ನವ ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಶುಕ್ರವಾರ ೧೮,೮೧೫ ಪ್ರಕರಣಗಳು ವರದಿಯಾಗಿವೆ. ಇದು ಗುರುವಾರಕ್ಕಿಂತ (೧೮೯೩೦) ಸ್ವಲ್ಪ ಕಡಿಮೆಯಾಗಿದ್ದರೂ ಸಮಸ್ಯೆ ತೀವ್ರಗೊಳ್ಳುವ ಲಕ್ಷಣ ಕಾಣಿಸುತ್ತಿದೆ. ಅದರಲ್ಲೂ ಹೊಸದಾಗಿ ಪಶ್ಚಿಮ ಬಂಗಾಳದಲ್ಲಿ ಸೋಂಕಿನ ಪ್ರಮಾಣ ಏರುತ್ತಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4,35,85,554ಕ್ಕೆ ಏರಿದೆ.
ಪ್ರಸ್ತುತ ದೇಶದಲ್ಲಿ 1,22,335 ಸಕ್ರಿಯ ಪ್ರಕರಣಗಳಿದ್ದು, ಒಂದೇ ದಿನದಲ್ಲಿ ಮಹಾಮಾರಿ ಸೋಂಕಿಗೆ 38 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 5,25,343 ಕ್ಕೆ ಏರಿದೆ. ನಿನ್ನೆಗೆ ಹೋಲಿಸಿಕೊಂಡರೆ ಇಂದು 0.6% ರಷ್ಟು ಪಾಸಿಟಿವಿಟಿ ರೇಟ್ ಇಳಿಕೆ ಕಂಡಿದೆ.
ಇದನ್ನು ಓದಿ| ದೇಶದಲ್ಲಿ ಮತ್ತೆ ಏರಿದ ಕೊರೊನಾ: 24 ಗಂಟೆಯಲ್ಲಿ 18,930 ಮಂದಿಗೆ ಪಾಸಿಟಿವ್, ಸಾವು ಕೂಡಾ ಹೆಚ್ಚಳ
ದೇಶದಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಟಾಪ್ 5 ರಾಜ್ಯಗಳೆಂದರೆ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ ಮತ್ತು ಕೇರಳ. ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ (2,889), ತಮಿಳುನಾಡು (2,765), ಮತ್ತು ಮಹಾರಾಷ್ಟ್ರದಲ್ಲಿ (2,678) ಕಳೆದ 24 ಗಂಟೆಯಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಐದು ರಾಜ್ಯಗಳಲ್ಲೇ 69.34% ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದ್ದು, ಅದರಲ್ಲೂ ಕೇರಳ ಒಂದರಲ್ಲೇ 19.46% ರಷ್ಟು ಹೊಸ ಕೇಸ್ಗಳು ದಾಖಲಾಗಿವೆ.
ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹೊತ್ತಿನಲ್ಲೇ, ಗುಣಮುಖರಾಗುತ್ತಿರುವ ಸಂಖ್ಯೆಯೂ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ 15,899 ಮಂದಿ ಕೊರೊನಾ ರೋಗಿಗಳು ಸೋಂಕಿನಿಂದ ಚೇತರಿಕೆಗೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟಾರೆ 98.51% ಮಂದಿ ಗುಣಮುಖರಾಗಿದ್ದಾರೆ. ಇನ್ನು ಒಂದೇ ದಿನದಲ್ಲಿ 17,62,441 ಕೊರೊನಾ ಡೋಸ್ಗಳ ವಿತರಣೆ ಮಾಡಲಾಗಿದೆ. ಒಟ್ಟಾರೆ ಈವರೆಗೂ 1,98,51,77,962 ಕೊರೊನಾ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನು ಓದಿ| ಮತ್ತೆ ಏರಿಕೆ ಕಂಡ ಕೊರೊನಾ: 24 ಗಂಟೆಯಲ್ಲಿ 16,159 ಪಾಸಿಟಿವ್, ಐದು ರಾಜ್ಯದಲ್ಲಿ 70% ಕೇಸ್