ನವ ದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗಿದೆ. ಬುಧವಾರ (ಜು.6) 16,159 ಕೊರೊನಾ ಪ್ರಕರಣಗಳು ದಾಖಲಾಗಿದ್ದರೆ, ಗುರುವಾರದ ಹೊತ್ತಿಗೆ ಅದು 18,930ಕ್ಕೆ ಏರಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4.35 ಕೋಟಿಗೇರಿದೆ.
ಪ್ರಸ್ತುತ ದೇಶದಲ್ಲಿ 1,19,457 ಸಕ್ರಿಯ ಪ್ರಕರಣಗಳಿದ್ದು, ಒಂದೇ ದಿನದಲ್ಲಿ ಮಹಾಮಾರಿ ಸೋಂಕಿಗೆ 35 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 5,25,305ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನು ಓದಿ | ಮತ್ತೆ ಏರಿಕೆ ಕಂಡ ಕೊರೊನಾ: 24 ಗಂಟೆಯಲ್ಲಿ 16,159 ಪಾಸಿಟಿವ್, ಐದು ರಾಜ್ಯದಲ್ಲಿ 70% ಕೇಸ್
ದೇಶದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಕೂಡ ಹೆಚ್ಚಿಸಲಾಗುತ್ತಿದೆ. ಬುಧವಾರ ಒಂದೇ ದಿನ 4,38,005 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಜತೆಗೆ ಒಂದೇ ದಿನದಲ್ಲಿ 14,650 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಈವರೆಗೂ 4,29,21, 977 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಕೊರೊನಾ ಲಸಿಕೆ ಹಾಕುವ ಪ್ರಕ್ರಿಯೆಯ ವೇಗವನ್ನು ಕೂಡ ಹೆಚ್ಚಿಸಿದ್ದು, ಈವರೆಗೂ 1.98,33,18,772 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ನಾಲ್ಕನೇ ಅಲೆ ಸಾಧ್ಯತೆ ಮತ್ತು ಹೊಸ ವೇರಿಯೆಂಟ್‌ಗಳ ಪ್ರವೇಶ ಮುನ್ಸೂಚನೆ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಗೆ ವೇಗ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಎರಡನೇ ಡೋಸ್ ಪಡೆದವರು ಬೂಸ್ಟರ್ ಡೋಸ್ ಪಡೆಯಲು ಇದ್ದ ಮಧ್ಯಂತರ ಅವಧಿಯನ್ನು ೯ ತಿಂಗಳಿನಿಂದ ಆರು ತಿಂಗಳಿಗೆ ಇಳಿಸಿದೆ.
ಇದನ್ನು ಓದಿ| ಇಳಿಕೆ ಗತಿಯಲ್ಲಿ ಕೊರೊನಾ ಸೋಂಕು, ಕಳೆದ 24 ಗಂಟೆಯಲ್ಲಿ 13,086 ಮಂದಿಗೆ ಪಾಸಿಟಿವ್