ಲೋಕಸಭಾ ಚುನಾವಣೆ ಬಳಿಕ ನಡೆದ 2 ರಾಜ್ಯಗಳ ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu-Kashmir Election) ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮೈತ್ರಿ ಸಕ್ಸಸ್ ಆಗಿದ್ದರೆ ಈ ಬಾರಿ ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಬರಲಿದೆ ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ಕಾಶ್ಮೀರದಲ್ಲಿ 3 ಹಂತದಲ್ಲಿ ಚುನಾವಣೆ ನಡೆದಿದ್ರೆ, ಹರಿಯಾಣದ 90 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಎಲ್ಲಾ ಚುನಾವನೋತ್ತರ ಸಮೀಕ್ಷೆಗಳು ಸಹ ಕಾಶ್ಮೀರದಲ್ಲಿ ಅತಂತ್ರವಾಗಿದೆ. ಹರ್ಯಾಣದಲ್ಲಿ ಈ ಬಾರಿ ಕಾಂಗ್ರೆಸ್ ಗೆ ಅಧಿಕಾರ ಫಿಕ್ಸ್ ಎಂದು ಭವಿಷ್ಯ ನುಡಿದಿದ್ವು. ಅದರಂತೆ ಫಲಿತಾಂಶದ ದಿನವಾದ ಗುರುವಾರ, ಹರ್ಯಾಣದಲ್ಲಿ ಕಾಂಗ್ರೆಸ್ ಪ್ರಾರಂಭದಲ್ಲಿ ಗೆಲ್ಲುವ ಹುಮ್ಮಸ್ಸಿದ್ದರೂ, 10.30 ಆಗುತ್ತಿದ್ದಂತೆ ಲೆಕ್ಕಾಚಾರವೇ ಬೇರೆ ಆಗೋಗಿತ್ತು.
ಆಡಳಿತ ವಿರೋಧಿ ಅಲೆ, 2 ಬಾರಿ ಬಿಜೆಪಿ ಅಧಿಕಾರ ನಡೆಸಿದೆ. ಈ ಬಾರಿ ಹರಿಯಾಣ ಜನ ಬದಲಾವಣೆ ಬಯಸಿದ್ದಾರೆ ಅನ್ನುವಷ್ಟರಲ್ಲಿ ಮತ್ತೆ ಬಿಜೆಪಿ ಮುನ್ನಡೆ ಸಾಧಿಸಿತ್ತು. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ NC ಮೈತ್ರಿ ವರ್ಕೌಟ್ ಆಗಿ ಅಧಿಕಾರ ದೊರೆತಿದ್ರೆ, ಬಿಜೆಪಿ ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡಿದೆ. ಆದರೆ ಮೆಹಬೂಬ ಮಫ್ತಿರ ಪಿಡಿಪಿ ಪಕ್ಷ ಮಾತ್ರ ಎರಡಂಕಿ ದಾಟುವಲ್ಲೂ ಸಹ ಯಶಸ್ವಿಯಾಗಿಲ್ಲ.
ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಕಾರಣಗಳೇನು?
-ಪ್ರಬಲ ಆಡಳಿತ ವಿರೋಧಿ ಅಲೆಯನ್ನ ಚುನಾವಣಾ ಸಂಧರ್ಭದಲ್ಲಿ ಎದುರುಸಿರುವುದು
-ಕಳೆದ ಸರ್ಕಾರದಲ್ಲಿ ಮನೋಹರ್ ಲಾಲ್ ಖಟ್ಟರ್ ಅವರ ಬದಲಿಗೆ ನಯಾಬ್ ಸಿಂಗ್ ಸೈನಿ ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವುದು
-ಸೈನರನ್ನ ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಮೂಲಕ ಬಿಜೆಪಿ ಒಬಿಸಿ ಪರವಾಗಿ ಇದೇ ಎಂಬ ಸಂದೇಶ ರವಾನೆ
-ಒಬಿಸಿ ಸಮುದಾಯದ ಮೊದಲ ಮುಖ್ಯಮಂತ್ರಿಯಾಗಿ ಹರ್ಯಾಣದಲ್ಲಿ ಸೈನಿ ನೇಮಕ
-ಜಾಟ್ ಸಮುದಾಯದ ಕೆಂಗಣ್ಣಿಗೆ ಬಿಜೆಪಿ ಗುರಿಯಾಗಿದ್ದರು ಸಹ, ಜಾಟ್ ಸಮುದಾಯ ಹೊರತುಪಡಿಸಿ ಬೇರೆ ಸಮುದಾಯದ ವೋಟ್ ಬ್ಯಾಂಕ್ ಭದ್ರಪಡಿಸಿಕೊಂಡಿದ್ದು
-ಹರಿಯಾಣದಲ್ಲಿ 30% ಜಾಟ್, 34% ಒಬಿಸಿ, ದಲಿತರು 16%, ಮತ್ತು 23% ಪಂಜಾಬಿಗಳು ಹಾಗೂ ಬ್ರಾಹ್ಮಣರು, ರಜಪೂತರು, ಅಗರ್‌ವಾಲ್‌ಗಳು, ಅಹಿರ್, ಗುಜ್ಜರ್ ಮತ್ತು ಸೈನಿಗಳು ಹರಿಯಾಣದಲ್ಲಿ ಸುಮಾರು 11% ಜನಸಂಖ್ಯೆ ಹೊಂದಿದೆ.
-ಜಾತಿ ಲೆಕ್ಕಾಚಾರ ಬಿಜೆಪಿಯ ಕೈ ಹಿಡಿದಿರುವುದು
-ಜಾಟ್ ಸಮುದಾಯ ಹೊರತುಪಡಿಸಿ, ಒಬಿಸಿ ಹಾಗೂ ದಲಿತ ವೋಟ್ ಗಳನ್ನ ಭದ್ರಪಡಿಸಿಕೊಂಡಿದ್ದು
-ಮುಖ್ಯಮಂತ್ರಿಯಾಗಿ ಸೈನಿ 70 ದಿನಗಳ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಆಡಳಿತ ಶೈಲಿ
-ಪ್ರಧಾನಿ ಮೋದಿ ಭಾಷಣ ಹಾಗೂ ಅಮಿತ್ ಶಾ ಮತ್ತು ಮೋದಿ ಒಟ್ಟಾರೆ ನಡೆಸಿದ್ದ 14 ರೋಡ್ ಶೋಗಳು
-ರೈತಾಪಿ ವರ್ಗದಿಂದ ಬಿಜೆಪಿ ಮೇಲಿದ್ದ ಕೋಪ ಹಾಗೂ ಅಗ್ನಿವೀರ್ ಯೋಜನೆ ಬಗ್ಗೆ ಇದ್ದ ಕಳವಳ ನಿವಾರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳೇನು?
-ಬಿಜೆಪಿಗಿದ್ದ ಆಡಳಿತ ವಿರೋಧಿ ಅಲೆಯನ್ನ ಸದುಪಯೋಗಪಡಿಸಿಕೊಳ್ಳದಿರುವುದು
-ಜಾಟ್ ಸಮುದಾಯದ ಮೇಲಿನ ಅತಿಯಾದ ನಂಬಿಕೆ ಹಾಗೂ ಜಾಟ್ ವೋಟ್ ಗಳ ಮೇಲೆಯೇ ಹೆಚ್ಚು ನಿಗಾ ವಹಿಸಿದ್ದು
-ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ದಲಿತ ಮತಗಳ ಕ್ರೂಡಿಕರಣಕ್ಕೆ ಪ್ರಯತ್ನಿಸಿದ್ದಾದರೂ, ಸ್ಥಳೀಯ ನಾಯಕರು ಈ ಬಗ್ಗೆ ಗಮನ ಹರಿಸದಿರುವುದು
-ಜಾಟ್ ಮತಗಳ ಮೇಲಿನ ಅವಲಂಬನೆ, ಒಳಜಗಳ, ಹೂಡಾಗಳ ಮೇಲಿನ ಅತಿಯಾದ ಅವಲಂಬನೆ
-ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹ ಜನರಿಗೆ ಬೇಸರ ತರಿಸಿತ್ತು
-ದಲಿತ ನಾಯಕಿ ಮತ್ತು ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ಮತ್ತು ಮಾಜಿ ಸಿಎಂ ಮತ್ತು ಜಾಟ್ ನಾಯಕ ಭೂಪಿಂದರ್ ಸಿಂಗ್ ಹೂಡಾ ನಡುವಿನ ಕಲಹವು ಸೋಲಿಗೆ ಪ್ರಮುಖ ಕಾರಣ
-ಕಾಂಗ್ರೆಸ್ ದಲಿತ ವಿರೋಧಿ ಎಂದು ಆರೋಪಿಸಿದಾಗ, ಸರಿಯಾಗಿ ರಾಜ್ಯ ನಾಯಕರು ಬಿಜೆಪಿಗೆ ಕೌಂಟರ್ ನೀಡದಿರುವುದು
-ಅಭ್ಯರ್ಥಿ ಆಯ್ಕೆ ಬಳಿಕ ಬಂಡಾಯವನ್ನ ಶಮನ ಮಾಡಲು ವಿಫಲ ಆಗಿರುವುದು
-ಲೋಕಸಭೆ ಚುನಾವಣೆಯಲ್ಲಿ 10 ಕ್ಷೇತ್ರದ ಪೈಕಿ ಕಾಂಗ್ರೆಸ್ 5 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು, ಈ ಅತಿಯಾದ ಆತ್ಮವಿಶ್ವಾಸ ಸಹ ಸೋಲಿಗೆ ಕಾರಣ
-ಪರಿಣಾಮಕಾರಿಯಲ್ಲದ ಪ್ರಚಾರ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ನೀಡದಿರುವುದು