ದುಬೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರ ಸ್ನೇಹದ ಬಗ್ಗೆ ಜಗತ್ತಿಗೇ ಗೊತ್ತಿದೆ. ಭಾರತದಲ್ಲಂತೂ ನರೇಂದ್ರ ಮೋದಿ (Narendra Modi) ಹಾಗೂ ಜಾರ್ಜಿಯಾ ಮೆಲೋನಿ ಅವರ ಅಸಂಖ್ಯಾತ ಟ್ರೋಲ್‌ಗಳು, ವಿಡಿಯೊಗಳು, ಹಾಡುಗಳು, ಮೀಮ್‌ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈಗ ಜಾರ್ಜಿಯಾ ಮೆಲೋನಿ ಅವರೇ ನರೇಂದ್ರ ಮೋದಿ ಜತೆ ಸೆಲ್ಫಿ ತೆಗೆಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೊ ಈಗ ವೈರಲ್ (Viral News) ಆಗಿದ್ದು, ಜನ “ಜಸ್ಟ್ ಲುಕ್ಕಿಂಗ್ ಲೈ ಎ ವಾವ್” ಎಂದು ಪ್ರತಿಕ್ರಿಯಿಸಿದ್ದಾರೆ.
ಯುಎಇ ದೇಶದ ರಾಜಧಾನಿ ದುಬೈನಲ್ಲಿ ನಡೆದ 28ನೇ ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್ (COP28) ಶೃಂಗಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. “ಸಿಒಪಿ28 ಸಭೆಯಲ್ಲಿ ಆತ್ಮೀಯ ಸ್ನೇಹಿತರು” ಎಂದು ಒಕ್ಕಣೆ ಬರೆದಿದ್ದಾರೆ. ಅಷ್ಟೇ ಅಲ್ಲ, ಮೆಲೋನಿ+ಮೋದಿ= ಮೆಲೋಡಿ ಎಂಬ ಅರ್ಥ ಬರುವ ಕಾರಣ ಮೆಲೋಡಿ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಈ ಫೋಟೊ ಭಾರಿ ವೈರಲ್ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.
Good friends at COP28.#Melodi pic.twitter.com/g0W6R0RJJo
— Giorgia Meloni (@GiorgiaMeloni) December 1, 2023
ಇದನ್ನೂ ಓದಿ: Giorgia Meloni On Modi: ವಿಶ್ವ ನಾಯಕರಲ್ಲೇ ಮೋದಿ ಹೆಚ್ಚು ಪ್ರೀತಿಪಾತ್ರರು, ಇಟಲಿ ಪ್ರಧಾನಿ ಮೆಲೋನಿ ಮೆಚ್ಚುಗೆ
“ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸುವ ಮೂಲಕ ಇತ್ತೀಚಿನ ಟ್ರೆಂಡ್ ಫಾಲೋ ಮಾಡಿದ್ದಾರೆ. “ಈ ಒಂದು ಫೋಟೊ ಎಲ್ಲ ವೈರಲ್ ರೆಕಾರ್ಡ್‌ಗಳನ್ನೂ ಮೀರಿಸುತ್ತದೆ” ಎಂದು ಮತ್ತೊಬ್ಬರು ಹೇಳಿದ್ದಾರೆ. “ಮೋದಿ ಹಾಗೂ ಮೆಲೋಡಿ ಜೋಡಿ ಚೆನ್ನಾಗಿದೆ” ಎಂದು ಇನ್ನೊಬ್ಬರು ಕಿಚಾಯಿಸಿದ್ದಾರೆ. ಹಾಗೆಯೇ ಸಾವಿರಾರು ಮೀಮ್‌ಗಳು, ಟ್ರೋಲ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
Just looking like a wow pic.twitter.com/cM0mhT1dbE
— Ambuj Mishra (@Ambujmishra9090) December 1, 2023
ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ
ಜಾರ್ಜಿಯಾ ಮೆಲೋನಿ ಅವರು ಇದಕ್ಕೂ ಮೊದಲು ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ