Site icon Vistara News

ಮೋದಿ ವಿರುದ್ಧ ಆರೋಪ ಮಾಡಿದ ಮಾಲ್ಡೀವ್ಸ್‌ಗೆ ಮತ್ತೊಂದು ಪೆಟ್ಟು; ಈಸ್ ಮೈ ಟ್ರಿಪ್‌ ಬುಕ್ಕಿಂಗ್ ರದ್ದು

Ease My Trip

India-Maldives row: EaseMyTrip suspends all flight bookings to island nation over anti-PM Modi remarks

ನವದೆಹಲಿ: ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿದ್ದ ಮಾಲ್ಡೀವ್ಸ್‌ಗೆ ಈಗ ಭಾರಿ ಪೆಟ್ಟು ಬಿದ್ದಿದೆ. ಭಾರತೀಯರು ಮಾಲ್ಡೀವ್ಸ್‌ ಪ್ರವಾಸವನ್ನೇ ರದ್ದುಗೊಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ (Boycott Maldives) ಅಭಿಯಾನ ಶುರುವಾಗಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ವಿಮಾನಗಳ ಟಿಕೆಟ್‌ ಬುಕ್ಕಿಂಗ್‌ ಮಾಡುವ ಈಜಿ ಮೈ ಟ್ರಿಪ್‌ (EaseMyTrip) ಸಂಸ್ಥೆಯು ಮಾಲ್ಡೀವ್ಸ್‌ಗೆ ಹೊರಡುವ ಎಲ್ಲ ವಿಮಾನಗಳ ಬುಕ್ಕಿಂಗ್‌ ರದ್ದುಪಡಿಸಿದೆ.

ಈಸ್‌ ಮೈ ಟ್ರಿಪ್‌ ಸಹ ಸಂಸ್ಥಾಪಕರೂ ಆಗಿರುವ ಸಿಇಒ ನಿಶಾಂತ್‌ ಪಿಟ್ಟಿ ಅವರು ಬುಕ್ಕಿಂಗ್‌ ರದ್ದುಗೊಳಿಸಿರುವ ತೀರ್ಮಾನವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಭಾರತದ ಏಕತೆ ದೃಷ್ಟಿಯಿಂದ ಮಾಲ್ಡೀವ್ಸ್‌ಗೆ ತೆರಳುವ ಎಲ್ಲ ವಿಮಾನಗಳ ಬುಕ್ಕಿಂಗ್‌ಅನ್ನು ಈಸ್‌ ಮೈ ಟ್ರಿಪ್‌ ರದ್ದುಗೊಳಿಸಿದೆ. ಜಲ ಸೌಂದರ್ಯ ಹಾಗೂ ಬೀಚ್‌ಗಳ ದೃಷ್ಟಿಯಿಂದ ಲಕ್ಷದ್ವೀಪವು ಮಾಲ್ಡೀವ್ಸ್‌ಗಿಂತ ಕಡಿಮೆ ಇಲ್ಲ. ಹಾಗಾಗಿ, ಮಾಲ್ಡೀವ್ಸ್‌ಗೆ ಹೋಗುವವರಿಗೆ ಈಸ್‌ ಮೈ ಟ್ರಿಪ್‌ ವಿಶೇಷ ಆಫರ್‌ಗಳನ್ನೂ ಕೊಡಲಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಮಾಲ್ಡೀವ್ಸ್‌ ಆರೋಪಗಳೇನು?

“ಭಾರತವು ಸುಖಾಸುಮ್ಮನೆ ಮಾಲ್ಡೀವ್ಸ್‌ಅನ್ನು ಟಾರ್ಗೆ ಮಾಡುತ್ತಿದೆ. ಬೀಚ್‌ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ಗೆ ಸವಾಲೊಡ್ಡಬೇಕು ಎಂದರೆ ತುಂಬ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಮಾಲ್ಡೀವ್ಸ್‌ ಸಚಿವ ಅಬ್ದುಲ್ಲಾ ಮಹ್ಜೂಮ್‌ ಮಾಜಿದ್ ಪೋಸ್ಟ್‌ ಮಾಡಿದ್ದರು. ಮತ್ತೊಬ್ಬ ಸಹಾಯಕ ಸಚಿವೆ ಮರಿಯಮ್‌ ಶಿವುನಾ, “ಇಸ್ರೇಲ್‌ ಕೈಗೊಂಬೆಯಾಗಿರುವ ನರೇಂದ್ರ ಮೋದಿ ಅವರು ಲೈಫ್‌ ಜಾಕೆಟ್‌ ಧರಿಸಿ ಜಿಗಿಯುತ್ತಾರೆ” ಎಂದು ಉದ್ಧಟತನದ ಪೋಸ್ಟ್‌ ಮಾಡಿದ್ದರು. ಇದೇ ಕಾರಣಕ್ಕೆ ಈಗ ಮೂವರು ಸಚಿವರನ್ನು ಮಾಲ್ಡೀವ್ಸ್‌ ಅಮಾನತುಗೊಳಿಸಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಹದ್ದು ಮೀರುತ್ತಿರುವ ಮಾಲ್ಡೀವ್ಸ್ ಗೆ ಬುದ್ಧಿ ಕಲಿಸಲೇಬೇಕಿದೆ

ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದೆ ಲಕ್ಷದ್ವೀಪದಲ್ಲಿ ಈಜಾಡುವ (Snorkelling-ನೀರಿನ ಮೇಲ್ಮೈನಲ್ಲಿ ಕೃತಕ ಆಮ್ಲಜನಕದ ಮಾಸ್ಕ್‌, ಸ್ವಿಮ್ಮಿಂಗ್ ದಿರಸು ಧರಿಸಿ ಈಜಾಡುವುದು) ಮೂಲಕ ಗಮನ ಸೆಳೆದಿದ್ದರು. ಅಲ್ಲದೆ, ಸ್ವಿಮ್ಮಿಂಗ್‌ ಸೂಟ್‌ ಧರಿಸಿ, ಆಕ್ಸಿಜನ್‌ ಮಾಸ್ಕ್‌ ಧರಿಸಿಕೊಂಡು ಈಜಾಡಿದ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಯಾರು ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದೀರೋ, ನಿಮ್ಮ ಪಟ್ಟಿಯಲ್ಲಿ ಮೊದಲು ಲಕ್ಷದ್ವೀಪ ಇರಲಿ ಕೂಡ ಹೇಳಿದ್ದರು. ಇದೇ ಕಾರಣಕ್ಕೆ ಮಾಲ್ಡೀವ್ಸ್‌ ನರೇಂದ್ರ ಮೋದಿ ಅವರ ವಿರುದ್ಧ ಆರೋಪ ಮಾಡಿತ್ತು. ಆರೋಪಗಳಿಗೆ ಈಗ ದ್ವೀಪರಾಷ್ಟ್ರವು ಸರಿಯಾದ ಬೆಲೆ ತೆರುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version