Site icon Vistara News

Bigg Boss OTT 2 : ಅರ್ಧ ನಿಮಿಷ ಲಿಪ್ ಲಾಕ್ ಕಿಸ್ ಮಾಡಿದ ಬಿಗ್‌ ಬಾಸ್ ಸ್ಪರ್ಧಿಗಳು

lip lock kissing in Big boss ott 2

ಮುಂಬೈ, ಮಹಾರಾಷ್ಟ್ರ: ಇತ್ತೀಚೆಗಷ್ಟೇ ಆರಂಭವಾಗಿರುವ ಬಿಗ್ ಬಾಸ್ ಒಟಿಟಿ-2 (Bigg Boss OTT 2) ಸಾಕಷ್ಟು ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ (Reality Show) ಸ್ಪರ್ಧಿಗಳು ಒಬ್ಬರಿಗೊಬ್ಬರು ಚುಂಬಿಸಿಕೊಳ್ಳುವುದು ಕಾಮನ್. ಆದರೆ, ಪ್ರಸಕ್ತ ನಡೆಯುತ್ತಿರುವ ಬಿಗ್ ಬಾಸ್ ಒಟಿಟಿ ಶೋನಲ್ಲಿ ನಡೆಸಲಾದ ಟಾಸ್ಕ್ ವೇಳೆ ಸ್ಪರ್ಧಿಗಳಿಬ್ಬರು ಪರಸ್ಪರ ಬರೋಬ್ಬರಿ 30 ಸೆಕೆಂಡ್ ಕಾಲ ಕಿಸ್ (Liplock Kiss) ಮಾಡಿದ ವಿಡಿಯೋ ಸಖತ್ ವೈರಲ್ ಆಗುತ್ತಿದೆ(Video Viral).

ಬಿಗ್ ಬಾಸ್ ಒಟಿಟಿ 2 ಸೀಸನ್‌ನಲ್ಲಿ ಸ್ಪರ್ಧಿಗಳಾಗಿರುವ ಆಕಾಂಕ್ಷಾ ಪುರಿ ಮತ್ತು ಜಡ್ ಹದಿದ್ ಅವರು ಟಾಸ್ಕ್ ವೇಳೆ ಪರಸ್ಪರ ಕಿಸ್ಸಿಂಗ್ ಮಾಡಿದ್ದಾರೆ. ನಡೆಯುತ್ತಿರುವ ಡೈನಾಮಿಕ್ಸ್ ವಾರ್ ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿದೆ. ದಿನದಿಂದ ದಿನಕ್ಕೆ ಈ ರಿಯಾಲಿಟಿ ಶೋ ಹೆಚ್ಚು ಗಮನ ಸೆಳೆಯುತ್ತಿದೆ. ಅಂದ ಹಾಗೆ, ಸಲ್ಮಾನ್ ಖಾನ್ ಅವರೇ ಇಲ್ಲೂ ನಿರೂಪಣೆ ಮಾಡುತ್ತಿದ್ದಾರೆ.

ಬಿಗ್ ಬಾಸ್ ಸ್ಪರ್ದಿಗಳು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್

ಈ ಸುದ್ದಿಯನ್ನೂ ಓದಿ: Bigg Boss OTT 2: ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ 12 ಗಂಟೆಯಲ್ಲೇ ಔಟ್‌; ದಾಖಲೆ ಮಾಡಿದ ಈ ಸೂಪರ್‌ ಸ್ಟಾರ್‌ ಯಾರು?

ಪ್ರಸಕ್ತ ಸೀಸನ್ ಆರಂಭವಾದಾಗಿನಿಂದಲೂ ಜಡ್ ಹದಿದ್ ಅವರು ಮತ್ತೊಬ್ಬ ಸ್ಪರ್ಧಿ ಆಕಾಂಕ್ಷಾ ಪುರಿ ಅವರ ಮೇಲೆ ಆಕರ್ಷಣೆ ಬೆಳೆಸಿಕೊಂಡಿರುವುದು ನೋಡುಗರ ಗಮನಕ್ಕೆ ಬಂದಿತ್ತು. ಈಗ ಟಾಸ್ಕ್ ವೇಳೆ, ಅವರಿಬ್ಬರೂ ಪರಸ್ಪರ ಕಿಸ್ಸಿಂಗ್ ಮಾಡಿರುವುದು, ಅವರಿಬ್ಬರ ನಡುವಿನ ಸಂಬಂಧಕ್ಕೆ ಮುದ್ರೆ ಬಿದ್ದಂತಾಗಿದೆ ಎಂದು ನೋಡಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ಕಿಸ್ಸಿಂಗ್ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ.

ಜಡ್ ಹದಿದ್, ಆಕಾಂಕ್ಷಾ ಪುರಿ ಜತೆಗೆ ಪಾಲಕ್ ತಿವಾರಿ, ಜನ್ನತ್ ಜುಬೇರ್ ರೆಹಮಾನಿ, ಸುರಭಿ ಜ್ಯೋತಿ, ಅಂಜಲಿ ಅರೋರಾ, ಅಲಿಯಾ ಸಿದ್ದಿಕಿ ಸೇರಿ 12 ಸ್ಪರ್ಧಿಗಳು ಬಿಗ್ ಬಾಸ್ ಒಟಿಟಿ – 2ರಲ್ಲಿದ್ದಾರೆ. ಈ ರಿಯಾಲಿಟಿ ಶೋ ಜಿಯೋ ಸಿನಿಮಾ ಆ್ಯಪ್‌ನಲ್ಲಿ ಪ್ರಸಾರವಾಗುತ್ತಿದೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version