ತಗ್ಗಿಸಲು ಅಮೆರಿಕ- ಭಾರತ ಸೇರಿ 14 ರಾಷ್ಟ್ರಗಳ ಡೀಲ್, ಏನಿದೆ ಇದರಲ್ಲಿ?