Site icon Vistara News

ISIS Terrorists: ಬಿಜೆಪಿ, ಆರ್ ಎಸ್ ಎಸ್ ನಾಯಕರ ಮೇಲೆ ಆತ್ಮಾಹುತಿ ದಾಳಿಗೆ ಸಂಚು ಮಾಡಿದ್ದ ಐಸಿಸ್ ಉಗ್ರರು; ಸೆರೆ ಸಿಕ್ಕಿದ್ದು ಹೇಗೆ?

ISIS Terrorists

4 Suspected ISIS Terrorists Arrested From Ahmedabad Airport, Believed To Be Sri Lankans

ಅಹಮದಾಬಾದ್: ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳವು (ATS) ಸರ್ದಾರ್‌ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Ahmedabad Airport) ಶ್ರೀಲಂಕಾದ ನಾಲ್ವರು ಉಗ್ರರನ್ನು (ISIS Terrorists) ಬಂಧಿಸಿದ್ದು, ನಾಲ್ವರೂ ತಮ್ಮ ಹ್ಯಾಂಡ್ಲರ್‌ಗಾಗಿ ಕಾಯುತ್ತಿರುವಾಗಲೇ ಅವರನ್ನು ಬಲೆಗೆ ಹಾಕಿದ್ದಾರೆ. ನಾಲ್ವರನ್ನೂ ವಿಚಾರಣೆಗೊಳಪಡಿಸಲಾಗಿದ್ದು ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಈ ನಾಲ್ವರನ್ನು ಚೆನ್ನೈ ಮೂಲಕ ಶ್ರೀಲಂಕಾದಿಂದ ಭಾರತಕ್ಕೆ ಕಳುಹಿಸಲಾಗಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುವ ಉದ್ದೇಶ ಇವರದ್ದಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಗ್ರರು ಸೆರೆ ಸಿಕ್ಕಿದ್ದು ಹೇಗೆ?

ಚೆನ್ನೈ ಮೂಲಕ ದೇಶದೊಳಗೆ ಐಸಿಸ್‌ ಉಗ್ರರು ಲಗ್ಗೆ ಇಟ್ಟಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ATSಗೆ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ATS ಎಲ್ಲಾ ರೈಲು, ವಿಮಾನ ಹಾಗೂ ರಸ್ತೆ ಮಾರ್ಗಗಳ ಮೇಲೆ ತೀವ್ರ ನಿಗಾ ಇರಿಸಿತ್ತು. ಚೆನ್ನೈನಿಂದ ಅಹಮದಾಬಾದ್‌ಗೆ ಇಂಡಿಗೋ 6E 848 ವಿಮಾನದಲ್ಲಿ ಬರುತ್ತಿರುವುದು ಖಚಿತಗೊಳ್ಳುತ್ತಿದ್ದಂತೆ ATS ಸಿಬ್ಬಂದಿ ಅಲರ್ಟ್‌ ಆಗಿದ್ದರು. ಅಹಮದಾಬಾದ್‌ನಲ್ಲಿ ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ನಾಲ್ವರನ್ನೂ ಹೆಡೆಮುರಿಕಟ್ಟುವಲ್ಲಿ ATS ಯಶಸ್ವಿಯಾಯ್ತು. ನಾಲ್ವರನ್ನು ವಿಚಾರಣೆಗೊಳಪಡಿಸಿದಾಗ ಅಹಮದಾಬಾದ್‌ನ ಚೊಟ್ಟಾ ಚಿಲೋಡಾ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದೀಗ ಅವುಗಳನ್ನೂ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಈ ನಾಲ್ವರು ಭಾರತಕ್ಕೆ ತಲುಪಲು ಸಹಾಯ ಮಾಡಿದ್ದವರ ಬೆನ್ನು ಹತ್ತಿ ATS ಕಾರ್ಯಾಚರಣೆ ಶುರು ಮಾಡಿದೆ.

36 ಗಂಟೆಗಳ ಸುದೀರ್ಘ ಕಾರ್ಯಾಚರಣೆ

ಗುಜರಾತ್‌ ಡಿಜಿಪಿ ವಿಕಾಸ್‌ ಸಹಯ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಶ್ರೀಲಂಕಾ ಮೂಲದ ಉಗ್ರರು ಮೊಹಮ್ಮದ್‌ ನುಸ್ರತ್‌, ಮೊಹಮ್ಮದ್‌ ಫರಿಶ್‌, ಮೊಹಮ್ಮದ್‌ ನಸ್ರನ್‌ ಮತ್ತು ಮೊಹಮ್ಮದ್‌ ರಶೀದ್‌ ಐಸಿಸ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ಇವರಿಗೆ ಮೇ 19ರಂದು ಭಾರತಕ್ಕೆ ತೆರಳಲು ಸೂಚನೆ ನೀಡಲಾಗಿದೆ ಎಂಬ ಬಗ್ಗೆ ATS ಡೆಪ್ಯೂಟಿ ಎಸ್‌ಪಿ ಹರ್ಷ್‌ ಉಪಾಧ್ಯಾಯ ಅವರಿಗೆ ಮಾಹಿತಿ ಲಭಿಸಿತ್ತು. ಹೀಗಾಗಿ ಕಾರ್ಯಪ್ರವೃತರಾಗಿದ್ದ ATSಅಧಿಕಾರಿಗಳು 36ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

ಬಿಜೆಪಿ, ಆರ್ ಎಸ್ ಎಸ್ ನಾಯಕರ ಮೇಲೆ ಆತ್ಮಾಹುತಿ ದಾಳಿಗೆ ಸಂಚು

ಇನ್ನು ವಿಚಾರಣೆ ವೇಳೆ ಉಗ್ರರು ಸ್ಫೋಟಕ ವಿಚಾರವೊಂದನ್ನು ಬಾಯ್ಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಯನ್ನೇ ಗುರಿಯನ್ನಾಗಿಸಿ ಭಾರತಕ್ಕೆ ಕಾಲಿಟ್ಟಿದ್ದ ಈ ಉಗ್ರರು ಬಿಜೆಪಿ, ಆರ್ ಎಸ್ ಎಸ್ ನಾಯಕರ ಮೇಲೆ ಆತ್ಮಾಹುತಿ ದಾಳಿಗೆ ಸಂಚು ಮಾಡಿದ್ದರು ಎನ್ನಲಾಗಿದೆ. ಈ ನಾಲ್ವರು ಕೊಲಂಬೋ ಮೂಲದವರಾಗಿದ್ದು, ತಮಿಳು ಮಾತನಾಡುತ್ತಾರೆ. ಅವರ ಬ್ಯಾಗ್‌ಗಳಿಂದ ಐಸಿಸ್‌ ಧ್ವಜ, ಮೊಬೈಲ್‌ ಫೋನ್‌ಗಳು, ಪಾಸ್‌ಪೋರ್ಟ್‌ಗಳನ್ನು ಎಟಿಎಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಈ ನಾಲ್ವರು ಪಾಕಿಸ್ತಾನ ಮೂಲದ ಅಬು ಜೊತೆ ಸಂಪರ್ಕ ಹೊಂದಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಇದನ್ನೂ ಓದಿ:MS Dhoni Bike Riding: ಐಪಿಎಲ್​ ಮುಗಿಸಿ ತವರಿಗೆ ಮರಳಿದ್ದೇ ತಡ, ಬೈಕ್ ರೈಡಿಂಗ್​ ಮಾಡಿದ ಧೋನಿ​

Exit mobile version