Site icon Vistara News

ದೇಶದಲ್ಲಿ ಮತ್ತೆ ಹೆಚ್ಚಿದ ಕೊರೊನಾ: ನಿನ್ನೆಯಿಂದ ಇವತ್ತಿಗೆ 30% ಕೇಸುಗಳು ಹೆಚ್ಚಳ

Covid 19

ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಆರ್ಭಟ ಜೋರಾದಂತೆ ಕಾಣಿಸುತ್ತಿದೆ. ಗುರುವಾರದಿಂದ ಶುಕ್ರವಾರಕ್ಕೆ ಶೇ. ೩೦ರಷ್ಟು ಪ್ರಕರಣಗಳು ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಗುರುವಾರ 13,313 ಪ್ರಕರಣಗಳಿದ್ದರೆ ಶುಕ್ರವಾರದ ಹೊತ್ತಿಗೆ ಅದು ೧೭,೩೩೬ಕ್ಕೇರಿದೆ. ಒಂದೇ ದಿನ ಇಷ್ಟೊಂದು ಪ್ರಕರಣಗಳು ಹೆಚ್ಚಾಗಿರುವುದು ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲು. ಇದೇ ರೀತಿ ಪ್ರಕರಣ ಹೆಚ್ಚಾಗಬಹುದೇ ಎಂಬ ಭೀತಿ ಕಾಣಿಸಿಕೊಂಡಿದೆ.

೧7,336 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,33,44,958 ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 83,990 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ ಒಂದೇ ದಿನದಲ್ಲಿ ಸೋಂಕಿಗೆ 13 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಸೋಂಕಿನಿಂದ ದೇಶದಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 5,24,941 ಕ್ಕೆ ಏರಿಕೆಯಾಗಿದೆ.

ಇದನ್ನು ಓದಿ | ದೇಶದಲ್ಲಿ ಮತ್ತೆ ಕೊರೊನಾ ಏರಿಕೆ, ಹೊಸದಾಗಿ 13,313 ಕೊರೊನಾ ಕೇಸ್

ದೇಶದಲ್ಲಿ ಈ ಐದು ರಾಜ್ಯಗಳಲ್ಲಿ ಸೋಂಕು ಏರಿಕೆಯಾಗುತ್ತಿದ್ದು, ಮಹಾರಾಷ್ಟ್ರದಲ್ಲಿ 5,218, ಕೇರಳ, 3,890, ದೆಹಲಿ 1,934, ತಮಿಳುನಾಡು 1,063, ಹರಿಯಾಣ 872 ಕೊರೊನಾ ಪ್ರಕರಣಗಳು ಪ್ರತಿನಿತ್ಯ ದಾಖಲಾಗುತ್ತಿದೆ. ದಿನೇ ದಿನೇ ಐದು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಈ ರಾಜ್ಯಗಳಿಂದ ಬರುವ ಪ್ರಯಾಣಿಕರಿಂದ ಬೇರೆ ರಾಜ್ಯದ ಜನರಿಗೂ ಸೋಂಕು ಹರಡುವ ಭೀತಿ ಶುರುವಾಗಿದೆ.

ಹೀಗಾಗಿ ಈ 5 ರಾಜ್ಯಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿರುವುದರಿಂದ ಈ ರಾಜ್ಯಗಳಲ್ಲಿ ಲಸಿಕೆ ವಿತರಣೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಪ್ರತಿ ಜಿಲ್ಲೆಗಳಲ್ಲೂ ಬೂಸ್ಟರ್​ ಡೋಸ್​ ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.

Exit mobile version