Site icon Vistara News

G20 Summit | ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಹಸ್ತಾಂತರ, ಎಲ್ಲಿ ನಡೆಯಲಿದೆ ಶೃಂಗ?

G20 Presidency @ India

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಜಿ20 ಶೃಂಗ (G20 Summit) ಬುಧವಾರ ಮುಕ್ತಾಯಗೊಂಡಿದ್ದು, ಜಿ20 ಅಧ್ಯಕ್ಷೀಯ ಸ್ಥಾನವನ್ನು ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಾಂತರಿಸಿದರು. ವಿಶ್ವ ನಾಯಕರು ಈ ಎರಡು ಕಾಲ ದಿನಗಳ ಕಲೆತು, ಜಾಗತಿಕ ವಿಷಯಗಳ ಬಗ್ಗೆ ಮಂಥನ ನಡೆಸಿದರು. 2023ರ ಜಿ20 ಶೃಂಗವು ದಿಲ್ಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ.

ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ, ಜಿ20 ಗ್ರೂಪಿನ ಪ್ರಮುಖ ಆರ್ಥಿಕ ರಾಷ್ಟ್ರಗಳು ಜಂಟಿ ಘೋಷಣೆಯನ್ನು ಹೊರಡಿಸಿವೆ ಎಂದು ಹೇಳಿದರು. ಬಳಿಕ ಅವರು 2023ರ ಜಿ20 ಶೃಂಗ ಆತಿಥ್ಯವನ್ನು ವಹಿಸಿರುವ ಭಾರತಕ್ಕೆ, ಜಿ20 ಅಧ್ಯಕ್ಷೀಯ ಸ್ಥಾನ ಕೈಸುತ್ತಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು. ಇದರೊಂದಿಗೆ ಭಾರತವು ಅಧಿಕೃತವಾಗಿ ಆತಿಥ್ಯ ರಾಷ್ಟ್ರದ ಸ್ಥಾನವನ್ನು ಪಡೆದುಕೊಂಡಂತಾಗಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲ ಭಾರತೀಯರಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದೆ. ಎಲ್ಲ ದೇಶಗಳೊಂದಿಗೆ ಒಂದುಗೂಡಿ ಪ್ರಯತ್ನಗಳ ಮೂಲಕ ನಾವು ಜಿ20 ಶೃಂಗವನ್ನು ಜಗದೋದ್ಧಾರಕ ಪರಿವರ್ತಕವಾಗಿ ಬದಲಿಸಬಹುದು ಎಂದು ಹೇಳಿದರು.

ಇದನ್ನೂ ಓದಿ | Biden Salutes Modi | ಜಿ20 ಸಭೆ ವೇಳೆ ಮೋದಿಗೆ ಅಮೆರಿಕ ಅಧ್ಯಕ್ಷ ಬೈಡೆನ್‌ ಸೆಲ್ಯೂಟ್‌, ಫೋಟೊ ವೈರಲ್

Exit mobile version