ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ (Covid Cases) ಮಧ್ಯೆ ಯಾವುದೇ ಇನ್‌ಫ್ಲುಯೆಂಜಾ (Influenza-Like Illness) ತರಹದ ಅನಾರೋಗ್ಯದ ಬಗ್ಗೆ ನಿಗಾ ವಹಿಸಲು ಮತ್ತು ವರದಿ ಮಾಡಲು ಕೇಂದ್ರ ಸರ್ಕಾರವು (Central Governemt) ಸೋಮವಾರ ರಾಜ್ಯಗಳಿಗೆ ಸಲಹೆಯನ್ನು (Advisory To states) ನೀಡಿದೆ. ಇದರಲ್ಲಿ ಕೊರೋನಾದ ಉಪತಳಿ ಜೆನ್.1 ಕೂಡ ಸೇರಿದೆ(JN.1 Subvariant).
ಕೋವಿಡ್ -19 ವೈರಸ್ ಪ್ರಸರಣ ಹೆಚ್ಚುತ್ತಿರುವುದರಿಂದ ಮತ್ತು ಅದರ ಸಾಂಕ್ರಾಮಿಕ ರೋಗಶಾಸ್ತ್ರದ ನಡವಳಿಕೆಯು ಭಾರತೀಯ ಹವಾಮಾನ ಪರಿಸ್ಥಿತಿಗಳು ಮತ್ತು ಇತರ ಸಾಮಾನ್ಯ ರೋಗಕಾರಕಗಳ ಪ್ರಸರಣದಲ್ಲಿ ನೆಲೆಗೊಂಡಿರುವುದರಿಂದ, ಕೋವಿಡ್ ಪರಿಸ್ಥಿತಿಯ ಮೇಲೆ ನಿರಂತರ ಜಾಗರೂಕತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ಭಾರತದಲ್ಲಿ ಕೋವಿಡ್ ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಸದ್ಯಕ್ಕೆ 1,828 ಪ್ರಕರಣಗಳಿದ್ದು, ಇತ್ತೀಚೆಗೆ ಕೊರೋನಾದ ಉಪತಳಿ ಜೆನ್.1 ಪತ್ತೆಯಾಗಿರುವ ಕೇರಳದಲ್ಲಿ ಒಂದು ಸಾವು ಕೂಡ ದಾಖಲಾಗಿದೆ. ಮುಂಬರುವ ಹಬ್ಬದ ಋತುವನ್ನು ಉಲ್ಲೇಖಿಸಿರುವ ಕೇಂದ್ರ ಸರ್ಕಾರವು, ಉಸಿರಾಟದ ನೈರ್ಮಲ್ಯವನ್ನು ಅನುಸರಿಸುವ ಮೂಲಕ ರೋಗಗಳ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಲು ಅಗತ್ಯವಿರುವ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಇತರ ವ್ಯವಸ್ಥೆಗಳನ್ನು ಕೈಗೊಳ್ಳುವ ಅಗತ್ಯ ಎಂದು ಹೇಳಿದೆ.
ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ನಿಯಮಿತವಾಗಿ ಜಿಲ್ಲಾವಾರು ಇನ್‌ಫ್ಲುಯೆಂಜಾ ತರಹದ ಅನಾರೋಗ್ಯ ಮತ್ತು ತೀವ್ರತರವಾದ ಉಸಿರಾಟದ ಕಾಯಿಲೆ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಮಾಡಲು ರಾಜ್ಯಗಳಿಗೆ ಸೂಚಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Nobel Prize 2023: ಕೋವಿಡ್ ಲಸಿಕೆ ಅಭಿವೃದ್ಧಿಗೆ ಕಾರಣರಾದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್!
ಉಸಿರಾಟದ ಕಾಯಿಲೆಗಳ ಉಲ್ಬಣ ಮತ್ತು ಹೊಸ ಜೆನ್.1 ಕೋವಿಡ್ ಹಿನ್ನೆಲೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ವೈರಸ್ ವಿಕಸನಗೊಳ್ಳುತ್ತಿದೆ ಮತ್ತು ಬದಲಾಗುತ್ತಿದೆ. ಇದಕ್ಕೆ ಬಲವಾದ ಕಣ್ಗಾವಲು ಮತ್ತು ಅನುಕ್ರಮ ಹಂಚಿಕೆಯನ್ನು ಮುಂದುವರಿಸಲು ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಸಂಖ್ಯೆಯ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಬೇಕು. ಜೀನೋಮ್ ಅನುಕ್ರಮಕ್ಕಾಗಿ ಪಾಸಿಟಿವ್ ಮಾದರಿಗಳನ್ನು ಭಾರತೀಯ ಸಾರ್ಸ್ ಕೋವ್-2 ಜೀನೋಮಿಕ್ಸ್ ಕನ್ಸೋರ್ಟಿಯಮ್ (INSACOG) ಪ್ರಯೋಗಾಲಯಗಳಿಗೆ ಕಳುಹಿಸಬೇಕು. ಇದರಿಂದಾಗಿ ದೇಶದಲ್ಲಿ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದರು.
ಈ ಸುದ್ದಿಗೆ ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ ತಿಳಿಸಿ.