ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ(Jammu-Kashmir Election)ಗೆ ಬಿಜೆಪಿ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಮೊದಲ ಪಟ್ಟಿ(Candidates List)ಯನ್ನು ಒಂದೇ ಗಂಟೆಯಲ್ಲಿ ಹಿಂಪಡೆದಿದೆ. ಇಂದು ಬೆಳಗ್ಗೆ ಬಿಜೆಪಿ ಒಟ್ಟು 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದಾದ ಒಂದೇ ಗಂಟೆಯಲ್ಲಿ ಪಟ್ಟಿಯನ್ನು ಹಿಂಡಪೆದಿರುವುದಾಗಿ ಬಿಜೆಪಿ ಘೋಷಿಸಿದೆ.
ಪಕ್ಷವು ಜಮ್ಮು ಪ್ರದೇಶದಿಂದ 37 ಮತ್ತು ಕಾಶ್ಮೀರ ಕಣಿವೆಯಿಂದ ಏಳು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿತ್ತು. ಇದರಲ್ಲಿ ಇಬ್ಬರು ಕಾಶ್ಮೀರಿ ಪಂಡಿತರಾದ ವೀರ್ ಸರಾಫ್ ಮತ್ತು ಅಶೋಕ್ ಭಟ್ ಹೆಸರೂ ಸೇರಿತ್ತು. ಇನ್ನು ಈ ಮೊದಲ ಪಟ್ಟಿಯನ್ನು ಹಿಂಪಡೆಯಲು ಮೂಲ ಕಾರಣವೇನೆಂದರೆ ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸುವ ಹೆಸರುಗಳನ್ನು ಮಾತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು, ಆದರೆ ಪಕ್ಷವು ತಪ್ಪಾಗಿ ಉಳಿದ ಎರಡು ಹಂತಗಳ ಅಭ್ಯರ್ಥಿಗಳ ಪಟ್ಟಿಯನ್ನೂ ರಿಲೀಸ್ ಮಾಡಿತ್ತು. ಹೀಗಾಗಿ ಪಟ್ಟಿಯನ್ನು ಹಿಂಪಡೆಯಲಾಗಿದೆ.
ಹೀಗೆ ಹಿಂಪಡೆದಿರುವ ಪಟ್ಟಿಯಲ್ಲಿ, ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮತ್ತು ಮಾಜಿ ಸಚಿವರಾದ ಸತ್ ಪಾಲ್ ಶರ್ಮಾ, ಪ್ರಿಯಾ ಸೇಥಿ ಮತ್ತು ಶಾಮ್ ಲಾಲ್ ಚೌಧರಿ ಸೇರಿದಂತೆ ಹಿರಿಯ ನಾಯಕರ ಹೆಸರುಗಳಿವೆ.
BJP withdraws first list of 44 candidates released for upcoming J&K Assembly Elections; BJP to amend and release the list of candidates again pic.twitter.com/X9tqVoZ9Zv
— ANI (@ANI) August 26, 2024
2019 ರಲ್ಲಿ ತನ್ನ ವಿಶೇಷ ಸ್ಥಾನಮಾನವನ್ನು ಕಳೆದುಕೊಂಡು ಎರಡು ಭಾಗಗಳಾಗಿ ವಿಭಜನೆಯಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಇದು ಮೊದಲ ಅಸೆಂಬ್ಲಿ ಚುನಾವಣೆಯಾಗಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಮುಂಬರುವ ಚುನಾವಣೆಗೆ ಪಕ್ಷದ ಚುನಾವಣಾ ಆಯ್ಕೆಗಳನ್ನು ಅಂತಿಮಗೊಳಿಸಿದ ನಂತರ ಇಂದು ಬೆಳಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿನ್ನೆ ದೆಹಲಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಭಾಗಿಯಾಗಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವಿಧಾನಸಭೆ ಚುನಾವಣೆ 2014 ರಲ್ಲಿ ನಡೆದಿತ್ತು. 2014 ರ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. PDP 28 ಗೆಲುವಿನೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನ್ಯಾಷನಲ್ ಕಾನ್ಫರೆನ್ಸ್ 15 ಸ್ಥಾನಗಳನ್ನು ಗೆದ್ದಿತು ಮತ್ತು ಕಾಂಗ್ರೆಸ್ 12 ಸ್ಥಾನಗಳನ್ನು ಗಳಿಸಿತು. ಚುನಾವಣೆಯ ನಂತರ, 2016 ರಲ್ಲಿ ಮುಫ್ತಿ ಮೊಹಮ್ಮದ್ ಸಯೀದ್ ಮತ್ತು ನಂತರ ಮೆಹಬೂಬಾ ಮುಫ್ತಿ ಅವರ ಮರಣದ ನಂತರ ಬಿಜೆಪಿ ಮತ್ತು ಪಿಡಿಪಿ ಅನಿರೀಕ್ಷಿತ ಮೈತ್ರಿ ಸರ್ಕಾರವನ್ನು ರಚಿಸಿದವು. ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ, ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ನಡುವೆ ತ್ರಿಪಕ್ಷೀಯ ಸ್ಪರ್ಧೆ ಏರ್ಪಟ್ಟಿದೆ.
ಇದನ್ನೂ ಓದಿ: Jammu-Kashmir Election: ಜಮ್ಮು-ಕಾಶ್ಮೀರ ಚುನಾವಣೆ-ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್