Site icon Vistara News

Global Risk Report: ತಪ್ಪು ಮಾಹಿತಿ ಅಪಾಯ ಹೆಚ್ಚಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಿ

India first rank in among Disinformation and misinformation Says Global Risk Report

ನವದೆಹಲಿ: ಭಾರತವೂ (India) ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಸುಳ್ಳು ಮಾಹಿತಿಯು (Disinformation) ಪ್ರಪಂಚದಾದ್ಯಂತ ಜನರು ಎದುರಿಸುತ್ತಿರುವ ಪ್ರಮುಖ ಬೆದರಿಕೆ ಅಥವಾ ಸವಾಲುಗಳಲ್ಲಿ ಒಂದಾಗಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಮ್‌ನ (World Economic Forum) 2024 ಗ್ಲೋಬಲ್ ರಿಸ್ಕ್ ರಿಪೋರ್ಟ್‌ಗಾಗಿ (Global Risk Report) ಸಮೀಕ್ಷೆ ನಡೆಸಿದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ಟ್ಯಾಟಿಸ್ಟಾದಲ್ಲಿ ಪ್ರಕಟವಾಗಿರುವ ಈ ವರದಿಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಆತಂಕದ ಸಂಗತಿ ಎಂದರೆ, ಉದ್ದೇಶಪೂರ್ವ ತಪ್ಪು ಮಾಹಿತಿ ತಪ್ಪು ತಿಳಿವಳಿಕೆ ಮಾಹಿತಿಯ (misinformation) ವಿಷಯದಲ್ಲಿ ಭಾರತವು ಅಗ್ರಸ್ಥಾನಿಯಾಗಿದೆ!

ಲೇಖಕರು ಉದ್ದೇಶಪೂರ್ವಕವಾಗಿ ತಮ್ಮ ಪ್ರೇಕ್ಷಕರನ್ನು ದಾರಿ ತಪ್ಪಿಸುವ ಸಂದರ್ಭಗಳು ಎಂದು ತಪ್ಪು ಸುದ್ದಿಯನ್ನು (Disinformation) ವ್ಯಾಖ್ಯಾನಿಸಲಾಗಿದೆ. ಹಾಗೆಯೇ ತಪ್ಪು ಮಾಹಿತಿಯು (Misinformation) ನಿಜವಾದ ನಂಬಿಕೆಯಿಂದ ಹರಡಿರುವ ಮಾಹಿತಿಯಾಗಿದ್ದರೂ ಹಾನಿಕಾರಕವಾಗಿರುತ್ತದೆ ಮತ್ತು ಅದು ಪಿತೂರಿ ಸಿದ್ಧಾಂತಗಳಂತೆಯೇ ಭಾಗವಾಗಿರುತ್ತದೆ ಎಂದು ವಿವರಿಸಲಾಗಿದೆ. ಇದನ್ನು ತಪ್ಪು ತಿಳಿವಳಿಕೆಯ ಮಾಹಿತಿಯೂ ಎಂದು ಹೇಳಬಹುದು.

ಆತಂಕದ ಸಂಗತಿ ಎಂದರೆ ಉದ್ದೇಶಪೂರ್ವಕ ತಪ್ಪು ಸುದ್ದಿ ಮತ್ತು ತಪ್ಪು ಮಾಹಿತಿಯ ಬೆದರಿಕೆ ಎದುರಿಸುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಅಗ್ರಸ್ಥಾನಿಯಾಗಿದೆ.

ಸಾಂಕ್ರಾಮಿಕ ರೋಗಗಳು, ಕಾನೂನುಬಾಹಿರ ಆರ್ಥಿಕ ಚಟುವಟಿಕೆ, ಅಸಮಾನತೆ (ಸಂಪತ್ತು, ಆದಾಯ) ಮತ್ತು ಕಾರ್ಮಿಕರ ಕೊರತೆಯ ಮೊದಲು, ಎಲ್ಲ ಬೆದರಿಕೆಗಳ ಪೈಕಿ ತಪ್ಪು ತಿಳಿವಳಿಕೆ ಮಾಹಿತಿ ಹಾಗೂ ಉದ್ದೇಶಪೂರ್ವಕ ತಪ್ಪು ಮಾಹಿತಿಯನ್ನು ತಜ್ಞರು ಅತಿ ಹೆಚ್ಚು ಹಾನಿಯುಂಟು ಮಾಡುವ ಬೆದರಿಕೆಗಳಾಗಿವೆ ಎಂದು ತಜ್ಞರು ಆಯ್ಕೆ ಮಾಡಿದ್ದಾರೆ. 140 ಕೋಟಿಗೂ ಅಧಿಕ ಜನರು ಇರುವ ಭಾರತದಲ್ಲಿ 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಿಲ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಭಾರತದ 2019 ರ ಚುನಾವಣೆಯಲ್ಲಿ ಫೇಕ್‌ ಸುದ್ದಿಗಳು ವ್ಯಾಪಕವಾಗಿ ಹರಡಿಕೊಂಡಿದ್ದವು. ಪಕ್ಷಗಳ ಬೆಂಬಲಿಗರಿಗೆ ಕಿಚ್ಚು ಹೊತ್ತಿಸುವ ಸಂದೇಶಗಳನ್ನು ಹರಡಲು ಸಾಮಾಜಿಕ ಜಾಲತಾಣಗಳನ್ನು(ವಾಟ್ಸಾಪ್ ಮತ್ತು ಫೇಸ್‌ಬುಕ್) ಹೇಗೆ ತಮ್ಮ ಅಸ್ತ್ರಗಳಾಗಿ ಬಳಸಿಕೊಂಡರು ಎಂಬುದನ್ನು ವೈಸ್ ವರದಿ ಮಾಡಿದೆ. ಆನ್‌ಲೈನ್‌ನಲ್ಲಿ ಹರಡಲಾಗುವ ಸುಳ್ಳುಗಳು ನೈಜ-ಪ್ರಪಂಚದ ಹಿಂಸಾಚಾರಕ್ಕೆ ಹರಡಬಹುದು ಎಂಬ ಭಯವನ್ನು ಹೆಚ್ಚಿಸುತ್ತದೆ. ತೀರಾ ಇತ್ತೀಚೆಗೆ, ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವಾಟ್ಸಾಪ್ ಮೂಲಕವೇ ತಪ್ಪು ಮಾಹಿತಿಯು ಹರಡುವಿಕೆಯು ದೊಡ್ಡ ಸಮಸ್ಯೆಯಾಗಿತ್ತು.

ಉದ್ದೇಶ ಪೂರ್ವಕ ತಪ್ಪು ಸುದ್ದಿ ಮತ್ತು ತಪ್ಪು ತಿಳಿವಳಿಕೆ ಮಾಹಿತಿಯ ಬೆದರಿಕೆ ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮಾತ್ರವಲ್ಲದೇ, ಎಲ್ ಸಾಲ್ವಡಾರ್, ಸೌದಿ ಅರೇಬಿಯಾ, ಪಾಕಿಸ್ತಾನ, ರೊಮೇನಿಯಾ, ಐರ್ಲೆಂಡ್, ಝೆಕಿಯಾ, ಅಮೆರಿಕ, ಸಿಯೆರಾ ಲಿಯೋನ್, ಫ್ರಾನ್ಸ್ ಮತ್ತು ಫಿನ್‌ಲ್ಯಾಂಡ್ ಸೇರಿ ಹಲವು ರಾಷ್ಟ್ರಗಳಿವೆ. ಇಂಗ್ಲೆಂಡ್ ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಡೇಟಾವು ಶೈಕ್ಷಣಿಕ, ವ್ಯಾಪಾರ, ಸರ್ಕಾರ, ಅಂತರಾಷ್ಟ್ರೀಯ ಸಮುದಾಯ ಮತ್ತು ನಾಗರಿಕ ಸಮಾಜದಾದ್ಯಂತ 1,490 ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. 2023ರ ಸೆಪ್ಟೆಂಬರ್ 4ರಿಂದ ಅಕ್ಟೋಬರ್ 9ರ ನಡುವಿನ ಅಧಿಯಲ್ಲಿ ನಡೆಸಿದ ಸಮೀಕ್ಷೆಯ ಆಧರಿಸಿ ಈ ಡೇಟಾವನ್ನು ಪಡೆದುಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: WhatsApp: 71 ಲಕ್ಷ ಭಾರತೀಯ ಖಾತೆಗಳನ್ನು ಡಿಲಿಟ್ ಮಾಡಿದ ವಾಟ್ಸಾಪ್!

Exit mobile version