Site icon Vistara News

Covid-19 Cases: ಒಂದೇ ದಿನದಲ್ಲಿ 500 ಕೋವಿಡ್ ಕೇಸ್, ಸೋಂಕಿತರ ಸಂಖ್ಯೆ 5,915ಕ್ಕೆ ಏರಿಕೆ

India logs over 1,800 new Covid-19 cases

ನವದೆಹಲಿ: ಭಾರತದಲ್ಲಿ ಒಂದೇ ದಿನ 500ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಿನ್ನೆಯಿಂದ(ಶನಿವಾರ) ಒಟ್ಟಾರೆ 526 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 5,915ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ(Covid-19 Cases:).

ಶನಿವಾರ ಒಂದೇ ದಿನದ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಜಿಗಿತ ಕಂಡುಬಂದಿದೆ. ಒಟ್ಟಾರೆ 843 ಹೊಸ ಸೋಂಕುಗಳು ವರದಿಯಾಗಿವೆ. ಇದು ಕಳೆದ 126 ದಿನಗಳ ನಂತರ ಅತಿ ಹೆಚ್ಚು ಕೇಸ್‌ ದಾಖಲಾದಂತಾಗಿದೆ. ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿಗೆ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಆದರೆ, ಇಂದು ಯಾರೂ ಸೋಂಕಿ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತ ಸಕ್ರಿಯರಿದ್ದಾರೆ. ಈ ರಾಜ್ಯದಲ್ಲಿ ಒಟ್ಟು 103 ಜನರು ಸಕ್ರಿಯ ಕೋವಿಡ್ ಸೋಂಕಿತರಿದ್ದಾರೆ. ಸಿಕ್ಕಿಮ್ ಮತ್ತು ಲಡಾ‌ಖ್‌ನಲ್ಲಿ ತಲಾ ಒಂದೊಂದು ಕೋವಿಡ್ ಸಕ್ರಿಯ ರೋಗಿಗಳಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಲತಾಣದಲ್ಲಿರುವ ಮಾಹಿತಿಯ ಪ್ರಕಾರ, ಈವರೆಗೆ 220.05 ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಈ ಮೂಲಕ ಕೋವಿಡ್ ಸೋಂಕು ತಡೆಯುದಂತೆ ನೋಡಿಕೊಳ್ಳಲಾಗಿದೆ.

Exit mobile version