ನವದೆಹಲಿ: 1960ರಲ್ಲಿ ಮಾಡಿಕೊಂಡ ಸಿಂಧೂ ನದಿ ಒಪ್ಪಂದದ ಜಾರಿಗೆ (Indus River Treaty) ಹೊಂದಾಣಿಕೆ ಮಾಡಿಕೊಳ್ಳದೆ ಉದ್ಧಟತನ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ನೋಟಿಸ್ ಜಾರಿ ಮಾಡಿದೆ. ಒಪ್ಪಂದದ ಮಾರ್ಪಾಡಿಗೆ ಒಪ್ಪದ ಕಾರಣ ಸಿಂಧೂ ನದಿ ನೀರು ಕಮಿಷನರ್ ಮೂಲಕ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ.
ಕಿಶನ್ ಗಂಗಾ ಮತ್ತು ರತಲೆ ಜಲವಿದ್ಯುತ್ ಯೋಜನೆಗಳಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಒಪ್ಪಿಗೆ ಸೂಚಿಸುತ್ತಿಲ್ಲ. ಜಲ ಒಪ್ಪಂದದಲ್ಲಿ ಮಾರ್ಪಾಡು ಮಾಡಿಕೊಳ್ಳಲು ಪಾಕಿಸ್ತಾನ ಮೊಂಡುತನ ಪ್ರದರ್ಶಿಸುತ್ತಿದೆ. ಇದರಿಂದಾಗಿ ಭಾರತವು ಕಮಿಷನರ್ ಮೂಲಕ ನೋಟಿಸ್ ಜಾರಿ ಮಾಡಿ, ಖಡಕ್ ಎಚ್ಚರಿಕೆ ನೀಡಿದೆ.
ನೋಟಿಸ್ ಅವಧಿಯು 90 ದಿನದ್ದಾಗಿರುತ್ತದೆ. 90 ದಿನಗಳೊಳಗೆ ಪಾಕಿಸ್ತಾನವು ಮಾತುಕತೆ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು. ಇದೇ ಕಾರಣಕ್ಕಾಗಿ ನೋಟಿಸ್ ನೀಡಿದೆ.
ಇದನ್ನೂ ಓದಿ: Pakistan Economy: ಅಧಃಪತನದತ್ತ ನೆರೆರಾಷ್ಟ್ರ, ಡಾಲರ್ ಎದುರು 262ಕ್ಕೆ ಕುಸಿದ ಪಾಕಿಸ್ತಾನದ ರೂಪಾಯಿ