ನವದೆಹಲಿ: ಪಾಕಿಸ್ತಾನದ (Pakistan) ಮೇಲೆ ಇರಾನ್‌ನ (Iran attack) ಕ್ಷಿಪಣಿ ದಾಳಿಯು ಆ ಎರಡು ರಾಷ್ಟ್ರಗಳಿಗೆ ಮಾತ್ರ ಸಂಬಂಧಿಸಿದ ವಿಷಯವಾಗಿದೆ ಎಂದು ಭಾರತ (India) ಇಂದು ಹೇಳಿದೆ. ಆದಾಗ್ಯೂ, “ದೇಶಗಳು ತಮ್ಮ ಸ್ವರಕ್ಷಣೆಗಾಗಿ (Self Defence) ತೆಗೆದುಕೊಳ್ಳುವ ಕ್ರಮಗಳನ್ನು” ಭಾರತವು ಅರ್ಥ ಮಾಡಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಭಾರತೀಯ ವಿದೇಶಾಂಗ ಸಚಿವಾಲಯವು ಇರಾನ್ ನಿಲುವಿಗೆ ಬೆಂಬಲ ನೀಡಿದಂತಾಗಿದೆ(India Supports Iran).
ದಾಳಿಯು ಇರಾನ್ ಮತ್ತು ಪಾಕಿಸ್ತಾನದ ನಡುವಿನ ವಿಷಯವಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ, ನಾವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ. ದೇಶಗಳು ತಮ್ಮ ಸ್ವರಕ್ಷಣೆಗಾಗಿ ತೆಗೆದುಕೊಳ್ಳುವ ಕ್ರಮಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
Our response to media queries regarding Iran's air strikes in Pakistan:https://t.co/45NAxXTpkG pic.twitter.com/1P4Csj5Ftb
— Randhir Jaiswal (@MEAIndia) January 17, 2024
ನಿನ್ನೆ ಪಾಕಿಸ್ತಾನದ ಬಲೂಚಿ ಉಗ್ರಗಾಮಿ ಸಂಘಟನೆ ಜೈಶ್ ಅಲ್ ಅದ್ಲ್‌ನ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಈ ಉಗ್ರರ ಗುಂಪು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರಾನ್ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಎರಡು ಮಕ್ಕಳು ಮೃತಪಟ್ಟಿವೆ. ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ ಮತ್ತು ಈ ಘಟನೆಯು “ಗಂಭೀರ ಪರಿಣಾಮಗಳನ್ನು” ಉಂಟುಮಾಡಬಹುದು ಮತ್ತು “ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಎಚ್ಚರಿಕೆಯನ್ನು ನೀಡಿದೆ.
ಇರಾನ್‌ನಿಂದ ತನ್ನ ರಾಯಭಾರಿ ವಾಪಸ್ ಕರೆಯಿಸಿಕೊಂಡ ಪಾಕಿಸ್ತಾನ
ಇರಾನ್ ಪಾಕಿಸ್ತಾನದ (Iran-Pakistan) ಗಡಿಯಲ್ಲಿ ಕ್ಷಿಪಣಿ ದಾಳಿ (Iran Attack) ನಡೆಸಿದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಘರ್ಷ ಉಲ್ಪಣಗೊಂಡಿದೆ(Diplomatic Crisis). ಪಾಕಿಸ್ತಾನವು ಇರಾನ್ ರಾಷ್ಟ್ರದ ಪ್ರತಿನಿಧಿಯನ್ನು ದೇಶದಿಂದ ಹೊರ ಹಾಕಿದ ಬೆನ್ನಲ್ಲೇ, ಇರಾನ್‌ನಿಂದ ತನ್ನ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಂಡಿದೆ(Ambassador Recalls).
ಪಾಕಿಸ್ತಾನವು ತನ್ನ ರಾಯಭಾರಿಯನ್ನು ಇರಾನ್‌ನಿಂದ ವಾಪಸ್ ಕರೆಯಿಸಿಕೊಂಡಿರುವ ಮಾಹಿತಿಯನ್ನು ವಿದೇಶಾಂಗ ಸಚಿವಾಲಯವು ಖಚಿತಪಡಿಸಿದೆ. ಅಲ್ಲದೇ, ಪಾಕಿಸ್ತಾನದಿಂದ ಹೊರಗೆ ಹಾಕಲಾಗಿರುವ ಇರಾನ್ ರಾಯಭಾರಿ ಸದ್ಯಕ್ಕೆ ಪಾಕಿಸ್ತಾನಕ್ಕೆ ಹಿಂದಿರುಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನವು ಇರಾನ್‌ನಿಂದ ತನ್ನ ರಾಯಭಾರಿಯನ್ನು ಹಿಂಪಡೆಯಲು ನಿರ್ಧರಿಸಿದೆ ಮತ್ತು ಪ್ರಸ್ತುತ ಇರಾನ್‌ಗೆ ಹೋಗುತ್ತಿರುವ ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿ ಸದ್ಯಕ್ಕೆ ಹಿಂತಿರುಗುವುದಿಲ್ಲ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ. ಇರಾನ್ ಜೈಶ್ ಅಲ್-ಅದ್ಲ್ ಭಯೋತ್ಪಾದಕ ಗುಂಪನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಯನ್ನು ಪಾಕಿಸ್ತಾನ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಇರಾನ್ ಮತ್ತು ಪಾಕಿಸ್ತಾನವು ಸುಮಾರು ಸಾವಿರ ಕಿ.ಮೀ ಗಡಿಯನ್ನು ಹಂಚಿಕೊಳ್ಳುತ್ತವೆ. ಈ ಗಡಿಯಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
ಬಲೂಚಿಸ್ತಾನದ ಪಂಜ್‌ಗುರ್ ಪ್ರದೇಶದಲ್ಲಿ ಇರಾನ್ ನಡೆಸಿದ ದಾಳಿಯನ್ನು ಪಾಕಿಸ್ತಾನವು ತನ್ನ ವಾಯು ಪ್ರದೇಶ ಉಲ್ಲಂಘನೆ ಮತ್ತು ಪ್ರಚೋದನೆ ಇಲ್ಲದ ನಡೆಸಿದ ದಾಳಿಯಾಗಿದೆ. ಈ ಸಂಪೂರ್ಣ ಅಸ್ವೀಕಾರಾರ್ಹ ಘಟನೆಯಾಗಿದೆ. ಇದರಿಂದಾಗಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ಇರಾನ್ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಈ ದಾಳಿಗೆ ಪ್ರತಿಕ್ರಿಯಿಸುವ ಹಕ್ಕು ತನಗಿದೆ ಎಂದು ಪಾಕಿಸ್ತಾನವು ಎಚ್ಚರಿಸಿದೆ
ಈ ಸುದ್ದಿಯನ್ನೂ ಓದಿ: Iran: ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ