ಮುಂಬಯಿ: ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್ (stock exchange) ಬಿಎಸ್‌ಇಯಲ್ಲಿ (BSE) ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಮಾಪನವು (Equity Market) ಬುಧವಾರ ಮೊದಲ ಬಾರಿಗೆ 4 ಟ್ರಿಲಿಯನ್ ಅಮೆರಿಕನ್ ಡಾಲರ್ (3.33 ಕೋಟಿ ಕೋಟಿ ರೂ.) ಮೈಲಿಗಲ್ಲನ್ನು ತಲುಪಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ದಿನದ ಆರಂಭಿಕ ವಹಿವಾಟಿನಲ್ಲಿ ಸಕಾರಾತ್ಮಕವಾಗಿದ್ದು, 305.44 ಪಾಯಿಂಟ್‌ಗಳ ಏರಿಕೆ ಕಂಡು 66,479.64ಕ್ಕೆ ತಲುಪಿದೆ. ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ (Equity Market) ಆಶಾವಾದ ಹಬ್ಬಿದ್ದು, ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಬೆಳಗಿನ ವಹಿವಾಟಿನಲ್ಲಿ ₹3,33,26,881.49 ಕೋಟಿಗಳನ್ನು ತಲುಪಿತು. ಡಾಲರ್‌ಗೆ 83.31 ರೂ. ವಿನಿಮಯ ದರದಲ್ಲಿ ಅದು USD 4 ಟ್ರಿಲಿಯನ್ ಆಗುತ್ತದೆ.
ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಈ ವರ್ಷ ಇಲ್ಲಿಯವರೆಗೆ 5,540.52 ಪಾಯಿಂಟ್‌ಗಳು ಅಥವಾ ಶೇಕಡಾ 9.10ರಷ್ಟು ಏರಿಕೆ ಕಂಡಿದ್ದರೆ, ಅದರ ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ಸುಮಾರು ₹ 50.81 ಲಕ್ಷ ಕೋಟಿಗಳಷ್ಟು ಜಿಗಿದಿದೆ. ಈ ವರ್ಷದ ಸೆಪ್ಟೆಂಬರ್ 15ರಂದು 30-ಷೇರ್ ಬೆಂಚ್‌ಮಾರ್ಕ್ ತನ್ನ ಸಾರ್ವಕಾಲಿಕ ಗರಿಷ್ಠ 67,927.23 ಅನ್ನು ತಲುಪಿತು.
USD 4 ಟ್ರಿಲಿಯನ್‌ಗಿಂತ ಹೆಚ್ಚು ಮೌಲ್ಯದ ಇತರ ಮಾರುಕಟ್ಟೆಗಳಲ್ಲಿ US, ಚೀನಾ, ಜಪಾನ್ ಮತ್ತು ಹಾಂಗ್ ಕಾಂಗ್ ಸೇರಿವೆ. ಮೇ 24, 2021ರಂದು, BSE ಯಲ್ಲಿ ಎಲ್ಲಾ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು USD 3-ಟ್ರಿಲಿಯನ್ ಮಾರ್ಕ್ ಅನ್ನು ಮುಟ್ಟಿತು.
ಮೇ 28, 2007ರಂದು ಪಟ್ಟಿಮಾಡಿದ ಸಂಸ್ಥೆಗಳ ಮೌಲ್ಯಮಾಪನವು USD 1-ಟ್ರಿಲಿಯನ್ ಮಟ್ಟವನ್ನು ದಾಟಿತ್ತು. USD 1 ಟ್ರಿಲಿಯನ್‌ನಿಂದ USD 1.5 ಟ್ರಿಲಿಯನ್‌ವರೆಗಿನ ಪ್ರಯಾಣ ಜೂನ್ 6, 2014ರಂದು ತುದಿ ಮುಟ್ಟಿದೆ. ಇದು ಏಳು ವರ್ಷಗಳಲ್ಲಿ. ಜುಲೈ 10, 2017ರಂದು ಪಟ್ಟಿ ಮಾಡಲಾದ ಕಂಪನಿಗಳ m-ಕ್ಯಾಪ್ USD 2 ಟ್ರಿಲಿಯನ್ ತಲುಪಿತು. 1.5 ಟ್ರಿಲಿಯನ್ ಮಟ್ಟದಿಂದ 1,130 ದಿನಗಳನ್ನು ತೆಗೆದುಕೊಂಡಿತು. ಅಲ್ಲಿಂದ, ಡಿಸೆಂಬರ್ 16, 2020ರಂದು USD 2.5 ಟ್ರಿಲಿಯನ್ ಮಾರ್ಕ್ ಅನ್ನು ದಾಟಲು 1,255 ದಿನಗಳನ್ನು ತೆಗೆದುಕೊಂಡಿತು.
ಇದನ್ನೂ ಓದಿ: Equity Funds : ಅಗ್ರೆಸ್ಸಿವ್ ಹೂಡಿಕೆದಾರರಿಗೆ ಹೆಚ್ಚು ಲಾಭ ನೀಡುವ ಈಕ್ವಿಟಿ ಫಂಡ್ಸ್