ನವದೆಹಲಿ: ಪಬ್ಜಿ ಆನ್‌ಲೈನ್ ಗೇಮ್ ಮೂಲಕ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿಯನ್ನು ಬಯಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ದಿಟ್ಟ ಮಹಿಳೆ ಸೀಮಾ ಹೈದರ್ ಹಾಗೂ ಆಕೆಯ ಪ್ರಿಯತಮ ಸಚಿನ್ ಸಿಂಗ್, ನಾಲ್ಕು ಮಕ್ಕಳು ಜೈಲಿನಿಂದ (PUBG Love Story) ಹೊರಬಂದಿದ್ದಾರೆ. ಹೊರಬಂದಿರುವ ಸೀಮಾ ಹೈದರ್, “ಭಾರತ ಈಗ ನನ್ನ ದೇಶ. ನಾನು ಹಿಂದುತ್ವವನ್ನು ಸ್ವೀಕರಿಸಿದ್ದೇನೆ” ಎಂದು ಹೇಳಿದ್ದಾರೆ.
ಪಾಕಿಸ್ತಾನದಿಂದ ಬಂದು ಗ್ರೇಟರ್ ನೊಯ್ಡಾದ ರಬುಪುರದಲ್ಲಿ ನೆಲೆಸಿದ್ದ ಮಹಿಳೆಯನ್ನು ಜುಲೈ 4ರಂದು ಪೊಲೀಸರು ಬಂಧಿಸಿದ್ದರು. ಮಹಿಳೆ ಜತೆಗೆ, ಆಕೆಯ ನಾಲ್ಕು ಮಕ್ಕಳು, ಸಚಿನ್ ಸಿಂಗ್ ಹಾಗೂ ಸಚಿನ್ ಸಿಂಗ್ ತಂದೆಯನ್ನು ಬಂಧಿಸಲಾಗಿತ್ತು. ಇವರಿಗೀಗ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆಯು, “ನಾನೀಗ ಭಾರತೀಯಳು, ನಾನು ಇಲ್ಲಿಯೇ ಇರುತ್ತೇನೆ. ಹಿಂದುತ್ವವನ್ನು ನಾನು ಅಳವಡಿಸಿಕೊಂಡಿದ್ದೇನೆ” ಎಂದಿದ್ದಾರೆ. ಹಾಗೆಯೇ, ನಮ್ಮ ಮದುವೆಯನ್ನು ಸರ್ಕಾರ ಮಾನ್ಯ ಮಾಡಿ, ನನಗೆ ಪೌರತ್ವ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಚಿನ್ ಸಿಂಗ್ ಮನೆಯಲ್ಲಿ ಸೀಮಾ ಹೈದರ್
सीमा हैदर के प्रेमी सचिन का घर। #greaternoida #seemahaider #paobc #NoidaNews pic.twitter.com/ZdxAmcjFA6
— Jyoti Karki (@Jyoti_karki_) July 8, 2023
27 ವರ್ಷದ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಆದರೆ, ಗಂಡನ ಕಿರುಕುಳ ತಾಳದೆ ಆಕೆ ಗಂಡನಿಂದ ಬೇರೆಯಾಗಿದ್ದಾಳೆ. ಕಳೆದ ಮಾರ್ಚ್‌ನಲ್ಲಿ ಸೀಮಾ ಹಾಗೂ ಸಚಿನ್ ನೇಪಾಳದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು ಮದುವೆಯಾಗಲು ತೀರ್ಮಾನಿಸಿದ್ದಾರೆ. ಅದರಂತೆ, ಸೀಮಾ ಹೈದರ್ ಪಾಕಿಸ್ತಾನದಿಂದ ದುಬೈಗೆ ವಿಮಾನದಲ್ಲಿ ತೆರಳಿ, ಅಲ್ಲಿಂದ ನೇಪಾಳ ರಾಜಧಾನಿ ಕಠ್ಮಂಡುಗೆ ವಿಮಾನದಲ್ಲಿ ಬಂದಿದ್ದಾಳೆ. ಕೊನೆಗೆ ನೇಪಾಳ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾಳೆ.
ಇದನ್ನೂ ಓದಿ: ಪ್ರಿಯಕರನಿಗಾಗಿ 4ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ ಮಹಿಳೆ; ಮೋದಿ ಸರ್ಕಾರದ ಸಹಾಯ ಕೇಳುತ್ತಿದ್ದಾನೆ ಪತಿ!
ಮನೆ ಮಾರಿ ಬಂದ ಮಹಿಳೆ
ಹೌದು, ಸೀಮಾ ಹೈದರ್ ಎಂಬ ಪಾಕಿಸ್ತಾನದ ಮಹಿಳೆ ಹಾಗೂ ಗ್ರೇಟರ್ ನೊಯ್ಡಾ ನಿವಾಸಿಯಾದ ಸಚಿನ್ ಸಿಂಗ್ ಅವರು ಆನ್‌ಲೈನ್‌ನಲ್ಲಿ ಪಬ್ಜಿ ಆಡುವಾಗ ಇಬ್ಬರ ಮಧ್ಯೆ ಸ್ನೇಹ ಚಿಗುರಿದೆ. ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಮಾತನಾಡಿ, ನೂರಾರು ಮೆಸೇಜ್ ಮಾಡಿದ್ದು, ಕೆಲವೇ ದಿನಗಳಲ್ಲಿ ಸ್ನೇಹ ಪ್ರೀತಿಯಾಗಿ ತಿರುಗಿದೆ. ಇಬ್ಬರ ಮಧ್ಯೆ 2020ರಲ್ಲಿ ಸ್ನೇಹವುಂಟಾಗಿದೆ. ಇದಾದ ಬಳಿಕ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದು, ಊರಲ್ಲಿದ್ದ ಮನೆಯನ್ನು 12 ಲಕ್ಷ ರೂಪಾಯಿಗೆ ಮಾರಾಟ ಮಾಡಿ, ಮಹಿಳೆ ಭಾರತಕ್ಕೆ ಬಂದಿದ್ದಾಳೆ.