Site icon Vistara News

Israel Palestine War: ಹಮಾಸ್‌ ದಾಳಿಗೆ 300 ಸಾವು; ಇಸ್ರೇಲ್‌ನಲ್ಲಿ ಭಾರತದ ವಿದ್ಯಾರ್ಥಿಗಳು ಅತಂತ್ರ!

Indian Student In Israel

Israel Palestine War: Indian students stuck in Israel amid the Hamas group attacks

ಜೆರುಸಲೇಂ: ಇಸ್ರೇಲ್‌ ಮೇಲೆ ಸುಮಾರು 5 ಸಾವಿರಕ್ಕೂ ಅಧಿಕ ರಾಕೆಟ್‌ಗಳ ಮೂಲಕ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ನಡೆಸಿದ ದಾಳಿಯಿಂದಾಗಿ (Israel Palestine War) ಮೃತಪಟ್ಟವರ ಸಂಖ್ಯೆ 300 ದಾಟಿದೆ. ಟೆಲ್‌ಅವಿವ್‌ ಸೇರಿ ಇಸ್ರೇಲ್‌ನ ಹಲವು ನಗರಗಳ ಮೇಲೆ ನಡೆದ ದಾಳಿಗೆ ಜನ ಅಕ್ಷರಶಃ ನಲುಗಿಹೋಗಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ, ಉಗ್ರರ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಭಾರತದ ವಿದ್ಯಾರ್ಥಿಗಳು (Indian Students) ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೆರಾತ್‌ ವಿಶ್ವವಿದ್ಯಾಲಯ ಸೇರಿ ಹಲವೆಡೆ ಓದುತ್ತಿರುವ ಭಾರತದ ವಿದ್ಯಾರ್ಥಿಗಳು ಉಗ್ರರ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತ್ತಾರು ವಿದ್ಯಾರ್ಥಿಗಳು ನಿರಾಶ್ರಿತರಾಗಿದ್ದು, ಇಸ್ರೇಲ್‌ ಸೇನೆಯ ಆಶ್ರಯದಲ್ಲಿದ್ದಾರೆ. ಗೋಕು ಮನವಳನ್‌ ಎಂಬ ವಿದ್ಯಾರ್ಥಿಯು ಭಾರತದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ವಿವರಿಸಿದ್ದಾರೆ. “ನನಗೆ ತುಂಬ ಭಯವಾಗುತ್ತಿದೆ. ಪುಣ್ಯಕ್ಕೆ ಇಸ್ರೇಲ್‌ ಪೊಲೀಸರು ನಮಗೆ ಆಶ್ರಯ ನೀಡಿದ್ದಾರೆ. ಸದ್ಯದ ಮಟ್ಟಿಗೆ ನಾವು ಸುರಕ್ಷಿತವಾಗಿದ್ದರೂ ಭಯ ಇದೆ. ಭಾರತದ ರಾಯಭಾರ ಕಚೇರಿ ಜತೆ ಸಂಪರ್ಕದಲ್ಲಿದ್ದೇವೆ” ಎಂದು ತಿಳಿಸಿದ್ದಾರೆ.

ಅಡ್ವೈಸರಿ ಹೊರಡಿಸಿದ ರಾಯಭಾರ ಕಚೇರಿಗಳು

ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾದ ಕಾರಣ ಎರಡೂ ದೇಶಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳು ವಿದ್ಯಾರ್ಥಿಗಳಿಗೆ ಅಡ್ವೈಸರಿ ಹೊರಡಿಸಿವೆ. “ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನಲ್ಲಿರುವ ಭಾರತದ ವಿದ್ಯಾರ್ಥಿಗಳು ಹೆಚ್ಚಿನ ಮುಂಜಾಗ್ರತೆ ವಹಿಸಿ. ಯಾವುದೇ ಕಾರಣಕ್ಕೂ ಮನೆ, ಹಾಸ್ಟೆಲ್‌ಗಳಿಂದ ಹೊರಗೆ ಬರಬೇಡಿ. ಯಾವುದೇ ತುರ್ತು ಸಂದರ್ಭದಲ್ಲಿಯೂ ನೇರವಾಗಿ ರಾಯಭಾರ ಕಚೇರಿಗಳಿಗೆ ಕರೆ ಮಾಡಿ” ಎಂದು ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಅಡ್ವೈಸರಿ ಹೊರಡಿಸಿದ್ದಾರೆ.

ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ದಾಳಿಯ ವಿಡಿಯೊಗಳು

ಇದನ್ನೂ ಓದಿ: Nushrratt Bharuccha: ಹಮಾಸ್‌ ಉಗ್ರರ ದಾಳಿ; ಇಸ್ರೇಲ್‌ನಲ್ಲಿ ಬಾಲಿವುಡ್‌ ಖ್ಯಾತ ನಟಿ ನಾಪತ್ತೆ!

ಭಾರತದ ರಾಯಭಾರ ಕಚೇರಿ ವೆಬ್‌ಸೈಟ್‌ ಮಾಹಿತಿ ಪ್ರಕಾರ, ಇಸ್ರೇಲ್‌ನಲ್ಲಿ ಭಾರತ ಮೂಲದ 18 ಸಾವಿರ ಜನ ನೆಲೆಸಿದ್ದಾರೆ. ವಿದ್ಯಾರ್ಥಿಗಳು, ವಜ್ರದ ವ್ಯಾಪಾರಿಗಳು, ಐಟಿ ಉದ್ಯೋಗಿಗಳು ಸೇರಿ ಸಾವಿರಾರು ಜನ ಇಸ್ರೇಲ್‌ನಲ್ಲಿ ನೆಲೆಗೊಂಡಿದ್ದಾರೆ. ಆದರೆ, ಹಮಾಸ್‌ ಉಗ್ರರು ರಾಕೆಟ್‌ ಹಾಗೂ ಗುಂಡಿನ ದಾಳಿ ನಡೆಸುತ್ತಿರುವ ಕಾರಣ ಭಾರತ ಮೂಲದವರು, ಭಾರತದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಕಷ್ಟ ಎದುರಾಗಿದೆ.

Exit mobile version