Site icon Vistara News

Inflation: ಶೇಕಡ 0.27ಕ್ಕೆ ಇಳಿದ ಹಣದುಬ್ಬರ ಸೂಚ್ಯಂಕ

inflation

ಹೊಸದಿಲ್ಲಿ: ಸಗಟು ಬೆಲೆ ಸೂಚ್ಯಂಕ (wholesale price index – WPI – ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು (Inflation) ಜನವರಿಯಲ್ಲಿ ಶೇಕಡಾ 0.27ಕ್ಕೆ ಇಳಿದಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಇಳಿಕೆಯಿಂದಾಗಿ ಹಣದುಬ್ಬರ ಇಳಿದಿದೆ.

2023ರ ಡಿಸೆಂಬರ್‌ನಲ್ಲಿ ಈ ಹಣದುಬ್ಬರವು ಶೇಕಡಾ 0.73ರಷ್ಟಿತ್ತು. WPI ಹಣದುಬ್ಬರವು ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಋಣಾತ್ಮಕವಾಗಿತ್ತು. ನವೆಂಬರ್‌ನಲ್ಲಿ 0.39 ಶೇಕಡಾಕ್ಕೆ ಧನಾತ್ಮಕವಾಗಿದೆ.

“ಅಖಿಲ ಭಾರತ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಸಂಖ್ಯೆಯನ್ನು ಆಧರಿಸಿದ ವಾರ್ಷಿಕ ಹಣದುಬ್ಬರ ದರವು ಜನವರಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ತಿಂಗಳಿಗೆ ಶೇಕಡಾ 0.27 ಆಗಿದೆ” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಆಹಾರ ಹಣದುಬ್ಬರವು ಡಿಸೆಂಬರ್ 2023ರಲ್ಲಿ 9.38 ಶೇಕಡಾ ಇದ್ದು, ಜನವರಿಯಲ್ಲಿ 6.85 ಶೇಕಡಾಕ್ಕೆ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ.

ತರಕಾರಿಗಳ ಹಣದುಬ್ಬರವು ಜನವರಿಯಲ್ಲಿ ಶೇಕಡಾ 19.71ರಷ್ಟಿದ್ದು, ಹಿಂದಿನ ತಿಂಗಳಲ್ಲಿ ಶೇಕಡಾ 26.3 ರಷ್ಟಿತ್ತು. ಜನವರಿಯಲ್ಲಿ ಬೇಳೆಕಾಳುಗಳಲ್ಲಿನ ಡಬ್ಲ್ಯುಪಿಐ ಹಣದುಬ್ಬರವು ಶೇಕಡಾ 16.06ರಷ್ಟಿದ್ದರೆ, ಹಣ್ಣುಗಳಲ್ಲಿ ಇದು ಶೇಕಡಾ 1.01ರಷ್ಟಿತ್ತು.

ಭಾರತದ ಚಿಲ್ಲರೆ ಹಣದುಬ್ಬರವು ನಿಧಾನವಾದ ಆಹಾರ ಬೆಲೆ ಏರಿಕೆ ಮತ್ತು ಅನುಕೂಲಕರ ಪರಿಣಾಮಗಳಿಂದಾಗಿ ಜನವರಿಯಲ್ಲಿ 5.1 ಶೇಕಡಾಕ್ಕೆ ಕಡಿಮೆಯಾಗಿದೆ. ಏತನ್ಮಧ್ಯೆ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಭಾರತದ ಕೈಗಾರಿಕಾ ಉತ್ಪಾದನೆಯು ಡಿಸೆಂಬರ್ 2023ರಲ್ಲಿ ಪ್ರತ್ಯೇಕವಾಗಿ ಬಿಡುಗಡೆಯಾದ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ ಶೇಕಡಾ 3.8 ರಷ್ಟು ಬೆಳೆದಿದೆ. ನವೆಂಬರ್ 2023ರಲ್ಲಿ 6.4ರಷ್ಟು ಬೆಳೆದಿದೆ.

ಭಾರತದ CPI ಹಣದುಬ್ಬರವು ಜನವರಿ 2023ರಲ್ಲಿ 6.52 ಶೇಕಡಾ ಮತ್ತು ಡಿಸೆಂಬರ್ 2023ರಲ್ಲಿ ಶೇಕಡಾ 5.69ರಷ್ಟಿತ್ತು. ಆಗಸ್ಟ್ 2023ರಲ್ಲಿ, ಹಣದುಬ್ಬರ ಶೇಕಡಾ 6.83 ಕ್ಕೆ ತಲುಪಿತ್ತು.

ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರದ ಬುಟ್ಟಿಯಲ್ಲಿನ ಚಿಲ್ಲರೆ ಹಣದುಬ್ಬರವು ಜನವರಿ 2024 ರಲ್ಲಿ 8.3 ಪ್ರತಿಶತದಷ್ಟಿತ್ತು, ಹಿಂದಿನ ತಿಂಗಳಿನಲ್ಲಿ ಶೇಕಡಾ 9.53 ರಿಂದ ಕಡಿಮೆಯಾಗಿದೆ.

ಇದನ್ನೂ ಓದಿ: Retail Inflation: 4 ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ! ಡಿಸೆಂಬರ್ ತಿಂಗಳಲ್ಲಿ ಶೇ.5.9ಕ್ಕೆ ಏರಿಕೆ

Exit mobile version