Site icon Vistara News

Plane Crash: ಅಫಘಾನಿಸ್ತಾನದಲ್ಲಿ ಪತನಗೊಂಡ ವಿಮಾನ ಭಾರತದಲ್ಲ; ಕೇಂದ್ರ ಸ್ಪಷ್ಟನೆ

Plane Crash

Indian Plane Enroute To Moscow Crashes In Afghanistan's Badakhshan

ಕಾಬೂಲ್: ರಷ್ಯಾಗೆ ಹೊರಟಿದ್ದ ವಿಮಾನವೊಂದು ಅಫಘಾನಿಸ್ತಾನದಲ್ಲಿ (Plane Crash) ಪತನಗೊಂಡಿದೆ. ಅಫಘಾನಿಸ್ತಾನದ (Afghanistan) ಬಡಕ್ಷನ್‌ ಪ್ರದೇಶದ ವಾಖನ್‌ ಎಂಬಲ್ಲಿ ವಿಮಾನ ಪತನವಾಗಿದೆ. ವಿಮಾನ ಪತನಗೊಂಡಿರುವುದನ್ನು ಅಫಘಾನಿಸ್ತಾನದ ತಾಲಿಬಾನ್‌ (Taliban) ಆಡಳಿತವು ಸ್ಪಷ್ಟಪಡಿಸಿದೆ. ತೋಪ್‌ಖನೇಹ್‌ ಬೆಟ್ಟಗಳ ಪ್ರದೇಶದಲ್ಲಿ ವಿಮಾನ ಪತನವಾಗಿದೆ. ಇದುವರೆಗೆ ಸಾವು-ನೋವಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ, ಪತನಗೊಂಡಿರುವುದು ಭಾರತದ ವಿಮಾನವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಸ್ಪಷ್ಟಪಡಿಸಿದೆ.

ಅಫಘಾನಿಸ್ತಾನದಲ್ಲಿ ಪತಗೊಂಡಿರುವ ವಿಮಾನವು ಭಾರತದಲ್ಲ. ಅದು ಭಾರತದಲ್ಲ ಹಾಗೂ ಭಾರತದಲ್ಲಿ ನೋಂದಣಿಯಾದ ವಿಮಾನವಲ್ಲ. ಅದು ಮೊರಾಕ್ಕೋದಲ್ಲಿ ನೋಂದಣಿಯಾದ ಸಣ್ಣ ವಿಮಾನವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಮಾಹಿತಿ ನೀಡಿದೆ. ಅಲ್ಲದೆ, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಕೂಡ ಸ್ಪಷ್ಟಪಡಿಸಿದೆ.

ಖಾಸಗಿ ವಿಮಾನವು ಉಜ್ಬೇಕಿಸ್ತಾನದ ಮೂಲಕ ರಷ್ಯಾದ ಮಾಸ್ಕೋಗೆ ತೆರಳುತ್ತಿತ್ತು. ಶನಿವಾರ (ಜನವರಿ 20) ರಾತ್ರಿಯೇ ವಿಮಾನವು ರಡಾರ್‌ನಿಂದ ಸಂಪರ್ಕ ಕಳೆದುಕೊಂಡಿತ್ತು. ಇದಾದ ಬಳಿಕ ಅಫಘಾನಿಸ್ತಾನದಲ್ಲಿ ವಿಮಾನ ಪತನವಾಗಿದೆ ಎಂದು ರಷ್ಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫ್ರಾನ್ಸ್‌ ಕಂಪನಿ ತಯಾರಿಸಿದ ಡಸಾಲ್ಟ್‌ ಫ್ಯಾಲ್ಕನ್‌ 10 ಎಂಬ ಖಾಸಗಿ ವಿಮಾನ ಇದಾಗಿದ್ದು, ಇದರೊಳಗೆ ಆರು ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Aircraft Crash: ತೆಲಂಗಾಣದಲ್ಲಿ ವಾಯುಪಡೆ ವಿಮಾನ ಪತನ, ಇಬ್ಬರು ಪೈಲಟ್‌ಗಳ ಸಾವು

ಶನಿವಾರ ರಾತ್ರಿಯೇ ವಿಮಾನ ಪತನಗೊಂಡಿದೆ ಎಂದು ಅಫಘಾನಿಸ್ತಾನದ ತಾಲಿಬಾನ್‌ ಆಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ಪತನದ ತೀವ್ರತೆಗೆ ಅದರಲ್ಲಿದ್ದ ಎಲ್ಲರೂ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಯು ಇನ್ನಷ್ಟೇ ಲಭ್ಯವಾಗಬೇಕಿದೆ.

Exit mobile version