Site icon Vistara News

Asle Toje: ಭಾರತ ಯಾವ ರಾಷ್ಟ್ರಕ್ಕೂ ಬೆದರಿಕೆ ಹಾಕಲ್ಲ; ನೊಬೆಲ್ ಪ್ರಶಸ್ತಿ ಸಮಿತಿ ಸದಸ್ಯ ಬಣ್ಣನೆ

India never threaten any country says Asle toje

ನವದೆಹಲಿ: ಭಾರತದ ಪ್ರವಾಸದಲ್ಲಿರುವ ನಾರ್ವೆಯನ್ ನೊಬೆಲ್ ಕಮೀಟಿಯ ಉಪ ನ್ಯಾಯಕ ಆಸ್ಲೆ ತೊಜೆ (Asle Toje) ಅವರು ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿ ನೊಬೆಲ್(Nobel Prize) ಪ್ರಶಸ್ತಿಗೆ ಅರ್ಹರು ಎಂದು ಹೇಳಿದ ಬೆನ್ನಲ್ಲೇ, ಭಾರತವು ಜೋರಾಗಿ ಮಾತನಾಡುವುದಿಲ್ಲ, ಯಾರಿಗೂ ಬೆದರಿಕೆಯನ್ನೂ ಹಾಕುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯವಾಗಿ ಭಾರತ ಅನುಸರಿಸುತ್ತಿರುವ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದರ ವಿರುದ್ಧ ರಷ್ಯಾವನ್ನು ಜ್ಞಾಪಿಸುವ ಪ್ರಯತ್ನಗಳನ್ನು ಭಾರತವು ಮಾಡುತ್ತಿದೆ. ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಜಗತ್ತಿಗೆ ಈ ರೀತಿಯ ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ ಎಂದು ತೊಜೆ ಅವರು ಹೇಳಿದ್ದಾರೆ.

ಭಾರತವು ಜೋರು ಧ್ವನಿಯಲ್ಲಿ ಮಾತನಾಡುವುದಿಲ್ಲ. ಯಾರಿಗೂ ಬೆದರಿಕೆಯನ್ನು ಹಾಕುವುದಿಲ್ಲ. ಭಾರತವು ಸ್ನೇಹಿತನ ರೀತಿಯಲ್ಲಿ ತನ್ನ ವಾದವನ್ನು ಮುಂದಿಡುತ್ತದೆ. ಈ ರೀತಿಯ ನಡೆಯು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಇನ್ನಷ್ಟು ಹೆಚ್ಚಬೇಕು ಎಂದು ತೊಜೆ ಅವರು ಹೇಳಿದರು.

ತೊಜೆ ಅವರು ವಿದೇಶಾಂಗ ನೀತಿ ವಿದ್ವಾಂಸರೂ ಆಗಿದ್ದು, ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯ ಸದಸ್ಯರೂ ಆಗಿದ್ದಾರೆ. ಅವರೀಗ ಭಾರತ ಪ್ರವಾಸದಲ್ಲಿದ್ದಾರೆ. ಈ ವೇಳೆ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಸೂಪರ್ ಪವರ್ ಆಗಲು ಉದ್ದೇಶಿಸಿದೆ. ಪ್ರಧಾನಿ ಮೋದಿ ಅವರು ಯುದ್ಧವನ್ನು ನಿಲ್ಲಿಸುವ ಅತ್ಯಂತ ವಿಶ್ವಾಸಾರ್ಹ ನಾಯಕ ಮತ್ತು ಅವರಿಂದ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದರು.

Exit mobile version